ತ್ವರೆ ಮಾಡಿರಿ; ಸೆಡಾನ್ ಕಾರುಗಳ ಮೇಲೆ ಭಾರಿ ಆಫರ್

By Nagaraja

ಮಾನ್ಸೂನ್ ಕಾಲ ಜೂನ್ ಆಗಮನವಾಗುತ್ತಿರುವಂತೆಯೇ ದೇಶದ ಮುಂಚೂಣಿಯ ಕಾರು ಸಂಸ್ಥೆಗಳು ಭಾರಿ ಆಫರ್ ಗಳನ್ನು ಮುಂದಿಟ್ಟಿದೆ. ಸೆಡಾನ್ ಕಾರುಗಳು ಇವುಗಳಿಂದ ಹೊರತಾಗಿಲ್ಲ. ಮಧ್ಯಮ ಗಾತ್ರದ ಸೆಡಾನ್ ಕಾರುಗಳು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಹೊಸ ಹೊಸ ಮಾದರಿಗಳು ಅತ್ಯುತ್ತಮ ಬೇಡಿಕೆ ಕಾಯ್ದುಕೊಳ್ಳುವ ಇದೇ ಹೊತ್ತಿನಲ್ಲಿ ಆಗಲೇ ಮಾರುಕಟ್ಟೆಯಲ್ಲಿರುವ ಸೆಡಾನ್ ಕಾರುಗಳು ಕೊಂಚ ಹಿನ್ನಡೆ ಅನುಭವಿಸಿದೆ. ಈ ಹಿನ್ನಲೆಯಲ್ಲಿ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ವಾಹನ ಸಂಸ್ಥೆಗಳು ಭಾರಿ ಆಫರುಗಳೊಂದಿಗೆ ಮುಂದೆ ಬಂದಿದೆ.

05. ಹೋಂಡಾ ಸಿಟಿ

05. ಹೋಂಡಾ ಸಿಟಿ

ಕಳೆದ ವರ್ಷ ಪರಿಷ್ಕೃತ ಸಿಟಿ ಕಾರನ್ನು ಜಪಾನ್ ಮೂಲದ ಹೋಂಡಾ ಪರಿಚಯಿಸಿತ್ತು. ಇದು ಈ ವಿಭಾಗದಲ್ಲಿ ಸರಾಸರಿ ಅತ್ಯುತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಪ್ರಸ್ತುತ ಡೀಸೆಲ್ ಕಾರಿನ ಮೇಲೆ 60,000 ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ.

 ಹೋಂಡಾ ಸಿಟಿ

ಹೋಂಡಾ ಸಿಟಿ

ಹೋಂಡಾ ಸಿಟಿ ಪೆಟ್ರೋಲ್ ಆವೃತ್ತಿಯಲ್ಲಿ 15,000 ರು.ಗಳ ವರೆಗೆ ಆಫರ್ ಲಭ್ಯವಿರುತ್ತದೆ. ಇದಲ್ಲದೆ 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಹ ಗ್ರಾಹಕರು ಈಡು ಮಾಡಬಹುದಾಗಿದೆ.

04. ನಿಸ್ಸಾನ್ ಸನ್ನಿ

04. ನಿಸ್ಸಾನ್ ಸನ್ನಿ

ಕಳಪೆ ಮಾರಾಟದಿಂದ ಹೊರ ಬರುವ ತವಕದಲ್ಲಿರುವ ಸನ್ನಿ ಸೆಡಾನ್ ಕಾರಿಗೆ ಗರಿಷ್ಠ ಆಫರುಗಳನ್ನು ಮುಂದಿಡಲು ನಿಸ್ಸಾನ್ ನಿರ್ಧರಿಸಿದೆ. ನಿಸ್ಸಾನ್ ಸನ್ನಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಡಿಸ್ಕೌಂಟ್ ಲಭ್ಯವಿರಲಿದೆ.

ನಿಸ್ಸಾನ್ ಸನ್ನಿ

ನಿಸ್ಸಾನ್ ಸನ್ನಿ

ನಿಸ್ಸಾನ್ ಸನ್ನಿ ಕಾರಿಗೆ ಗರಿಷ್ಠ 70,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುವುದು. ಈ ಜೂನ್ ವೇಳೆಯಲ್ಲಿ ಇದರ ಸಂಪೂರ್ಣ ಪ್ರಯೋಜನ ಗ್ರಾಹಕರು ಪಡೆಯಬಹುದಾಗಿದೆ.

03. ಹ್ಯುಂಡೈ ವೆರ್ನಾ

03. ಹ್ಯುಂಡೈ ವೆರ್ನಾ

ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವ ಇರಾದೆಯಲ್ಲಿರುವ ಹ್ಯುಂಡೈ, ತನ್ನ ಜನಪ್ರಿಯ ವೆರ್ನಾ ಸೆಡಾನ್ ಕಾರಿಗೂ ಅತ್ಯುತ್ತಮ ಆಫರುಗಳನ್ನು ಮುಂದಿಡುತ್ತಿದೆ. ಹ್ಯುಂಡೈ ವೆರ್ನಾ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೂ ಆಫರ್ ಅನ್ವಯವಾಗಲಿದೆ.

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೆ 80,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇದು 10,000 ರು.ಗಳ ಲಾಯಲ್ಟಿ ಬೋನಸ್, 20,000 ರು.ಗಳ ನಗದು ರಿಯಾಯಿತಿ ಮತ್ತು 50,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸೇರರಲಿದೆ.

02. ಫಿಯೆಟ್ ಲಿನಿಯಾ

02. ಫಿಯೆಟ್ ಲಿನಿಯಾ

ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯು ತನ್ನ ಲಿನಿಯಾ ಮಾದರಿಗೂ ಆಫರುಗಳನ್ನು ಮುಂದಿಡುತ್ತಿದೆ. ಇದು ಹೊಸ ಲಿನಿಯಾ ಮತ್ತು ಲನಿಯಾ ಕ್ಲಾಸಿಕ್ ಮಾದರಿಗಳನ್ನು ಒಳಗೊಂಡಿರಲಿದೆ.

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ ಕ್ಲಾಸಿಕ್ ಮತ್ತು ಹೊಸ ಲಿನಿಯಾ ಮಾದರಿಗಳಿಗೆ ಅನುಕ್ರಮವಾಗಿ 65,000 ಮತ್ತು 95,000 ರು.ಗಳ ಡಿಸ್ಕೌಂಟ್ ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಒಂದು ವರ್ಷದ ಉಚಿತ ವಿಮಾ ಸೇವೆಯನ್ನು ನೀಡುತ್ತಿದೆ.

01. ಹ್ಯುಂಡೈ ಎಲಂಟ್ರಾ

01. ಹ್ಯುಂಡೈ ಎಲಂಟ್ರಾ

ವೆರ್ನಾ ಜೊತೆಗೆ ಮಗದೊಂದು ಆಕರ್ಷಕ ಮಾದರಿಯಾಗಿರುವ ಎಲಂಟ್ರಾ ಸೆಡಾನ್ ಕಾರಿಗೂ ಹ್ಯುಂಡೈ ಆಫರ್ ಗಳನ್ನು ಒದಗಿಸುತ್ತಿದೆ. ಎಲಂಟ್ರಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಿಗೂ ಆಫರ್ ಗಳು ಅನ್ವಯವಾಗಲಿದೆ.

ಹ್ಯುಂಡೈ ಎಲಂಟ್ರಾ

ಹ್ಯುಂಡೈ ಎಲಂಟ್ರಾ

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಎಲಂಟ್ರಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಿಗೆ ತಲಾ 1.30 ಲಕ್ಷ ರು.ಗಳ ಡಿಸ್ಕೌಂಟ್ ಗಳನ್ನು ನೀಡುತ್ತಿದೆ.

ತ್ವರೆ ಮಾಡಿರಿ; ಈ 5 ಸೆಡಾನ್ ಕಾರುಗಳ ಮೇಲೆ ಭಾರಿ ಆಫರ್

ನಿಮ್ಮ ನೆಚ್ಚಿನ ಸೆಡಾನ್ ಕಾರು ಯಾವುದು ? ಈ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

More from DriveSpark

Article Published On: Friday, June 17, 2016, 17:22 [IST]
English summary
Here Are The Top 5 Sedans With Huge Discounts For June 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+