ಭಲೆ ಬೇಷ್; ಸಕತ್ತಾಗಿದೆ ರೆನೊ ಕ್ವಿಡ್ ಕ್ರೀಡಾ ಆವೃತ್ತಿ
ಬಿಡುಗಡೆ ಬಳಿಕ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿರುವ ರೆನೊ ಕ್ವಿಡ್ ಸಣ್ಣ ಕ್ರೀಡಾ ಕಾರು ಇದೀಗ ಕ್ರೀಡಾ ಆವೃತ್ತಿಯನ್ನು ಪಡೆದುಕೊಂಡಿದೆಯೇ ಎಂಬುದು ಎಲ್ಲರಲ್ಲೂ ಕುತೂಹಲವನ್ನುಂಟು ಮಾಡಿದೆ.
ಇದನ್ನು ಪುಷ್ಠಿಕರಿಸುವಂತೆ ಕ್ರೀಡಾ ಆವೃತ್ತಿಯು ಮುಂಬೈನ ಡೀಲರ್ ಬಳಿಯೊಂದರಲ್ಲಿ ಪತ್ತೆಯಾಗಿದೆ. ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಸ್ಪೋರ್ಟ್ ಆವೃತ್ತಿಯಲ್ಲಿ 48,000 ರು.ಗಳ ಹೆಚ್ಚುವರಿ ಆಕ್ಸೆಸರಿಗಳ ಪ್ಯಾಕೇಜನ್ನು ನೀಡಲಾಗುತ್ತಿದೆ.

ಜನಪ್ರಿಯ ಮಾರುತಿ ಆಲ್ಟೊ 800 ಮಾದರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ರೆನೊ ಕ್ವಿಡ್, ಬೊಂಬಾಟ್ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಈ ಸಣ್ಣ ಕಾರೀಗ ಹಾಟ್ ಕೇಕ್ ತರಹನೇ ಮಾರಾಟ ಗಿಟ್ಟಿಸಿಕೊಂಡಿದೆ.

ಶ್ವೇತ ವರ್ಣದ ಕಾರಿಗೆ ರೂಫ್ ಸೇರಿದಂತೆ ಎ ಮತ್ತು ಸಿ ಪಿಲ್ಲರ್ ಮ್ಯಾಟ್ ಬ್ಲ್ಯಾಕ್ ಪಟ್ಟಿಯಿಂದ ಆವರಿಸಲಾಗಿದೆ. ಟ್ವಿನ್ ತ್ರಿ ಸ್ಪೋಕ್ ಅಲಾಯ್ ವೀಲ್, ಬದಿಯಲ್ಲಿ ಬಾಡಿ ಗ್ರಾಫಿಕ್ಸ್, ಸಿಲ್ ಗಾರ್ಡ್, ಮತ್ತು ಡೋರ್ ಬದಿಯಲ್ಲಿ ಸಿಲ್ವರ್ ಪಟ್ಟಿ ಮತ್ತು ರಿಯರ್ ಸ್ಪಾಯ್ಲರ್ ಮತ್ತಷ್ಟು ಆಕರ್ಷಣೆಯನ್ನು ತುಂಬುತ್ತಿದೆ.

ಕಾರಿನೊಳಗೂ ಸ್ಪೆಷಲ್ ಮ್ಯಾಟ್ ಮತ್ತು ಎಸಿ ವೆಂಟ್ಸ್ ಮತ್ತು ಗೇರ್ ಲಿವರ್ ನಲ್ಲಿ ಗಳಲ್ಲಿ ಬೆಳ್ಳಿ ಸ್ಪರ್ಶದ ಅನುಭವವಾಗಲಿದೆ.

ಅಷ್ಟೇ ಯಾಕೆ ಬೇಡಿಕೆಯ ಮೆರೆಗೆ ಲೆಥರ್ ಸೀಟುಗಳನ್ನು ಜೋಡಣೆ ಮಾಡಲಾಗುತ್ತಿದೆ. ಈ ಮೂಲಕ ಪ್ರೀಮಿಯಂ ಕಾರಿನ ಅನುಭವ ಸಿಗಲಿದೆ.

ಇನ್ನು ಗ್ರಾಹಕರ ಬಯಕೆಯಂತೆಯೇ ಹೆಚ್ಚುವರಿ ಆಕ್ಸೆಸರಿಗಳ ಜೊತೆ ವಿವಿಧ ಥೀಮ್ ಗಳನ್ನು ಲಗತ್ತಿಸಲಾಗುತ್ತಿದೆ.

ಹೆಚ್ಚು ಶಕ್ತಿಶಾಲಿ 1.0 ಲೀಟರ್ ಮತ್ತು ಎಎಂಟಿ ಕ್ವಿಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಸಿದ್ಧವಾಗುತ್ತಿರುವಾಗಲೇ ಇಂತಹದೊಂದು ವಿಶೇಷ ಆಕ್ಸಸರಿ ಪ್ಯಾಕೇಜ್ ಹೊಂದಿರುವ ಕ್ವಿಡ್ ಪತ್ತೆಯಾಗಿದೆ.

ರೆನೊ-ನಿಸ್ಸಾನ್ ಜೊತೆಗಾರಿಕೆಯ ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣವಾಗಿರುವ ರೆನೊ ಕ್ವಿಡ್, 799 ಸಿಸಿ ತ್ರಿ ಸಿಲಿಂಡರ್ ಡಿಒಎಚ್ ಸಿ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
ಕ್ವಿಡ್ ಸ್ಟ್ಯಾಂಡರ್ಡ್: 2.79 ಲಕ್ಷ ರು.
ಕ್ವಿಡ್ ಆರ್‌ಎಕ್ಸ್‌ಇ: 3.16 ಲಕ್ಷ ರು.
ಕ್ವಿಡ್ ಆರ್‌ಎಕ್ಸ್‌ಎಲ್: 3.41 ಲಕ್ಷ ರು.
ಕ್ವಿಡ್ ಆರ್‌ಎಕ್ಸ್‌ಟಿ: 3.73 ಲಕ್ಷ ರು.
ಕ್ವಿಡ್ ಆರ್‌ಎಕ್ಸ್‌ಟಿ ಡ್ರೈವರ್ ಬದಿಯ ಏರ್ ಬ್ಯಾಗ್ (ಐಚ್ಛಿಕ): 3.83 ಲಕ್ಷ ರು.


Click it and Unblock the Notifications








