ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

By Nagaraja

ಭಾರತದಲ್ಲಿ ಇನ್ನೋವಾಕ್ಕೆ ದೊರಕಿರುವ ಯಶಸ್ಸಿನಿಂದ ಪ್ರೇರಣೆಗೊಂಡಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ ಮಗದೊಂದು ಐಷಾರಾಮಿ ಬಹು ಬಳಕೆಯ ವಾಹನವನ್ನು (ಎಂಪಿವಿ) ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಲ್ಲ ಮೂಲಗಳ ಪ್ರಕಾರ ಸಂಪೂರ್ಣ ಐಷಾರಾಮಿ ಪ್ಯಾಕೇಜ್ ಗಳನ್ನು ಆಲ್ಫಾರ್ಡ್ ಎಂಪಿವಿ ನಿಕಟ ಭವಿಷ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ದೇಶದಲ್ಲಿ ತನ್ನ ಸಾನಿಧ್ಯವನ್ನುಮತ್ತಷ್ಟು ಗಟ್ಟಿಪಡಿಸುವ ಮೂಲಕ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳಲು ಟೊಯೊಟಾಗೆ ನೆರವಾಗಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಕಳೆದೊಂದು ದಶಕದಲ್ಲಿ ದೇಶದಲ್ಲಿ ಸದ್ದು ಮಾಡಿರುವ ಇನ್ನೋವಾದ ಹೊಸ ಅವತಾರ ಇನ್ನೋವಾ ಕ್ರೈಸ್ಟಾ ಸಹ ದೇಶದಲ್ಲಿ ಸದ್ದು ಮಾಡುತ್ತಿದೆ. ಸಂಸ್ಥೆಯೀಗ ಮಗದೊಂದು ಆಕರ್ಷಕ ಎಂಪಿವಿ ಬಿಡುಗಡೆಯ ತಯಾರಿಯಲ್ಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಐದು ಮೀಟರ್ ಉದ್ದ, ಅತ್ಯುತ್ತಮ ರಸ್ತೆ ಸಾನಿಧ್ಯ, ಕ್ರೋಮ್ ಗ್ರೀಲ್, ಲೆಥರ್ ನಿಂದ ಕೂಡಿದ ಒಳಮೈ, ಗರಿಷ್ಠ ತಾಂತ್ರಿಕತೆ, ಆಟೋಮ್ಯಾಟಿಕ್ ಕ್ರಿಯಾತ್ಮಕತೆ ಹೀಗೆ ಎಲ್ಲ ಅಂಶಗಳಲ್ಲೂ ನೂತನ ಎಂಪಿವಿ ಮಿಂಚಿಂಗ್ ಮಾಡಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಟೊಯೊಟಾ ಆಲ್ಫಾರ್ಡ್ ಬಹು ಬಳಕೆಯ ವಾಹನವು ದೇಶದಲ್ಲಿ 50 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಹೆಚ್ಚು ಸ್ಥಳಾವಕಾಶ, ವೈಯಕ್ತಿಕ ಆಯ್ಕೆಗಳು, ಸುಲಭವಾಗಿ ನಿರ್ವಹಿಸಬಹುದಾದ ಸೀಟುಗಳು, ಇನ್ನೋವಾ ಕ್ರೈಸ್ಟಾಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳು ಆಲ್ಫಾರ್ಡ್ ಕಾರನ್ನು ಪಕ್ಕಾ ಆಡಂಬರ ಕಾರಾಗಿ ಪರಿವರ್ತಿಸಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಅಂದ ಹಾಗೆ ಟೊಯೊಟಾ ಆಲ್ಫಾರ್ಡ್ ಶಕ್ತಿಶಾಲಿ 3.45 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದನ್ನು ಕ್ಯಾಮ್ರಿ ಹೈಬ್ರಿಡ್ ಮಾದರಿಗೆ ಸಮಾನವಾಗಿ ಹೈಬ್ರಿಡ್ ಎಂಜಿನ್ ಸಹ ಯೋಜನೆಯಲ್ಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಇದು 2.5 ಲೀಟರ್ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಬಳಕೆಯಾಗಲಿದೆ. ಭವಿಷ್ಯದಲ್ಲಿ ಭಾರತದಲ್ಲೂ ಹೈಬ್ರಿಡ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಲಿದೆ.

ಇನ್ನೋವಾ ಬಳಿಕವೀಗ ಮಗದೊಂದು ಲಗ್ಷುರಿ ಎಂಪಿವಿ ಭಾರತಕ್ಕೆ

ಟೊಯೊಟಾ ಆಲ್ಫಾರ್ಡ್ 4915 ಎಂಎಂ ಉದ್ದ, 1850 ಎಂಎಂ ಅಗಲ ಹಾಗೂ 3000 ಎಂಎಂ ಚಕ್ರಾಂತರವನ್ನು ಪಡೆಯಲಿದೆ.


More from DriveSpark

Article Published On: Friday, September 2, 2016, 10:23 [IST]
English summary
Here Is Why Toyota India Should Launch The Luxurious Alphard MPV
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+