ಬಹುನಿರೀಕ್ಷಿತ ಟಾಟಾ ಹೆಕ್ಸಾ ಮೈಕ್ರೋ ವೆಬ್ ಸೈಟ್ ಲೈವ್
ಮಗದೊಂದು ಆಕರ್ಷಕ ಕಾರು 'ಹೆಕ್ಸಾ' ಬಿಡುಗಡೆ ತಯಾರಿಯಲ್ಲಿರುವ ಟಾಟಾ ಮೋಟಾರ್ಸ್, ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಟಿಯಾಗೊ ತರಹನೇ ಎಸ್ ಯುವಿ ಸೆಗ್ಮೆಂಟ್ ನಲ್ಲಿ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಬಹುರಿನಿರೀಕ್ಷಿತ ಟಾಟಾ ಹೆಕ್ಸಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದರಂತೆ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯು ಮೈಕ್ರೋ ವೆಬ್ ಸೈಟ್ ಬಿಡುಗಡೆಗೊಳಿಸಿದೆ. ಆಸಕ್ತ ಗ್ರಾಹಕರು ಟಾಟಾ ಹೆಕ್ಸಾ ವೆಬ್ ಸೈಟ್ ಗೆ ತೆರಳಿ ನಿಮ್ಮ ಹೆಸರು, ಇಮೇಲ್, ಸಂಪರ್ಕ ನಂಬರ್ ಮತ್ತು ನಗರಗಳ ಬಗ್ಗೆ ವಿವರಗಳನ್ನು ನೀಡಿದ್ದಲ್ಲಿ ಹೆಕ್ಸಾ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಬಹುದಾಗಿದೆ.

ಟಾಟಾ ಹೆಕ್ಸಾ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ನವೆಂಬರ್ 01ರಿಂದ ಆರಂಭವಾಗಲಿದೆ. ಇನ್ನು ವರ್ಷಾಂತ್ಯದಲ್ಲಿ ಅಥವಾ ಹೊಸ ವರ್ಷದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ನೂತನ ಹೆಕ್ಸಾದಲ್ಲಿರುವ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾ ಹೆಕ್ಸಾ ಮ್ಯಾನುವಲ್ ವೆರಿಯಂಟ್ ನಲ್ಲಿರುವ ಸೂಪರ್ ಡ್ರೈವ್ ಮೋಡ್ ಗಳು ಪ್ರಮುಖ ಆಕರ್ಷಣೆಯಾಗಲಿದೆ. ಅವುಗಳೆಂದರೆ ಆಟೋ, ರಫ್ ರೋಡ್, ಡೈನಾಮಿಕ್ ಮತ್ತು ಕಂಫರ್ಟ್.

ನ್ಯೂ ಜನರೇಷನ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಸಿಪಿ), ರೇಸ್ ಕಾರ್ ಮ್ಯಾಪಿಂಗ್ ವ್ಯವಸ್ಥೆಗಳನ್ನು ನೂತನ ಹೆಕ್ಸಾ ಪಡೆಯಲಿದೆ.

ಸ್ಟೈಲಿಷ್ ಮಸಲರ್ ವಿನ್ಯಾಸದ ಜೊತೆಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಆಕರ್ಷಕ ಫ್ರಂಟ್ ಬಂಪರ್, ಬ್ಲ್ಯಾಕ್ ಕ್ರೋಮ್ ಗ್ರಿಲ್, ಸ್ವಭಾವ ರೇಖೆ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

10 ಸ್ಪೀಕರ್ ಗಳ ಜೆಬಿಎಂ ಮ್ಯೂಸಿಕ್ ಸಿಸ್ಟಂ ಜೊತೆ ಟಚ್ ಸ್ಕ್ರೀನ್ ನೇವಿಗೇಷನ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟು ಹಾಗೂ 19 ಇಂಚುಗಳ ಅಲಾಯ್ ಚಕ್ರಗಳು ಇದರಲ್ಲಿರಲಿದೆ.

ಪ್ರಮುಖವಾಗಿಯೂ ಮಹೀಂದ್ರ ಎಕ್ಸ್ ಯುವಿ500 ಮತ್ತು ಟೊಯೊಟಾ ಇನ್ನೋವಾ ಕ್ರೈಸ್ಟಾ ಪ್ರಮುಖ ಎದುರಾಳಿಯಾಗಲಿದೆ. ಈ ಹಿನ್ನಲೆಯಲ್ಲಿ ಉನ್ನತ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೆಕ್ಸಾದಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಆರು ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇವೆಗಳಿರಲಿದೆ.

ಟಾಟಾ ಹೆಕ್ಸಾಗೆ ಮಾತ್ರವಾಗಿ ಅರ್ಪಿಸಲಾಗಿರುವ ಮೈಕ್ರೋ ವೆಬ್ ಸೈಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿರಿ


Click it and Unblock the Notifications








