ಅಗ್ರ 10 ಪಟ್ಟಿಯೊಳಗೆ ಎಂಟ್ರಿ ಕೊಟ್ಟ ರೆನೊ ಕ್ವಿಡ್
ಮಾರುತಿ ಸುಜುಕಿ ಆಲ್ಟೊಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ರೂಪುಗೊಂಡಿರುವ ರೆನೊ ಕ್ವಿಡ್ 2015 ಡಿಸೆಂಬರ್ ಮಾರಾಟದಲ್ಲಿ ಅಗ್ರ 10 ಪಟ್ಟಿಯೊಳಗೆ ಎಂಟ್ರಿ ಕೊಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
2015 ಸೆಪ್ಟೆಂಬರ್ 24ರಂದು ಬಿಡುಗಡೆಗೊಂಡಿರುವ ರೆನೊ ಕ್ವಿಡ್ ಡಿಸೆಂಬರ್ ತಿಂಗಳಲ್ಲಿ ಒಟ್ಟು 6,888 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿತ್ತು. ಈ ಮೂಲಕ ಒಂಬತ್ತನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ 5,997 ಯುನಿಟ್ ಗಳ ಮಾರಾಟ ದಾಖಲಿಸಿರುವ ಹ್ಯುಂಡೈ ಇಯಾನ್ 10ನೇ ಸ್ಥಾನದಲ್ಲಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಮಾರಾಟದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಎಲೈಟ್ ಐ20 ಮಾದರಿಗಳು ಹಿನ್ನಡೆಯನ್ನು ಸಾಧಿಸಿದೆ. ಮಾರುತಿ ಸ್ವಿಫ್ಟ್ ಮಾರಾಟವು ಶೇಕಡಾ 16.4ರಷ್ಟು ಕುಸಿತ ಕಂಡು 14,548 ಯುನಿಟ್ ಗಳಿಗೆ ತಲುಪಿದೆ. ಇನ್ನೊಂದೆಡೆ 9,345 ಯುನಿಟ್ ಗಳ ಮಾರಾಟ ದಾಖಲಿಸಿರುವ ಎಲೈಟ್ ಐ20 ಶೇಕಡಾ 7.6ರಷ್ಟು ಕುಸಿತ ಕಂಡಿದೆ.
ಹ್ಯುಂಡೈ ಎಲೈಟ್ ಐ20 ಮಾರಾಟಕ್ಕೆ ಬಲವಾದ ಹೊಡೆತ ನೀಡಿರುವ ಮಾರುತಿ ಬಲೆನೊ 10,572 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಆರನೇ ಸ್ಥಾನಕ್ಕೇರಿದೆ.
ಏತನ್ಮಧ್ಯೆ ಅಗ್ರ ಸ್ಥಾನದಲ್ಲಿ ಮುಂದುವರಿಯುತ್ತಿರುವ ಮಾರುತ ಆಲ್ಟೊ ಡಿಸೆಂಬರ್ 22,589 ಯುನಿಟ್ ಗಳ ಮಾರಾಟ ದಾಖಲಿಸಿದೆ. ಈ ಮೂಲಕ ಶೇಕಡಾ 1.3ರಷ್ಟು ಮಾರಾಟ ಏರಿಕೆ ಕಂಡಿದೆ.
ಡಿಸೆಂಬರ್ 2015: ಟಾಪ್ 10 ಪಟ್ಟಿ ಇಲ್ಲಿದೆ ನೋಡಿ
01 ಮಾರುತಿ ಆಲ್ಟೊ, ಮಾರಾಟ ಸಂಖ್ಯೆ: 22,589
02 ಮಾರುತಿ ಸ್ವಿಫ್ಟ್ ಡಿಜೈರ್, ಮಾರಾಟ ಸಂಖ್ಯೆ: 16,790
03 ಮಾರುತಿ ವ್ಯಾಗನಾರ್, ಮಾರಾಟ ಸಂಖ್ಯೆ: 14,645
04 ಮಾರುತಿ ಸ್ವಿಫ್ಟ್, ಮಾರಾಟ ಸಂಖ್ಯೆ: 14,548
05 ಹ್ಯುಂಡೈ ಗ್ರಾಂಡ್ ಐ10, ಮಾರಾಟ ಸಂಖ್ಯೆ: 12,749
06 ಮಾರುತಿ ಬಲೆನೊ, ಮಾರಾಟ ಸಂಖ್ಯೆ: 10,572
07 ಹ್ಯುಂಡೈ ಐ20, ಮಾರಾಟ ಸಂಖ್ಯೆ: 8,629
08 ಮಾರುತಿ ಸೆಲೆರಿಯೊ, ಮಾರಾಟ ಸಂಖ್ಯೆ: 8,019
09 ರೆನೊ ಕ್ವಿಡ್, ಮಾರಾಟ ಸಂಖ್ಯೆ: 6,888
10 ಹ್ಯುಂಡೈ ಇಯಾನ್, ಮಾರಾಟ ಸಂಖ್ಯೆ: 6,563


Click it and Unblock the Notifications


















