ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಹು ನಿರೀಕ್ಷಿತ ಹೆಕ್ಸಾ ಕಾರನ್ನು ಹೊಸ ವರ್ಷದಲ್ಲಿ ಬಿಡುಗಡೆ ಮಾಡುವ ಯೋಜನೆಯಿರಿಸಿಕೊಂಡಿದೆ. ಇದರಂತೆ ನವೆಂಬರ್ ತಿಂಗಳಲ್ಲಿ ಮುಗಂಡ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಆದರೂ ಈ ಸಂಬಂಧ ಟಾಟಾ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಬಲ್ಲ ಮೂಲಗಳ ಪ್ರಕಾರ ಟಾಟಾ ಹೆಕ್ಸಾ ಟಾಪ್ ಎಂಡ್ ಎಕ್ಸ್ ಟಿ ಫೋರ್ ವೀಲ್ ಮಾದರಿಯು ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 17.49 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಇನ್ನು ಟಾಟಾ ಹೆಕ್ಸಾ ಆಟೋಮ್ಯಾಟಿಕ್ ಟಾಪ್ ಎಂಡ್ ಎಕ್ಸ್ ಟಿಎ ಟು ವೀಲ್ ಡ್ರೈವ್ ವೆರಿಯಂಟ್ 17.44 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇವೆರಡು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಇದರಲ್ಲಿರುವ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಈ ಮೊದಲೇ ತಿಳಿಸಿರುವಂತೆಯೇ ಮ್ಯಾನುವಲ್ ವೆರಿಯಂಟ್ ಸೂಪರ್ ಡ್ರೈವ್ ಮೋಡ್ ಗಳನ್ನು ಪಡೆಯಲಿದೆ. ಅವುಗಳೆಂದರೆ ಆಟೋ, ರಫ್ ರೋಡ್, ಡೈನಾಮಿಕ್ ಮತ್ತು ಕಂಫರ್ಟ್.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಪ್ರತಿಯೊಂದು ಮೋಡ್ ಗಳನ್ನು ಚಾಲನಾ ಪರಿಸ್ಥಿತಿಗೆ ಅನುಗುಣವಾಗಿ ಬಳಕೆ ಮಾಡಬಹುದಾಗಿದ್ದು, ಆರಾಮದಾಯಕ ಚಾಲನಾ ಅನುಭವವನ್ನು ನೀಡಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ನ್ಯೂ ಜನರೇಷನ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಸಿಪಿ), ರೇಸ್ ಕಾರ್ ಮ್ಯಾಪಿಂಗ್ ವ್ಯವಸ್ಥೆಗಳನ್ನು ನೂತನ ಹೆಕ್ಸಾ ಪಡೆಯಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಸ್ಟೈಲಿಷ್ ಮಸಲರ್ ವಿನ್ಯಾಸದ ಜೊತೆಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಆಕರ್ಷಕ ಫ್ರಂಟ್ ಬಂಪರ್, ಬ್ಲ್ಯಾಕ್ ಕ್ರೋಮ್ ಗ್ರಿಲ್, ಸ್ವಭಾವ ರೇಖೆ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಹೆಕ್ಸಾ ಹೊಸ ವರ್ಷದಲ್ಲಿ ಬಿಡುಗಡೆ; ನವೆಂಬರ್ ನಿಂದ ಬುಕ್ಕಿಂಗ್ಸ್ ಪ್ರಾರಂಭ

ಮಹೀಂದ್ರ ಎಕ್ಸ್ ಯುವಿ500 ಮತ್ತು ಟೊಯೊಟಾ ಇನ್ನೋವಾ ಕ್ರೈಸ್ಟಾ ಪ್ರಮುಖ ಎದುರಾಳಿಯಾಗಲಿದೆ. ಈ ಹಿನ್ನಲೆಯಲ್ಲಿ ಉನ್ನತ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೆಕ್ಸಾದಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

English summary
Bookings For Tata Hexa To Open In November; Launch & Delivery Pushed To 2017
Story first published: Friday, October 14, 2016, 16:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark