ಬರುತ್ತಿದೆ ಟಿಯಾಗೊ; ಟಾಟಾಗೆ ವರದಾನವಾಗಲಿದೆಯೇ?

By Nagaraja

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಪ್ರಸಕ್ತ ತಿಂಗಳಿನಲ್ಲೇ ಬಹುನಿರೀಕ್ಷಿತ 'ಟಿಯಾಗೊ' ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ. ಈ ಮಹತ್ತರ ಅಭಿಯಾನಕ್ಕೆ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಚಾಲನೆ ನೀಡಿದ್ದರು.

Also Read: ಉದಯಿಸುವ ಮೊದಲೇ ಅಸ್ತಮಿಸಿದ ಟಾಟಾ ಝಿಕಾ ?

ಈ ಹಿಂದೆ 'ಝಿಕಾ' ಎಂಬ ಹೆಸರಿನಿಂದ ಅರಿಯಲ್ಪಟ್ಟಿದ್ದ ಟಾಟಾ ನೂತನ ಟಿಯಾಗೊ ಕಾರನ್ನು ಸಂಸ್ಥೆ ನಡೆಸಿರುವ 'ಫೆಂಟಾಸ್ಟಿಕೊ ಹಂಟ್' ಮುಖಾಂತರ ಟಿಯಾಗೊ ಎಂಬುದಾಗಿ ಬದಲಾಯಿಸಲಾಗಿತ್ತು. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಟಾಟಾ ಝಿಕಾ ಇದೇ ಬರುವ 2016 ಮಾರ್ಚ್ 28ರಂದು ಭರ್ಜರಿ ಬಿಡುಗಡೆ ಕಾಣಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಪ್ರಮುಖವಾಗಿಯೂ ಮಾರುತಿ ಸುಜುಕಿ ಸೆಲೆರಿಯೊ, ಹ್ಯುಂಡೈ ಐ10 ಮುಂತಾದ ಮಾದರಿಗಳಿಗೆ ಟಾಟಾ ಟಿಯಾಗೊ ಪ್ರತಿಸ್ಪರ್ಧಿಯಾಗಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಟಾಟಾ ಝಿಕಾ ಕಾರಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. 2016 ಆಟೋ ಎಕ್ಸ್ ಪೋದಲ್ಲಿ ಟಾಟಾ ಕೈಟ್ ಜೊತೆ ಟಿಯಾಗೊ ಸಹ ಮನರಂಜಿಸಿತ್ತು.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಮಾರುಕಟ್ಟೆಯಲ್ಲಿ ಇಂಡಿಕಾ ಇವಿ2 ಸ್ಥಾನವನ್ನು ತುಂಬಲಿರುವ ನೂತನ ಟಾಟಾ ಟಿಯಾಗೊ, ಈಗ ಮಾರಾಟದಲ್ಲಿರುವ ನ್ಯಾನೋ ಹಾಗೂ ಬೋಲ್ಟ್ ನಡುವಣ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಟಾಟಾ ಝಿಕಾದಲ್ಲಿ ಆಳವಡಿಸಲಾಗಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಂತೆ ಇದರ 1.05 ಲೀಟರ್ ಡೀಸೆಲ್ ಎಂಜಿನ್ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಎರಡು ಎಂಜಿನ್ ಗಳು 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದ್ದು, ಭವಿಷ್ಯದಲ್ಲಿ ಎಎಂಟಿ ಗೇರ್ ಬಾಕ್ಸ್ ಸಹ ಸೇರ್ಪಡೆಯಾಗಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಇನ್ನು ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಬೋಲ್ಟ್ ನಲ್ಲಿರುವುದಕ್ಕೆ ಸಮಾನವಾದ ಹರ್ಮಾನ್ ಮ್ಯೂಸಿಕ್ ಸಿಸ್ಟಂ ಕಂಡುಬರಲಿದೆ. ಇದರಲ್ಲದೆ 22 ಸ್ಟೋರೆಜ್ ಜಾಗ, ನೇವಿಗೇಷನ್ ಸಿಸ್ಟಂ, ಪಾರ್ಕಿಂಗ್ ಸೆನ್ಸಾರ್ ಮುಂತಾದ ಸೌಲಭ್ಯಗಳಿರಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಡ್ಯುಯಲ್ ಏರ್ ಬ್ಯಾಗ್ ಜೊತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ), ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮುಂತಾದ ವ್ಯವಸ್ಥೆಗಳಿರಲಿದೆ.

ಮಾರ್ಚ್ 28ರಂದು ಟಾಟಾ ಟಿಯಾಗೊ ಬಿಡುಗಡೆ

ನೂತನ ಟಾಟಾ ಝಿಕಾ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಪ್ರಯಾಣಿಕ ಕಾರು ಮಾರುಕಟ್ಟೆಗೆ ಟಾಟಾ ಸಂಸ್ಥೆ ಭರ್ಜರಿ ಪುನರಾಗಮನ ಮಾಡಿಕೊಳ್ಳಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇವನ್ನೂ ಓದಿ...

ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ

Article Published On: Monday, March 7, 2016, 10:31 [IST]
English summary
Tata Tiago Launch Date Set For March 28
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+