ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

Written By:

ಬ್ರಿಟನ್ ಐಕಾನಿಕ್ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್, ಭಾರತದಲ್ಲಿ ಅತಿ ನೂತನ ಡಾನ್ (Dawn) ಸೂಪರ್ ಲಗ್ಷುರಿ ಕನ್ವರ್ಟಿಬಲ್ ಕಾರನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 6.25 ಕೋಟಿ ರು. (ಎಕ್ಸ್ ಶೋ ರೂಂ ಮುಂಬೈ)

ರೋಲ್ಸ್ ರೋಲ್ಸ್ ವ್ರೈತ್ ಮಾದರಿಯ ಕನ್ವರ್ಟಬಲ್ ಆವೃತ್ತಿಯಾಗಿರುವ ಡಾನ್, 2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತ್ತು.

To Follow DriveSpark On Facebook, Click The Like Button
ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ಘೋಸ್ಟ್ ಮತ್ತು ವ್ರೈತ್ ಗೆ ಸಮಾನವಾದ 6.6 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೋಲ್ಸ್ ರಾಯ್ಸ್ ಡಾನ್, 780 ಎನ್ ಎಂ ತಿರುಗುಬಲದಲ್ಲಿ 563 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಜಿಪಿಎಸ್ ಗೈಡಡ್ ಶಿಫ್ಟಿಂಗ್ ಜೊತೆ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ನೂತನ ರೋಲ್ಸ್ ರಾಯ್ಸ್ ಡಾನ್, 5285 ಎಂಎಂ ಉದ್ದ, 1947 ಎಂಎಂ ಅಗಲ, 1502 ಎಂಎಂ ಎತ್ತರ ಮತ್ತು 3112 ಎಂಎಂ ಚಕ್ರಾಂತರವನ್ನು ಪಡೆದುಕೊಂಡಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ಇದರಲ್ಲಿರುವ ಫ್ಯಾಬ್ರಿಕ್ ರೂಫ್, ಗಂಟೆಗೆ 50 ಕೀ.ಮೀ. ವೇಗದಲ್ಲಿ ಸಂಚರಿಸುವಾಗಲೂ 22 ಸೆಕೆಂಡುಗಳಲ್ಲಿ ತೆರೆಯಲು ಹಾಗೂ ಮುಚ್ಚಲು ಸಾಧ್ಯವಾಗಲಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ರೋಲ್ಸ್ ರಾಯ್ಸ್ ಡಾನ್ 244 ಲೀಟರ್ ಗಳ ಲಗ್ಗೇಜ್ ಜಾಗವನ್ನು ಪಡೆದುಕೊಂಡಿದೆ. ಇದು ಸಹ ವ್ರೈತ್ ಮಾದರಿಗೆ ಹೆಚ್ಚು ಸಾಮತ್ಯೆಯನ್ನು ಪಡೆದಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

4.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿರುವ ರೋಲ್ಸ್ ರಾಯ್ಸ್ ಡಾನ್, ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

2+2 ಆಸನ ವ್ಯವಸ್ಥೆಯೊಂದಿಗೆ ಬಿಡುಗಡೆಯಾಗಿರುವ ರೋಲ್ಸ್ ರಾಯ್ಸ್ ಡಾನ್ ಆಕರ್ಷಕ ಸಾಫ್ಟ್ ಟಾಪ್ ಕನ್ವರ್ಟಿಬಲ್ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ತನ್ನ ಐಕಾನಿಕ್ ಶೈಲಿಯ ವಿನ್ಯಾಸವನ್ನು ಡಾನ್ ಕಾರಿನಲ್ಲೂ ರೋಲ್ಸ್ ರಾಯ್ಸ್ ಮುಂದುವರಿಸಿದೆ. ಮುಂದುಗಡೆ ಕ್ರೋಮ್ ಗ್ರಿಲ್, ಬಾಗಿದಂತಹ ಹೆಡ್ ಲ್ಯಾಂಪ್, ಪ್ರೊಜೆಕ್ಟರ್ ಲೈಟ್ ಮತ್ತು ಸ್ಮಾರ್ಟ್ ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ಇರಲಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ಹೆಡ್ ಲ್ಯಾಂಪ್ ಕೆಳಗಡೆಯಾಗಿ ಎಲ್ ಇಡಿ ಬೆಳಕಿನ ಸೇವೆಯನ್ನು ಕಾಣಬಹುದಾಗಿದೆ. ಇನ್ನು ಫ್ರಂಟ್ ಬಂಪರ್ ಕೆಳಗಡೆಯಾಗಿ ದೊಡ್ಡದಾದ ಏರ್ ಇಂಟೇಕ್ ಗಳನ್ನು ನೀಡಲಾಗಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ಕಾರಿನೊಳಗೂ ರೋಲ್ಸ್ ರಾಯ್ಸ್ ಸಾಂಪ್ರದಾಯಕ ಮರ ಹಾಗೂ ಲೆಥರ್ ಸ್ಪರ್ಶವನ್ನು ಕಾಣಬಹುದಾಗಿದೆ. ಅಂತೆಯೇ ಫೋರ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಬಿಸ್ಪೋಕ್ ಪ್ರೀಮಿಯಂ ಅಲಾಯ್ ವೀಲ್ ವ್ಯವಸ್ಥೆಯಿರಲಿದೆ.

ರೋಲ್ಸ್ ರಾಯ್ಸ್ ಡಾನ್ ಸೂಪರ್ ಲಗ್ಷುರಿ ಕನ್ವರ್ಟಿಬಲ್ ಭರ್ಜರಿ ಬಿಡುಗಡೆ

ಹಾಗೆಯೇ 16 ವೈಯಕ್ತಿಕ ಟ್ಯೂನ್ ಸ್ಪೀಕರ್ ಗಳು, ಕ್ರೋಮ್ ಇಸರ್ಟ್, 10.25 ಇಂಚುಗಳ ಎಚ್ ಡಿ ನೇವಿಗೇಷನ್ ಪರದೆ, ಮಲ್ಟಿ ಮೀಡಿಯಾ ನೇವಿಗೇಷನ್, ಗೆಸ್ಟರ್ ಸೆನ್ಸಿಟಿವ್ ಟಚ್ ಪ್ಯಾಡ್ ಗಳು ಪ್ರಮುಖ ಆಕರ್ಷಣೆಯಾಗಿರಲಿದೆ.

English summary
Ethereal Rolls-Royce Dawn Enters India, Priced At Rs. 6.25 Crore
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark