ಟಿಯಾಗೊ ಹಿರಿಯಣ್ಣ ಕೈಟ್ 5 ಬಿಡುಗಡೆಗೆ ರೆಡಿ
ಟಾಟಾ ಟಿಯಾಗೊ ಕಾಂಪಾಕ್ಟ್ ಸೆಡಾನ್ ಕಾರು ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆ ಮಗದೊಮ್ಮೆ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ. ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್ ಎಂಬ ಹೆಸರಿನಿಂದಲೂ ಅರಿಯಲ್ಪಡುವ ನೂತನ ಕಾರು ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತಗೊಂಡಿದೆ.
ತಮಿಳುನಾಡಿನ ರಸ್ತೆಗಳಲ್ಲಿ ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್ ಕಾರಿನ ಟೆಸ್ಟಿಂಗ್ ಹಮ್ಮಿಕೊಳ್ಳಾಗಿತ್ತು. ಇದು ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟ ಸಾಧಿಸುತ್ತಿರು ಟಿಯಾಗೊ ಕಾರಿಗೆ ಸಾಮ್ಯತೆಯನ್ನು ಪಡೆದುಕೊಂಡಿದೆ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಟಾಟಾ ಕೈಟ್ 5, ಮುಂಭಾಗದಲ್ಲಿ ಟಿಯಾಗೊಗೆ ಹೆಚ್ಚಿನ ಸಾಮ್ಯತೆ ಪಡೆದುಕೊಂಡಿದೆ. ಇನ್ನು ಹಿಂಭಾಗದಲ್ಲಿ ಸೆಡಾನ್ ಶೈಲಿಗೆ ತಕ್ಕ ಬೂಟ್ ಸ್ಪೇಸ್, ಟೈಲ್ ಲ್ಯಾಂಪ್ ಹಾಗೂ ಎಲ್ ಇಡಿ ಬ್ರೇಕ್ ಲೈಟ್ ಕಂಡುಬಂದಿದೆ.

ಟಿಯಾಗೊ ಕಾರನ್ನು ಹೋಲಿಸಿದಾಗ ಕಾರಿನೊಳಗೆ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಆದರೂ ಟಾಪ್ ಎಂಡ್ ವೆರಿಯಂಟ್ ಹರ್ಮಾನ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾಗಳನ್ನು ಪಡೆಯಲಿದೆ.

ಇನ್ನು ಈ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 420 ಲೀಟರ್ ಗಳ ಬೂಟ್ ಜಾಗವು ಟಿಯಾಗೊ ಕಾಂಪಾಕ್ಟ್ ಸೆಡಾನ್ ಕಾರಿನಲ್ಲಿರಲಿದೆ.

ಅಂತೆಯೇ ಟಿಯಾಗೊದಲ್ಲಿರುವುದಕ್ಕೆ ಸಮಾನವಾದ 1.2 ತ್ರಿ ಸಿಲಿಂಡರ್ ರೆವೂಟ್ರಾನ್ ಪೆಟ್ರೋಲ್ ಹಾಗೂ 1.05 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಆಯ್ಕೆಯೊಂದಿಗೆ ಆಗಮನವಾಗಲಿದೆ.

ಅಂತಿಮವಾಗಿ ಟಾಟಾದ ಸನಂದ್ ಘಟಕದಲ್ಲೇ ನೂತನ ಕಾಂಪಾಕ್ಟ್ ಸೆಡಾನ್ ಕಾರು ನಿರ್ಮಾಣವಾಗಲಿದೆ. ಇದೇ ವೇಳೆಯಲ್ಲಿ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಎಎಂಟಿ ಆವೃತ್ತಿಯು ಬಿಡುಗಡೆಯಾಗಲಿದೆ.


Click it and Unblock the Notifications