ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

By Nagaraja

ಇನ್ನು ಮುಂದೆ ಟಾಟಾ ಕಾರು ಖರೀದಿಗೂ ಎರಡೆರಡು ಬಾರಿ ಯೋಚಿಸಬೇಕಾದಿತೇ? ಹೌದು, ಇಂತಹದೊಂದು ಪ್ರಶ್ನೆ ಬಲವಾಗಿ ಮೂಡಿ ಬರುತ್ತಿದೆ. ಯಾಕೆಂದರೆ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಸದ್ಯದಲ್ಲೇ ತನ್ನೆಲ್ಲ ಪ್ರಯಾಣಿಕ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲಿದೆ.

ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಹಬ್ಬದ ಆವೃತ್ತಿಯ ಹೊರತಾಗಿಯೂ ಬೆಲೆ ಏರಿಕೆಗೊಳಿಸಲು ಮುಂದಾಗುತ್ತಿದೆ. ಇತ್ತೀಚೆಗಷ್ಟೇ ಮಾರುತಿ, ಮಹೀಂದ್ರ ಹಾಗೂ ಹ್ಯುಂಡೈ ಸಂಸ್ಥೆಗಳು ಏರಿ ಏರಿಕೆ ನೀತಿಯನ್ನು ಘೋಷಿಸಿದ್ದವು.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಈ ಸಂಬಂಧ ಹೇಳಿಕೆ ಕೊಟ್ಟಿರುವ ಟಾಟಾ ಮೋಟಾರ್ಸ್ ವಾಣಿಜ್ಯ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಮಯಾಂಕ್ ಪರೀಕ್, ಹಬ್ಬದ ಆವೃತ್ತಿಯ ವೇಳೆಯಲ್ಲಿ ಬೆಲೆ ಏರಿಕೆಯು ಅನಿವಾರ್ಯವೆನಿಸಿದೆ ಎಂದು ವಿವರಿಸಿದ್ದಾರೆ.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಗ್ರಾಹಕರ ಹಿತ ದೃಷ್ಟಿಯಿಂದ ಕಳೆದ ಕೆಲವು ಸಮಯಗಳಿಂದ ಬೆಲೆ ಏರಿಕೆಯನ್ನು ಘೋಷಿಸಿಲ್ಲ. ಆದರೆ ಈಗ ನಿರ್ಮಾಣ ವೆಚ್ಚ ಏರಿಕೆಯಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವೆನಿಸಿದೆ ಎಂದು ಟಾಟಾ ವಿವರಿಸಿದೆ.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಎಂಟ್ರಿ ಲೆವೆಲ್ ಟಾಟಾ ನ್ಯಾನೋದಿಂದ ಹಿಡಿದು ಆರಿಯಾ ವರೆಗಿನ ವಿವಿಧ ಶ್ರೇಣಿಯ ಕಾರುಗಳನ್ನು ಟಾಟಾ ಮೋಟಾರ್ಸ್ ಮಾರಾಟ ಮಾಡುತ್ತಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.15 ಲಕ್ಷ ರು.ಗಳಿಂದ ಆರಂಭವಾಗಿ 16.3 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಇತ್ತೀಚೆಗಷ್ಟೇ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಶೇಕಡಾ ಒಂದರಷ್ಟು ಕಾರು ಬೆಲೆಯನ್ನು ಏರಿಕೆಗೊಳಿಸಿತ್ತು. ಇದರೊಂದಿಗೆ ಹಬ್ಬದ ವೇಳೆಯಲ್ಲಿ ಗ್ರಾಹಕರಿಗೆ ಕಹಿ ಹಾಗೂ ಸಿಹಿ ಅನುಭವ ಲಭಿಸಿದಂತಾಗಿದೆ.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಕಳೆದ ಆಗಸ್ಟ್ ತಿಂಗಳಲ್ಲೇ ಹ್ಯುಂಡೈ ಸಹ ತನ್ನ ಶ್ರೇಣಿಯ ಕಾರುಗಳಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು.

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಇನ್ನೊಂದೆಡೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ 20,000 ರು.ಗಳ ವರೆಗೆ ಬೆಲೆ ಹೆಚ್ಚಳಗೊಳಿಸಿತ್ತು.

ಟಾಟಾ ಕಾರುಗಳು ಪಟ್ಟಿ ಇಂತಿದೆ

ಟಾಟಾ ಕಾರುಗಳು ಪಟ್ಟಿ ಇಂತಿದೆ

ಹ್ಯಾಚ್ ಬ್ಯಾಕ್: ಟಿಯಾಗೊ, ಜೆನ್ ಎಕ್ಸ್ ನ್ಯಾನೋ, ಬೋಲ್ಟ್, ಇಂಡಿಕಾ

ಸೆಡಾನ್: ಜೆಸ್ಟ್, ಇಂಡಿಗೊ

ಉಪಯುಕ್ತ ವಾಹನಗಳು: ಸಫಾರಿ ಸ್ಟ್ರೋಮ್, ಸಫಾರಿ ಡಿಐಸಿಒಆರ್, ಸುಮೋ ಗೋಲ್ಡ್, ಕ್ಸೆನನ್ ಎಕ್ಸ್ ಟಿ, ಆರಿಯಾ

ಟಾಟಾ ಕಾರು ಖರೀದಿಗೂ ಮುನ್ನ ಎರಡೆರಡು ಬಾರಿ ಯೋಚಿಸಬೇಕೇ?

ಟಾಟಾ ಕಾರುಗಳಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಸಂಬಂಧ ನಿಖರ ಮಾಹಿತಿಗಳಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Monday, October 3, 2016, 12:04 [IST]
English summary
Tata Motors To Increase Prices Of Its Passenger Vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+