ರೆನೊ ಕ್ವಿಡ್ ಅವಿಶ್ವಸನೀಯ ಸಾಧನೆ; ಏನದು ಗೊತ್ತಾ?
ಕಳೆದ ವರ್ಷದಲ್ಲಿ ಭಾರತಕ್ಕೆ ಕಾಲಿರಿಸಿರುವ ಅತಿ ನೂತನ ರೆನೊ ಕ್ವಿಡ್ ಮಗದೊಂದು ಸಾಧನೆಯ ಮೈಲುಗಲ್ಲುನ್ನು ದಾಟಿದೆ. ಅದೇನೆಂದರೆ 2015 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ಈ ಪುಟ್ಟ ಕಾರೀಗ 85,000ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ಸ್ ಗಳನ್ನು ದಾಖಲಿಸಿಕೊಂಡಿದೆ.
Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!
ಪ್ರಮುಖವಾಗಿಯೂ ಮಾರುತಿ ಆಲ್ಟೊ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಹ್ಯಾಚ್ ಬ್ಯಾಕ್ ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.

ಬಿಡುಗಡೆಯಾದ ಒಂದು ವಾರದಲ್ಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿರುವ ರೆನೊ ಕ್ವಿಡ್ ಈಗ ನಾಲ್ಕು ತಿಂಗಳೊಳಗೆ 85,000ಕ್ಕೂ ಹೆಚ್ಚು ವಾಹನ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶ ಕಂಡಿದೆ.

ಈ ನಡುವೆ 2016 ವರ್ಷಾರಂಭದಲ್ಲಿ ರೆನೊ ಕ್ವಿಡ್ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3,000 ರು.ಗಳಷ್ಟು ಬೆಲೆ ಏರಿಕೆಗೊಳಿಸಲು ಫ್ರಾನ್ಸ್ ತಳಹದಿಯ ರೆನೊ ಸಂಸ್ಥೆ ನಿರ್ಧರಿಸಿತ್ತು.

ಇನ್ನೊಂದೆಡೆ ಬೇಡಿಕೆ ಗಣನೀಯವಾಗಿ ವರ್ಧನೆಯಾಗಿರುವ ಬೆನ್ನಲ್ಲೇ ರೆನೊ ಕ್ವಿಡ್ ಕಾಯುವಿಕೆ ಅವಧಿಯು ಆರು ತಿಂಗಳಷ್ಟು ಕಾಲ ವಿಸ್ತರಿಸಿತ್ತು. ಚೆನ್ನೈದ್ಯಾಂತ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿಯುಂಟಾಗಿರುವುವುದು ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡಿತ್ತು.

ನಿಸ್ಸಾನ್ ಹಾಗೂ ರೆನೊ ಸಂಸ್ಥೆಯು ಜಂಟಿಯಾದ ಸಿಎಂಎಂಫ್ (ಕಾಮನ್ ಮೊಡ್ಯುಲ್ ಫ್ಯಾಮಿಲಿ) ತಳಹದಿಯಲ್ಲಿ ಇದು ಅಭಿವೃದ್ಧಿಗೊಂಡಿದೆ. ಮುಂಬರುವ ರೆನೊ-ನಿಸ್ಸಾನ್ ಬಜೆಟ್ ಕಾರುಗಳಿಗೆ ವೇದಿಕೆಯಾಗಲಿದೆ.

ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್
- ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl
- ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್: 1800 ಎಂಎಂ
- ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ: 300 ಲೀಟರ್

ಎಂಜಿನ್ ತಾಂತ್ರಿಕತೆ
799 ಸಿಸಿ, 3 ಸಿಲಿಂಡರ್
54 ಅಶ್ವಶಕ್ತಿ 72 ಎನ್‌ಎಂ ತಿರುಗುಬಲ
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

01. ರೆನೊ ಕ್ವಿಡ್ ನಿಜಕ್ಕೂ ಗೇಮ್ ಚೇಂಜರ್ ಆದಿತೇ ?
02. ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ
03. ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ ?


Click it and Unblock the Notifications








