ರೆನೊ ಕ್ವಿಡ್ ಬೆಂಕಿ ಆಕಸ್ಮಿಕ; ಸೇಫ್ ಅಲ್ಲವೇ ?

By Nagaraja

ಭಾರತ ಮಾರುಕಟ್ಟೆಗೆ ಬಿಡುಗಡೆಗೊಂಡ ಕೆಲವೇ ಸಮಯಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ರೆನೊ ಕ್ವಿಡ್, ಸದ್ಯದ ಹಾಟ್ ಕಾರು. ಭಾರತದ ನಂ.1 ಕಾರು ಮಾರುತಿ ಆಲ್ಟೊಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ರೆನೊ ಕ್ವಿಡ್ ಬಜೆಟ್ ಕಾರಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ನಡುವೆ ಗ್ಲೋಬಲ್ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಶೂನ್ಯ ರೇಟಿಂಗ್ ಸಂಪಾದಿಸಿರುವುದು ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಬಜೆಟ್ ಕಾರಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಭದ್ರತೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಹಾಗಿರಬೇಕೆಂದರೆ ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕವಾಗಿರುವುದು ಮತ್ತಷ್ಟು ಕಳವಳಕ್ಕೆ ಎಡೆ ಮಾಡಿ ಕೊಟ್ಟಿದೆ.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ಈಗ ಬಂದಿರುವ ಸುದ್ದಿಗಳ ಪ್ರಕಾರ ಬರಿ ಐದು ತಿಂಗಳಷ್ಟು ಹಳೆಯದಾದ ರೆನೊ ಕ್ವಿಡ್ ಆರ್‌ಎಕ್ಸ್‌ಟಿ ಆವೃತ್ತಿಗೆ ಬೆಂಕಿ ಹೊತ್ತಿಕೊಂಡಿರುವುದು ಹಲವಾರು ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ರೆನೊ ಕ್ವಿಡ್ ಮುಂಭಾಗದಲ್ಲಿ ಎಂಜಿನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈ ಸಂಬಂಧ 24 ತಾಸು ಸೇವೆಗೆ ಲಭ್ಯವಿರುವ ರೆನೊ ಕಸ್ಟಮರ್ ಕೇರ್ ಗೆ ದೂರು ದಾಖಲಿಸಿಕೊಳ್ಳಲಾಗಿತ್ತು.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ದೂರಿನ ಬಳಿಕ ತನಿಖೆಯನ್ನು ಕೈಗೊಳ್ಳುವುದಾಗಿ ರೆನೊ ಭರವಸೆಯನ್ನು ನೀಡಿತ್ತು. ಅಲ್ಲದೆ ತಮ್ಮ ಭಾಗದಿಂದ ತೊಂದರೆ ಕಾಣಿಸಿಕೊಂಡಲ್ಲಿ ಹೊಸ ಕಾರನ್ನು ನೀಡುವುದಾಗಿ ಭರವಸೆಯನ್ನು ಕೊಟ್ಟಿದ್ದರು.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ಕಾರಿನಲ್ಲಿ ಯಾವುದೇ ರೀತಿಯ ಮಾರ್ಪಾಡುಗಳನ್ನು ತಂದಿಲ್ಲ ಎಂಬುದನ್ನು ಕಾರು ಮಾಲಿಕ ಖಚಿತಪಡಿಸುತ್ತಾರೆ. ಆದರೆ ರೆನೊ ಉತ್ತರ ಮಾತ್ರ ಮಾಲಿಕರನ್ನು ಆಶ್ಚರ್ಯ ಚಕಿತಗೊಳಿಸಿತ್ತು.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ಕಾರಿನಲ್ಲಿ ಯಾವುದೇ ವಿನ್ಯಾಸ ಮಾರ್ಪಾಡುಗಳು ಕಂಡುಬಂದಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ರೆನೊ, ಬೆಂಕಿ ಹೊತ್ತಿಕೊಂಡಿರುವುದು ದುರ್ಘಟನೆ ಎಂಬ ವಿವರಣೆಯನ್ನು ನೀಡಿದೆ.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ಅಲ್ಲದೆ ಬೆಂಕಿ ಆಕಸ್ಮಿಕದ ಪರಿಹಾರಕ್ಕಾಗಿ ಸಂಬಂಧಿತ ವಿಮಾ ಸಂಸ್ಥೆಯನ್ನು ಸಂಪರ್ಕಿಸುವಂತೆ ಸೂಚನೆ ನೀಡಿದೆ. ಇದರಿಂದ ಮಾಲಿಕ ನಿರಾಸೆಗೊಳಗಾಗಿದ್ದಾರೆ.

ರೆನೊ ಕ್ವಿಡ್ ಕಾರಿಗೆ ಬೆಂಕಿ ಆಕಸ್ಮಿಕ

ಒಟ್ಟಿನಲ್ಲಿ ಈ ಎಲ್ಲ ಘಟನೆಯಿಂದ ರೆನೊ ಕ್ವಿಡ್ ಗೆ ಸ್ವಲ್ಪ ಹಿನ್ನಡೆಯಾಗಿರುವುದಂತೂ ನಿಜ.

More from DriveSpark

Article Published On: Tuesday, May 24, 2016, 11:22 [IST]
English summary
Renault Kwid Catches Fire; Owner Baffled By Official Reply
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+