2016 ಟೊಯೊಟಾ ಕೊರೊಲ್ಲಾ ಇಸ್ಪೋರ್ಟ್ ಎಡಿಷನ್ ಬಿಡುಗಡೆ
ಟೊಯೊಟಾ ಮೋಟಾರು ಥಾಯ್ಲೆಂಡ್ ಸಂಸ್ಥೆಯು ತಾಯ್ನಾಡಿನಲ್ಲಿ ಅತಿ ನೂತನ 2016 ಕೊರೊಲ್ಲಾ ಇಸ್ಪೋರ್ಟ್ ನರ್‌ಬರ್ಗ್‌ರಿಂಗ್ ಎಡಿಷನ್ ಬಿಡುಗಡೆ ಮಾಡಿದೆ. ಇದು ತನ್ನ ಹಿಂದಿನ ಮಾದರಿಗಿಂತಲೂ ಗಮನಾರ್ಹ ಬದಲಾವಣೆಗಳನ್ನು ಪಡೆದಿದ್ದು, ಹೆಚ್ಚಿನ ಅಂದತೆಯನ್ನು ಕಾಪಾಡಿಕೊಂಡಿದೆ.

ಟೊಯೊಟಾ 2016 ಕೊರೊಲ್ಲಾ ಇಸ್ಪೋರ್ಟ್ ನರ್‌ಬರ್ಗ್‌ರಿಂಗ್ ಎಡಿಷನ್, ಹೊಸತಾದ ಬಂಪರ್ ಜೊತೆ ಆಕ್ರಮಣಕಾರಿ 17 ಇಂಚುಗಳ ಅಲಾಯ್ ಚಕ್ರಗಳನ್ನು ಪಡೆದಿದೆ.

ಪಿಯಾನೊ ಬ್ಲ್ಯಾಕ್ ಗ್ರಿಲ್, ರಿಯರ್ ಸ್ಪಾಯ್ಲರ್, ರಿಯರ್ ಬಂಪರ್ ನಲ್ಲಿ ಫಾಕ್ಸ್ ಡಿಫ್ಯೂಸರ್ ಮತ್ತು ಮುಂಭಾಗದ ವಿಂಗ್ ನಲ್ಲಿ ಗ್ರೀನ್ ಹೆಲ್ ಸ್ಟಿಕ್ಕರ್ ಗಳಿರಲಿದೆ.

ಹಿಂದಿನ ಮಾದರಿಯಂತೆ ಕಾರಿನೊಳಗೆ ಆಲ್ ಬ್ಲ್ಯಾಕ್ ಇಂಟಿರಿಯರ್ ಹಾಗೂ ಡ್ಯಾಶ್ ಬೋರ್ಡ್, ಡೋರ್ ಪ್ಯಾನೆಲ್ ಹಾಗೂ ಫ್ಲೋರ್ ಕಾರ್ಪೆಟ್ ನಲ್ಲಿ ಕೆಂಪು ಪಟ್ಟಿಯನ್ನು ಕೊಡಲಾಗಿದೆ.

ಹೊಸತಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ಡದಾದ ಬಹು ಮಾಹಿತಿ ಪರದೆ ಮತ್ತು ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲಿ ಹೊಸ ಸಾಫ್ಟ್ ವೇರ್ ಗಳನ್ನು ಅಪ್ ಡೇಟ್ ಮಾಡಲಾಗಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಕೊರೊಲ್ಲಾ ಇಸ್ಪೋರ್ಟ್ ಮತ್ತು ಇಸ್ಪೋರ್ಟ್ ನರ್ ಬರ್ಗ್ ರಿಂಗ್ ಆವೃತ್ತಿಯಲ್ಲಿರುವ 1.8 ಲೀಟರ್ ಫೋರ್ ಸಿಲಿಂಡರ್ ಡ್ಯುಯಲ್ ವಿವಿಟಿಐ ಎಂಜಿನ್ 177 ಎನ್ ಎಂ ತಿರುಗುಬಲದಲ್ಲಿ 141 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಏಳು ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಇರಲಿದೆ.


Click it and Unblock the Notifications








