ಸಾಹಸ ಪ್ರಿಯರಿಗಾಗಿ ರೆನೊ ಡಸ್ಟನ್ ಅಡ್ವೆಂಚರ್ ಎಡಿಷನ್ ಬಿಡುಗಡೆ
ಹಬ್ಬದ ಆವೃತ್ತಿಯ ಸಂಭ್ರಮದಲ್ಲಿರುವ ದೇಶದ ನಿವಾಸಿಗಳಿಗಾಗಿ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಅತಿ ನೂತನ ಡಸ್ಟರ್ ಅಡ್ವೆಂಚರ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 9.64 ಲಕ್ಷ ರು.ಗಳಿಂದ 13.77 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಗಳ 84 ಹಾಗೂ 108 ಅಶ್ವಶಕ್ತಿ ವೆರಿಯಂಟ್ ಗಳಲ್ಲಿ ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಭ್ಯವಾಗಲಿದೆ. ಈ ಪೈಕಿ 108 ಬಿಎಚ್ ಪಿ ಅಡ್ವೆಂಚರ್ ಆವೃತ್ತಿಯು ಆಳ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ.

ರೆನೊ ಡಸ್ಟರ್ ಅಡ್ವೆಂಚರ್ ಆವೃತ್ತಿಯು ವಿಶಿಷ್ಟ ಗ್ರಿಲ್ ಜೊತೆ ಕ್ರೋಮ್, ಹಳದಿ ವರ್ಣದ ಸ್ಕಿಡ್ ಪ್ಲೇಟ್, ಫ್ರಂಟ್ ಬಂಪರ್ ಹಾಗೂ ಫಾಗ್ ಲ್ಯಾಂಪ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ವೀಲ್ ಆರ್ಚ್ ಹಾಗೂ ಗನ್ ಮೆಟಲ್ ಅಲಾಯ್ ವೀಲ್ ಗಳು ಸಹ ಸ್ಟಾಂಡರ್ಡ್ ಡಸ್ಟರ್ ಆವೃತ್ತಿಗಿಂತಲೂ ವಿಭಿನ್ನತೆಯನ್ನು ಕಾಪಾಡಿಕೊಂಡಿದೆ.

ಡಿ ಪಿಲ್ಲರ್ ನಲ್ಲಿ ಅಡ್ವೆಂಚರ್ ಲಾಂಛನ ಕೂಡಾ ಅಂಟಿಸಲಾಗಿದೆ. ಇದು ಸಾಹಸ ಆವೃತ್ತಿಯು ವಿಶಿಷ್ಟವಾಗಿ ಗುರುತಿಸಲು ಸಹಕಾರಿಯಾಗಲಿದೆ.

ಕಾರಿನೊಳಗೆ ಡೆನಿಮ್ ಹೋದಿಕೆ, ಹೊಸ ಡೋರ್ ಪಟ್ಟಿ, ಇನ್ಸ್ಟ್ರುಮೆಂಟ್ ಪ್ಯಾನೆಲ್ ಮತ್ತು ಎಸಿಯಲ್ಲಿ ಹಳದಿ ಕಹಳೆ, ಸ್ಟೀರಿಂಗ್ ವೀಲ್ ಮತ್ತು ಫ್ಲೋರ್ ಮ್ಯಾಟ್ ನಲ್ಲಿ ಅಡ್ವೆಂಚರ್ ಉಲ್ಲೇಖವಿರಲಿದೆ.

ಹೊಸ ಡಸ್ಟರ್ ಅಡ್ವೆಂಚರ್ ಎಡಿಷನ್ ನಲ್ಲಿ ಸ್ಟೋನ್ ವಾಶ್ಡ್ ಡೆನಿಮ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ತೆಗೆದು ಒಗೆಯಬಹುದಾಗಿದೆ.

ನಾಲ್ಕು ಆಕರ್ಷಕ ಬಣ್ಣಗಳು
ಪಿಯರ್ಲ್ ವೈಟ್,
ಮೂನ್ ಲೈಟ್ ಸಿಲ್ವರ್,
ಔಟ್ ಬ್ಯಾಗ್ ಬ್ರೌನ್ಜ್,
ಸ್ಲೇಟ್ ಗ್ರೇ.

ನೂತನ ಡಸ್ಟರ್ ಅಡ್ವೆಂಚರ್ ಎಡಿಷನ್ ನಲ್ಲಿ ಸ್ಮಾರ್ಟ್ ಆಪ್ ಎಂಬ ತಾಜಾ ಡಾಟಾ ಸೇವೆಯನ್ನು ನೀಡಲಾಗುತ್ತದೆ. ಇದು ಬ್ಲೂಟೂತ್ ಡಾಂಗಲ್ ಮುಖಾಂತರ ಸ್ಮಾರ್ಟ್ ಫೋನ್ ಸಂಪರ್ಕಿಸಿ ಚಾಲಕರಿಗೆ ಗಂಟೆಗೆ 0-60 ಕೀ.ಮೀ. ವೇಗವನ್ನು ದಾಖಲಿಸಲು ನೆರವಾಗಲಿದೆ. ಇನ್ನು ವೇಗ ಮಿತಿ ದಾಟಿದ್ದಲ್ಲಿ ಎಚ್ಚರಿಕೆಯನ್ನು ನೀಡಲಿದೆ. ಪ್ರಸ್ತುತ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿರುತ್ತದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಡಸ್ಟರ್ ಅಡ್ವೆಂಚರ್ ಎಡಿಷನ್ ಆರ್ ಎಕ್ಸ್ ಇ (85 ಪಿಎಸ್): 9.64 ಲಕ್ಷ ರು.
ಡಸ್ಟರ್ ಅಡ್ವೆಂಚರ್ ಎಡಿಷನ್ ಆರ್ ಎಕ್ಸ್ ಎಲ್ (85 ಪಿಎಸ್): 10.45 ಲಕ್ಷ ರು.
ಡಸ್ಟರ್ ಅಡ್ವೆಂಚರ್ ಎಡಿಷನ್ ಆರ್ ಎಕ್ಸ್ ಝಡ್ ಆಲ್ ವೀಲ್ ಡ್ರೈವ್ (110 ಪಿಎಸ್): 13.77 ಲಕ್ಷ ರು.

ಇವನ್ನೂ ಓದಿ:
01. ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು?
02. ಅಚ್ಚರಿ! 100 ಕೀ.ಮೀ. ಮೈಲೇಜ್ ನೀಡುವ ರೆನೊ ಎಲೊಬ್
03. 2016-17ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ರೆನೊ ಕಾರುಗಳು


Click it and Unblock the Notifications








