ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

By Nagaraja

ಫ್ರಾನ್ಸ್ ಮೂಲದ ದೈತ್ಯ ವಾಹನ ಸಂಸ್ಥೆ ರೆನೊ ಕಳೆದ ವರ್ಷ ಕ್ವಿಡ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಪ್ರಮುಖವಾಗಿಯೂ ದೇಶದ ನಂ.1 ಮಾರುತಿ ಆಲ್ಟೊಗೆ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದೆ.

ಈಗ ಹಂತವಾಗಿ ಮಾರುತಿ ಪ್ರಾಬಲ್ಯವನ್ನು ಕೊನೆಗಾಣಿಸಲು ಹೊರಡಿರುವ ರೆನೊ ಸಂಸ್ಥೆಯು ನಿಕಟ ಭವಿಷ್ಯದಲ್ಲಿ ಮತ್ತೆರಡು ಕ್ವಿಡ್ ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಈ ಮೂಲಕ ತಾಜಾತನ ಕಾಪಾಡುವುದರೊಂದಿಗೆ ಹೆಚ್ಚಿನ ಮಾರಾಟವನ್ನು ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ರೆನೊ ಸಂಸ್ಥೆಯು 2017ನೇ ಸಾಲಿನಲ್ಲಿ ಕ್ವಿಡ್ ಕ್ಲೈಂಬರ್ ಮತ್ತು ಕ್ವಿಡ್ ರೇಸರ್ ಗಳೆಂಬ ಎರಡು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ಹಾಗಿದ್ದರೂ ಬಿಡುಗಡೆ ದಿನಾಂಕ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಸ್ಥೆಯು ಬಹಿರಂಗಪಡಿಸಿಲ್ಲ. ಇವೆರಡು ವಿಶೇಷ ದರಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ಕ್ವಿಡ್ ಕ್ಲೈಂಬರ್ ಹೆಚ್ಚು ಆಫ್ ರೋಡ್ ಸ್ನೇಹಿ ಕಾರು ಎನಿಸಿಕೊಳ್ಳಲಿದೆ. ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಜೊತೆಗೆ ಆಫ್ ರೋಡ್ ಚಕ್ರಗಳು ಇದಕ್ಕೆ ಜೋಡಣೆಯಾಗಲಿದೆ. ಹಾಗೆಯೇ ಕಾರಿನೊಳಗೆ ಕೇಸರಿ ಮಿಶ್ರಿತ ವರ್ಣವು ಕಂಡುಬರಲಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ಇನ್ನೊಂದೆಡೆ ಟ್ರ್ಯಾಕ್ ಸ್ನೇಹಿ ಕ್ವಿಡ್ ರೇಸರ್ ಆವೃತ್ತಿಯು ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಮತ್ತು ಹೆಚ್ಚು ಅಗಲವಾದ ಬಂಪರ್ ಗಳನ್ನು ಪಡೆಯಲಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ರೇಸಿಂಗ್ ಗೆ ತಕ್ಕವಾದ ಬಕೆಟ್ ಸೀಟು, 18 ಇಂಚುಗಳ ಅಲಾಯ್ ಚಕ್ರಗಳು, ನೀಲಿ ಮೆಟ್ಯಾಲಿಕ್ ಬಣ್ಣ ಇತ್ಯಾದಿ ವೈಶಿಷ್ಟ್ಯಗಳು ಇದರ ಪ್ರಮುಖ ಆಕರ್ಷಣೆಯಾಗಲಿದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ಈ ಎರಡು ವಿಶೇಷ ಆವೃತ್ತಿಗಳು ಹೆಚ್ಚು ಶಕ್ತಿಶಾಲಿ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಅಲ್ಲದೆ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

2016 ಆಟೋ ಎಕ್ಸ್ ಪೋದಲ್ಲಿ ರೆನೊ ಕ್ಲೈಂಬರ್ ಮತ್ತು ರೇಸರ್ ಮಾದರಿಗಳನ್ನು ರೆನೊ ಸಂಸ್ಥೆಯು ಮೊದಲ ಬಾರಿಗೆ ಅನಾವರಣಗೊಳಿಸಿತ್ತು.

ಮಾರುತಿ ಮಟ್ಟ ಹಾಕಲು ಬರುತ್ತಿದೆ ಮತ್ತೆರಡು ಕ್ವಿಡ್ ಆವೃತ್ತಿಗಳು

ಅಂದ ಹಾಗೆ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಈಸಿ-ಆರ್ ಗೇರ್ ಬಾಕ್ಸ್ ಹೊಂದಿರುವ ರೆನೊ ಕ್ವಿಡ್ ಎಎಂಟಿ ಮತ್ತು ಹೆಚ್ಚು ಶಕ್ತಿಶಾಲಿ 1.0 ಲೀಟರ್ ಆವೃತ್ತಿಗಳು ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

More from DriveSpark

Article Published On: Tuesday, June 14, 2016, 13:35 [IST]
English summary
Renault India To Launch Two Special Edition Models By 2017
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+