ಆಲ್ಟೊ ಬೇಟೆಗೆ ಮುಂದಾದ ರೆನೊ ಕ್ವಿಡ್ ಸಕತ್ ಫೇಮಸ್

By Nagaraja

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಭರ್ಜರಿ ಬೇಟೆ ನಡೆಸುತ್ತಿರುವ ರೆನೊ ಕ್ವಿಡ್ ಸಣ್ಣ ಕಾರು, ಎರಡನೇ ಬಾರಿಗೆ ತಿಂಗಳೊಂದರಲ್ಲೇ 10,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸುವ ಮೂಲಕ ನೂತನ ಸಾಧನೆ ಮಾಡಿದೆ. ಎಂಟ್ರಿ ಲೆವೆಲ್ ವಿಭಾಗದಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ರೆನೊ ಕ್ವಿಡ್ 10,000 ಮಾರಾಟ ಸಂಖ್ಯೆಯನ್ನು ದಾಟುವ ಮೂಲಕ ದೇಶದ ನಂ.1 ಸಂಸ್ಥೆಗೆ ಬಿಸಿ ಮುಟ್ಟಿಸಿದೆ. ಇಲ್ಲಿ ಮಾರುತಿ ಸುಜುಕಿ ಆಲ್ಟೊ ತಿಂಗಳೊಂದರಲ್ಲಿ ಸರಾಸರಿ 15,000 ಯುನಿಟ್ ಗಳಿಂದ 20,000 ಯುನಿಟ್ ಗಳ ಮಾರಾಟ ದಾಖಲಿಸುತ್ತಿರುವುದು ಗಮನಾರ್ಹವೆನಿಸುತ್ತದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

2016 ಆಗಸ್ಟ್ ತಿಂಗಳಲ್ಲಿ 10,719 ಯುನಿಟ್ ಗಳ ಮಾರಾಟ ದಾಖಲಿಸಿಕೊಂಡಿರುವ ಕ್ವಿಡ್ ಈಗ ತನ್ನದೇ ಮಾರಾಟ ಸಂಖ್ಯೆಯನ್ನು ಉತ್ತಮಪಡಿಕೊಂಡಿದೆ. ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ 12,300 ಯುನಿಟ್ ಗಳ ಮಾರಾಟವನ್ನು ತಲುಪಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ಕಳೆದ ವರ್ಷ ಇದೇ ಅವಧಿಯಲ್ಲಿ ರೆನೊ ಕ್ವಿಡ್ 1781 ಯುನಿಟ್ ಗಳಷ್ಟು ಮಾರಾಟ ದಾಖಲಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಅಂದರೆ ಕಳೆದೊಂದು ವರ್ಷದ ಅವಧಿಯಲ್ಲಿ ಶೇಕಡಾ 590ರಷ್ಟು ಭರ್ಜರಿ ನೆಗೆತ ಕಂಡಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ರೆನೊ ಕ್ವಿಡ್ ಇದುವರೆಗೆ 1.65 ಲಕ್ಷ ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ. ಈ ಪೈಕಿ ಪ್ರಸಕ್ತ ಸಾಲಿನ ಮೊದಲ ಎಂಟು ತಿಂಗಳಲ್ಲೇ 65,000 ಯುನಿಟ್ ಗಳನ್ನು ಗ್ರಾಹಕರಿಗೆ ಹಂಚಿಕೊಳ್ಳಲಾಗಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಯಶಸ್ವಿ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿರುವ ರೆನೊ ಕ್ವಿಡ್ ಪ್ರಮುಖವಾಗಿಯೂ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ಇದರ 799 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೆಚ್ಚು ಶಕ್ತಿಶಾಲಿ 999 ಸಿಸಿ ತ್ರಿ ಸಿಲಿಂಡರ್ ಎಂಜಿನ್ 91 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ನೀಡಲಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ರೆನೊ ಕ್ವಿಡ್ 799 ಸಿಸಿ ಹಾಗೂ 1.0 ಲೀಟರ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 25.17 ಹಾಗೂ 23.01 ಕೀ.ಮೀ. ಇಂಧನ ಕ್ಷಮತೆ ನೀಡುವಷ್ಟು ಸಕ್ಷಮವಾಗಿರಲಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ಎಸ್ ಯುವಿ ಶೈಲಿಯ ಹೊರತಾಗಿ ಏಳು ಇಂಚುಗಳ ಟಚ್ ಸ್ಕ್ರೀನ್ ಮೀಡಿಯಾ ನೇವ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಒನ್ ಟಚ್ ಲೇನ್ ಚೇಂಜ್ ಇಂಡಿಕೇಟರ್, ಪ್ರೊ ಸೆನ್ಸ್ ಸೀಟ್ ಬೆಲ್ಟ್ ಪ್ರಿಟೆನ್ಷನರ್, ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್ ಹಾಗೂ ಢಿಕ್ಕಿ ಜಾಗಗಳನ್ನು ಪಡೆದಿದೆ.

ಮುಂದುವರಿದ ಆಲ್ಟೊ ಬೇಟೆ; ರೆನೊ ಕ್ವಿಡ್ ಸಕತ್ ಫೇಮಸ್

ರೆನೊ ಕ್ವಿಡ್ ನಿರ್ಮಾಣವನ್ನು ಶೇಕಡಾ 98ರಷ್ಟು ಸ್ಥಳೀಯವಾಗಿಸಲಾಗಿರುವುದು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿತ್ತು. ಇದರ 0.8 ಹಾಗೂ 1.0 ಲೀಟರ್ ಆವೃತ್ತಿಗಳು ಅನುಕ್ರಮವಾಗಿ 2.64 ಹಾಗೂ 3.82 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

More from DriveSpark

Article Published On: Saturday, October 8, 2016, 11:12 [IST]
English summary
Kwid Continues Its Winning Streak For The French Automaker
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+