ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

By Nagaraja

ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ ಫಾರ್ ಸೌಥ್ ಈಸ್ಟ್ ಏಷ್ಯನ್ ಕಂಟ್ರೀಸ್ (ASEAN NCAP) ನಡೆಸಿರುವ ಢಿಕ್ಕಿ ಅಥವಾ ಅಪಘಾತ ಪರೀಕ್ಷೆಯಲ್ಲಿ (Crash Test) ನಾಲ್ಕು ಸ್ಟಾರ್ ರೇಟಿಂಗ್ ಗೆದ್ದುಕೊಳ್ಳುವಲ್ಲಿ ನೂತನ ಟೊಯೊಟಾ ಇನ್ನೋವಾ ಯಶ ಕಂಡಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಇನ್ನೋವಾ ಭರ್ಜರಿ ಪ್ರದರ್ಶನ ಕಂಡಿತ್ತು. ಇದಾದ ಬೆನ್ನಲ್ಲೇ ಇಂತಹದೊಂದು ಶುಭ ಸಮಾಚಾರ ಬಂದಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ಭಾರತದಲ್ಲೂ ಬಿಡುಗಡೆಯಾಗಲಿರುವ 2016 ಇನ್ನೋವಾದ ಬೇಸ್ ವೆರಿಯಂಟ್ ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ನಾಲ್ಕು ಸ್ಟಾರ್ ಗೆದ್ದುಕೊಂಡಿರುವುದು ವಾಹನ ಸವಾರರಲ್ಲಿ ಹೆಚ್ಚು ನಿರಾಳತೆಗೆ ಸಾಕ್ಷಿಯಾಗಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ನೂತನ ಕಾರು ಹೊಸತಾದ ಇನ್ನೋವಾ ಕ್ರೈಸ್ಟಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ವ್ಯವಸ್ಥೆಯ ಕೊರತೆಯೂ ನಡುವೆಯೂ ಪರಿಣಾಮಕಾರಿ ಎನಿಸಿಕೊಂಡಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ನೂತನ ಇನ್ನೋವಾ ಕ್ರೈಸ್ಟಾ, ವಯಸ್ಕ ಪ್ರಯಾಣಿಕರ ಭದ್ರತೆಯಲ್ಲಿ 14.10 ಪಾಯಿಂಟ್ ಹಾಗೂ ಮಕ್ಕಳ ಭದ್ರತೆಯಲ್ಲಿ ಶೇಕಡಾ 76ರಷ್ಟನ್ನು ಕಾಪಾಡಿಕೊಂಡಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅಲಭ್ಯತೆಯಿಂದಾಗಿ ಪಂಚ ತಾರೆಯನ್ನು ಗೆಲ್ಲುವಲ್ಲಿ ಇನ್ನೋವಾ ವೈಫಲ್ಯ ಅನುಭವಿಸಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ಹಾಗಿದ್ದರೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಹಾಗೂ ಸೀಟು ಬೆಲ್ಟ್ ರಿಮೈಂಡರ್ ಗಳು ಪರಿಣಾಮಕಾರಿ ಎನಿಸಿಕೊಂಡಿದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ಈಗ ಢಿಕ್ಕಿ ಪರೀಕ್ಷೆಗೆ ಒಳಪಡಿಸಿರುವ ಇನ್ನೋವಾ ಕ್ರೈಸ್ಟಾದ 2.0 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 183 ಎನ್ ಎಂ ತಿರುಗುಬಲದಲ್ಲಿ 137 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಏಷ್ಯಾ ಢಿಕ್ಕಿ ಪರೀಕ್ಷೆಯಲ್ಲಿ 4 ಸ್ಟಾರ್ ರೇಟಿಂಗ್ ಗೆದ್ದ ಇನ್ನೋವಾ

ಅಂದ ಹಾಗೆ ಭಾರತಕ್ಕೆ ಇನ್ನೋವಾ ಕ್ರೈಸ್ಟಾ 2016 ಮಧ್ಯಂತರ ಅವಧಿಯಲ್ಲಿ ಪ್ರವೇಶಿಸಲಿದೆ. ಇದರ ಮಗದೊಂದು 2.4 ಲೀಟರ್ ಡೀಸೆಲ್ ಎಂಜಿನ್ 359 ಎನ್ ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿ ಉತ್ಪಾದಿಸಲಿದ್ದು, ಮ್ಯಾನುವಲ್ ಅಂತೆಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

More from DriveSpark

Article Published On: Friday, February 19, 2016, 15:11 [IST]
English summary
ASEAN NCAP Crash Test: Toyota Innova Receives 4 Star Rating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+