ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

By Nagaraja

ಬಿಡುಗಡೆಯಾದ ಒಂದು ತಿಂಗಳ ಅವಧಿಯೊಳಗೆ ಟಿಯೊಗೊ ಹ್ಯಾಚ್ ಬ್ಯಾಕ್ ಕಾರು ಟಾಟಾ ಸಂಸ್ಥೆಯ ಅಗ್ರ ಪ್ರಯಾಣಿಕ ಕಾರಿನ ಪಟ್ಟ ಆಲಂಕರಿಸಿಕೊಂಡಿದೆ. 2016 ಎಪ್ರಿಲ್ 06ರಂದು ಭರ್ಜರಿ ಬಿಡುಗಡೆ ಕಂಡಿರುವ ಟಾಟಾ ಟಿಯಾಗೊ ಒಂದು ತಿಂಗಳ ಅವಧಿಯಲ್ಲಿ 3,022 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ನಾವೀನ್ಯ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳು ಟಾಟಾ ಟಿಯಾಗೊ ಕಾರನ್ನು ಗ್ರಾಹಕರು ಅತಿ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಲು ಸಹಕಾರಿಯಾಗಿದೆ. ಅಲ್ಲದೆ ಬಿಡುಗಡೆ ವೇಳೆಯಲ್ಲಿ ಒಂದು ಲಕ್ಷದಷ್ಟು ಮಂದಿ ಕಾರಿನ ಬಗ್ಗೆ ವಿಚಾರಿಸಿರುವುದು ಗಮನಾರ್ಹವೆನಿಸುತ್ತದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಟಾಟಾ ಟಿಯಾಗೊ ಡೀಸೆಲ್ ಆವೃತ್ತಿಯು ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯು 4.08 ಲಕ್ಷ ರು.ಗಳಿಂದ ಟಾಪ್ ಎಂಡ್ 5.69 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ. ಅದೇ ರೀತಿ ಪೆಟ್ರೋಲ್ ಆವೃತ್ತಿಯ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 3.72 ಲಕ್ಷ ರು.ಗಳಿಂದ 4.89 ಲಕ್ಷ ರು.ಗಳಿಷ್ಟಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಟಾಟಾದ ಇತರೆ ಜನಪ್ರಿಯ ಮಾದರಿಗಳಾಗಿರುವ ಟ್ಯಾನೋ ನ್ಯಾನೋ 1,100, ಟಾಟಾ ಬೋಲ್ಟ್ 290, ಟಾಟಾ ಇಂಡಿಕಾ ಹಾಗೂ ವಿಸ್ಟಾ 1694, ಟಾಟಾ ಜೆಸ್ಟ್ 1419, ಟಾಟಾ ಇಂಡಿಗೊ ಹಾಗೂ ಮಾಂಝಾ 1581, ಟಾಟಾ ಸುಮೋ 814 ಮತ್ತು ಟಾಟಾ ಸಫಾರಿ ಹಾಗೂ ಸ್ಟ್ರೋಮ್ 539 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಈ ಪೈಕಿ ಟಾಟಾ ಆರಿಯಾ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಟಾಟಾ ಟಿಯಾಗೊದ ಅಮೋಘ ಪ್ರದರ್ಶನದ ನೆರವಿನೊಂದಿಗೆ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಕಳೆದ ವರ್ಷಕ್ಕಿಂತಲೂ ಶೇಕಡಾ 2.2 ರಷ್ಟು ಏರುಗತಿ ಸಾಧಿಸಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಟಾಟಾ ಟಿಯಾಗೊದಲ್ಲಿ 1.2 ಲೀಟರ್ ತ್ರಿ ಸಿಲಿಂಡರ್ ಆಲ್ ಅಲ್ಯೂಮಿನಿಯಂ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಮತ್ತು 1.05 ಲೀಟರ್ ತ್ರಿ ಸಿಲಿಂಡರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದ್ದು, ಎಎಂಟಿ ಅತಿ ಶೀಘ್ರದಲ್ಲೇ ಹೊರಬರುವ ಸಾಧ್ಯತೆಯಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಮಾರುಕಟ್ಟೆಯಲ್ಲಿ ನೂತನ ಟಿಯಾಗೊ, ಹ್ಯುಂಡೈ ಐ10, ಮಾರುತಿ ಸೆಲೆರಿಯೊ ಮತ್ತು ಷೆವರ್ಲೆ ಬೀಟ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಇಷ್ಟೆಲ್ಲ ಆದರೂ ಮಾರುತಿ ಸೆಲೆರಿಯೊ ಸಮೀಪಕ್ಕೂ ತಲುಪಲು ಟಾಟಾ ಟಿಯಾಗೊ ವಿಫಲವಾಗಿದೆ. ಕಳೆದ ತಿಂಗಳಲ್ಲಿ ಮಾರುತಿ ಸೆಲೆರಿಯೊ 8500 ಯುನಿಟ್ ಗಳ ಮಾರಾಟವನ್ನು ದಾಖಲಿಸಿತ್ತು.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಮಗದೊಂದು ಮೂಲಗಳ ಪ್ರಕಾರ ಟಾಟಾ ಟಿಯೊಗೊ ಕಾರಿಗೆ ಸದ್ಯದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬಲ್ಲ ಮೂಲಗಳ ಪ್ರಕಾರ ಟಾಟಾ ಟಿಯಾಗೊ ಕಾರಿಗೆ 3,000 ರು.ಗಳಷ್ಟು ಬೆಲೆ ಏರಿಕೆ ಕಂಡುಬರಲಿದೆ.

ಬಿಡುಗಡೆಯಾದ ಒಂದೇ ತಿಂಗಳಲ್ಲೇ ಟಿಯಾಗೊಗೆ ಟಾಟಾದ ಅಗ್ರ ಕಾರಿನ ಪಟ್ಟ

ಒಟ್ಟಾರೆಯಾಗಿ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿರುವ ಟಾಟಾ, ಟಿಯೊಗೊದಂತಹ ಹೊಸ ಹೊಸ ಆವೃತ್ತಿಗಳೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ.

Article Published On: Wednesday, May 11, 2016, 12:22 [IST]
English summary
Tata Tiago Outsells Its Stablemates Within First Month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+