ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ರಾತ್ರಿ ವೇಳೆಯಲ್ಲಿ ಹೆಡ್ ಲೈಟ್ ಪ್ರಕಾಶವನ್ನು ಕಡಿಮೆ ಮಾಡಿ ಎದುರಿನಿಂದ ಬರುವ ವಾಹನಗಳ ಸುಗಮ ಚಾಲನೆ ಅನುವು ಮಾಡಿಕೊಡುವುದು ಪ್ರಬುದ್ಧ ಚಾಲಕನ ಲಕ್ಷಣವಾಗಿರುತ್ತದೆ.

By Nagaraja

ರಾತ್ರಿ ವೇಳೆಯಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ಡಿಮ್/ಡಿಪ್ ಸಮಸ್ಯೆ ಅತಿಯಾಗಿ ಎದುರಾಗುತ್ತದೆ. ಅತಿ ಹೆಚ್ಚು ಪ್ರಕಾಶ ಚೆಲ್ಲುವ ಹೈ ಬೀಮ್ ಹೆಡ್ ಲೈಟ್ ಗಳನ್ನು ಚಾಲಕರು ಆಫ್ ಮಾಡಲು ನಿರ್ಲಕ್ಷ್ಯವನ್ನು ತೋರುತ್ತಾರೆ. ಪರಿಣಾಮ ಎದುರುಗಡೆಯಿಂದ ಬರುವ ವಾಹನಗಳಿಗೆ ದಿಕ್ಕು ತೋಚದೆ ಅನೇಕ ಬಾರಿ ಅಪಘಾತ ಪ್ರಕರಣಗಳು ಎದುರಾದ ಘಟನೆಗಳು ನಡೆಯುತ್ತದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಎದುರಿನಿಂದ ಯಾವುದೇ ವಾಹನ ಬಂದರೂ ವಾಹನದ ಬೆಳಕನ್ನು ಡಿಮ್/ಡಿಪ್ ಮಾಡುವುದು ಪ್ರಬುದ್ಧ ಚಾಲಕನ ಲಕ್ಷಣವಾಗಿರುತ್ತದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಹಾಗಾಗಿ ಎದುರಿನಿಂದ ಬರುವ ವಾಹನ ಚಾಲಕನ ಕಣ್ಣಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಚಾಲಕನ ಜವಾಬ್ದಾರಿಯಾಗಿರುತ್ತದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಆದರೆ ಈಗ ಬಂದಿರುವ ಆಘಾತಕಾರಿ ವರದಿಯೊಂದರಲ್ಲಿ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಪ್ರಕಾಶಮಾನವಾದ ಬೆಳಕಿನ ಪ್ರಭಾವವನ್ನು ಕಡಿಮೆ ಮಾಡುಲು ಕಿಂಚಿತ್ತು ಗಮನ ಹರಿಸುವುದಿಲ್ಲ ಎಂಬುದು ತಿಳಿದು ಬಂದಿದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಪಂಜಾಬ್ ಮತ್ತು ಹರಿಯಾಣದ ಸಿಂಗಲ್ ವೇ ಹೆದ್ದಾರಿಯಲ್ಲಿ ಅರೈವ್ ಸೇಫ್, 2,500 ಕೀ.ಮೀ. ಉದ್ದಕ್ಕೂ ನಡೆಸಿರುವ 3,200ಕ್ಕೂ ಹೆಚ್ಚು ವಾಹನಗಳ ಮೇಲಿನ ಅಧ್ಯಯನದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ವರದಿಯಲ್ಲಿ ದಾಖಲಾಗಿರುವ ಗಮನಾರ್ಹ ಅಂಶವೆಂದರೆ ಟ್ರಕ್, ಲಾರಿ ಚಾಲಕರನ್ನು ಹೋಲಿಸಿದಾಗ ಖಾಸಗಿ ಕಾರು ಚಾಲಕರು ಹೆಡ್ ಲೈಟ್ ಲೊ ಬೀಮ್ ಮಾಡಲು ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬುದು ತುಂಬಾನೇ ಖೇದಕರ ಸಂಗತಿಯಾಗಿದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಶೇಕಡಾ 26.15ರಷ್ಟು ಕಾರು/ಎಸ್ ಯುವಿ ಚಾಲಕರು ರಾತ್ರಿ ವೇಳೆಯಲ್ಲಿ ಡಿಮ್/ಡಿಪ್ ಮಾಡುತ್ತಾರೆ. ಉಳಿದ ಶೇಕಡಾ 73.83ರಷ್ಟು ಚಾಲಕರು ಕ್ಯಾರೇ ಎನ್ನುತ್ತಿಲ್ಲ ಎಂಬುದು ಬಯಲಾಗಿದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಇನ್ನೊಂದೆಡೆ ರಾತ್ರಿ ವೇಳೆಯಲ್ಲಿ ಸುರಕ್ಷತೆಗೂ ಆದ್ಯತೆ ಕೊಡುವ ಶೇಕಡಾ 77.72ರಷ್ಟು ಟ್ರಕ್ ಚಾಲಕರು ಹೆಡ್ ಲೈಟ್ ಬೆಳಕನ್ನು ಡಿಮ್/ಡಿಪ್ ಮಾಡಿ ಎದುರಿನಿಂದ ಬರುವ ವಾಹನಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಇಲ್ಲೂ ಶೇಕಡಾ 15.9ರಷ್ಟು ಕೇರ್ ಲೆಸ್ ಟ್ರಕ್ ಚಾಲಕರು ಹೆಡ್ ಲೈಟ್ ಪ್ರಕಾಶವನ್ನು ಕಡಿಮೆ ಮಾಡುವುದರತ್ತ ಗಮನ ಹರಿಸುತ್ತಿಲ್ಲ. ಇನ್ನುಳಿದಂತೆ ಶೇಕಡಾ 5.36ರಷ್ಟು ಮಂದಿ ಒಂದು ಕ್ಷಣಕ್ಕೆ ಮಾತ್ರ ಡಿಮ್/ಡಿಪ್ ಮಾಡಿ ಮತ್ತೆ ಪ್ರಕಾಶಮಾನವಾದ ಬೆಳಕನ್ನು ಹೊರ ಚೆಲ್ಲುತ್ತಾರೆ.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

2016 ಜುಲೈ 01ರಿಂದ 2016 ಅಕ್ಟೋಬರ್ 31ರ ವರೆಗೆ ರಾತ್ರಿ ಸಮಯ 8.00ರ ಬಳಿಕ 1950 ಕಾರು/ಎಸ್ ಯುವಿ ಮತ್ತು 1250ರಷ್ಟು ಬಸ್/ಟ್ರಕ್ ಗಳನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಪಂಜಾಬ್ ನ ರಾಷ್ಟ್ರೀಯ ಹೆದ್ದಾರಿ 95 (ಖರಾರ್-ಲುಧಿಯಾನಾ) ಹಾಗೂ ಎಸ್ ಎಚ್-12ಎ (ಲಾಂಡ್ರನ್-ಶಿರ್ ಹಿಂದ್, ಭಾವನಿಘರ್-ಬಾತಿಂಧ) ಮತ್ತು ಹರಿಯಾಣದ ರಾಷ್ಟ್ರೀಯ ಹೆದ್ದಾರಿ 07, 344 (ಪಂಚಕುಲಾ-ಯಮುನಾನಗರ) ಹಾಗೂ ರಾಷ್ಟ್ರೀಯ ಹೆದ್ದಾರಿ 152, 52 (ಅಂಬಲ-ಹಿಸಾರ್) ಮಾರ್ಗಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ರಾತ್ರಿ ವೇಳೆಯಲ್ಲಿ ನಿಮ್ಮನ್ನು ಕಾಡುತ್ತಿದೆಯೇ ಡಿಮ್/ಡಿಪ್ ಸಮಸ್ಯೆ?

ಇದಕ್ಕೂ ಮೊದಲು ಕೇಂದ್ರ ರಸ್ತೆ ಸಚಿವಾಲಯವು ಬಿಡುಗಡೆ ಮಾಡಿರುವ ವರದಿಗಳಲ್ಲಿ ಶೇಕಡಾ 39.2ರಷ್ಟು ರಸ್ತೆ ಅಪಘಾತಗಳು ರಾತ್ರಿ ವೇಳೆಯಲ್ಲಿ (ಸಮಯ ರಾತ್ರಿ ಆರರಿಂದ ಬೆಳಗ್ಗೆ ಆರು ಗಂಟೆಯ ವರೆಗೆ) ನಡೆಯುತ್ತಿದೆ ಎಂಬ ವಿವರವನ್ನು ಬಹಿರಂಗಪಡಿಸಿತ್ತು.

More from DriveSpark

Article Published On: Wednesday, November 16, 2016, 13:32 [IST]
English summary
Study Reveals A Shocking Fact About Car Drivers And Truckers In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+