ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಈ ವರ್ಷಾಂತ್ಯದ ವೇಳೆಯಲ್ಲಿ ಟೊಯೊಟಾ ಕಾರುಗಳ ಖರೀದಿ ವೇಳೆಯಲ್ಲಿ ಆನ್ ರೋಡ್ ಬೆಲೆಯ ಮೇಲೆ ಶೇಕಡಾ 100ರಷ್ಟು ಹಣಕಾಸು ನೆರವನ್ನು ಪಡೆಯಬಹುದಾಗಿದೆ.

By Nagaraja

ಟೊಯೊಟಾ ಕಾರುಗಳನ್ನು ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಈ ಕೂಡಲೇ ಟೊಯೊಟಾ ಕಾರುಗಳನ್ನು ಖರೀದಿಸಿ. ಯಾಕೆಂದರೆ ಈ ವರ್ಷಾಂತ್ಯದ ವೇಳೆಯಲ್ಲಿ ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಟೊಯೊಟಾವು 'ರಿಮೆಂಬರ್ ಡಿಸೆಂಬರ್ ಆಫರ್' ಮುಂದಿಡುತ್ತಿದೆ. ಅದೇ ಹೊತ್ತಿಗೆ ಮಗದೊಂದು ಶಾಕ್ ನೀಡಲಿರುವ ಸಂಸ್ಥೆಯು ಹೊಸ ವರ್ಷದಿಂದ ಬೆಲೆ ಏರಿಕೆ ನೀತಿಯನ್ನು ಅನುಸರಿಸಲಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಇದರೊಂದಿಗೆ ಗ್ರಾಹಕರಿಗೆ ಬೇವು-ಬೆಲ್ಲವನ್ನು ಟೊಯೊಟಾ ನೀಡಿದಂತಾಗಿದೆ. 2017 ಜನವರಿ 01ರಂದು ಜಾರಿಗೆ ಬರುವಂತೆಯೇ ಶೇಕಡಾ 3ರಷ್ಟು ಬೆಲೆ ಏರಿಕೆಗೊಳಿಸಲು ಟೊಯೊಟಾ ನಿರ್ಧರಿಸಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ನಿರ್ಮಾಣ ವೆಚ್ಚ ಏರಿಕೆ ಹಾಗೂ ವಿದೇಶಿ ವಿನಿಮಯ ದರಗಳು ಏರುಗತಿಯನ್ನು ಕಂಡಿರುವುದು ಪ್ರಮುಖವಾಗಿಯೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಟೊಯೊಟಾ ಪ್ರಕಟಣೆಯಲ್ಲಿ ತಿಳಿಸಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಅದೇ ಹೊತ್ತಿಗೆ ರಿಮೆಂಬರ್ ಡಿಸೆಂಬರ್ ಆಫರ್ ಪ್ರಕಟಿಸಿರುವ ಟೊಯೊಟಾ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳ ಖರೀದಿ ವೇಳೆಯಲ್ಲಿ ಆನ್ ರೋಡ್ ಬೆಲೆಯ ಮೇಲೆ ಶೇಕಡಾ 100ರಷ್ಟು ಹಣಕಾಸು ನೆರವನ್ನು ಒದಗಿಸಲು ಮುಂದಾಗಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಮಾರುಕಟ್ಟೆಯಲ್ಲಿ ಹಾಕ್ ಕೇಕ್ ತರಹನೇ ಮಾರಾಟವಾಗುತ್ತಿರುವ ಟೊಯೊಟಾ ಇನ್ನೋವಾ ಖರೀದಿ ವೇಳೆಯಲ್ಲಿ ಆನ್ ರೋಡ್ ಬೆಲೆಯ ಮೇಲೆ ಶೇಕಡಾ 100ರಷ್ಟು ಹಣಕಾಸು ನೆರವು ದೊರಕಲಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಹಾಗೆಯೇ 11ನೇ ತಲೆಮಾರಿನ ಟೊಯೊಟಾ ಕರೊಲ್ಲಾ ಆಲ್ಟೀಸ್ ಕಾರು ಖರೀದಿ ವೇಳೆಯಲ್ಲಿ 60,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಇನ್ನು ಟೊಯೊಟಾ ಪ್ಲಾಟಿನಾಂ ಎಟಿಯೋಸ್ ಖರೀದಿಯಲ್ಲಿ 40,000 ರು.ಗಳ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಇತ್ತೀಚೆಗಷ್ಟೇ ಬಿಡುಗಡೆಯಾದ ಫಾರ್ಚ್ಯುನರ್ ಗೆ ಅತ್ಯುತ್ತಮ ಬೇಡಿಕೆ ಕಂಡುಬಂದಿರುವುದರಿಂದ ನವೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 10ರಷ್ಟು ಏರಿಕೆಯನ್ನು ಕಂಡಿತ್ತು. ಆದರೂ ಪ್ರಸ್ತುತ ಆಫರ್ ನಿಂದ ಫಾರ್ಚ್ಯುನರ್ ಕಾರನ್ನು ಹೊರತುಪಡಿಸಲಾಗಿದೆ.

ಟೊಯೊಟಾ ರಿಮೆಂಬರ್ ಡಿಸೆಂಬರ್ ಆಫರ್; ಹೊಸ ವರ್ಷದಿಂದ ದುಬಾರಿ

ಅತ್ತ ಇನ್ನೋವಾ ಕ್ರೈಸ್ಟಾ ಮತ್ತು ಹೊಸತಾದ ಪ್ಲಾಟಿನಂ ಎಟಿಯೋಸ್ ಕೂಡಾ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಪಾಡಿಕೊಂಡಿದೆ.

More from DriveSpark

Article Published On: Tuesday, December 6, 2016, 9:40 [IST]
English summary
Toyota India Announce Remember December Offer For 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+