ಜಪಾನ್‌ಗೆ ಎಂಟ್ರಿ ಕೊಟ್ಟ ಟೊಯಾಟಾ ಪಿಕ್ಸಿಸ್ ಸಣ್ಣ ಕಾರುಗಳು; ಭಾರತಕ್ಕೆ ಬರುತ್ತಾ?
ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ತವರೂರಿನಲ್ಲಿ ತ್ರಿವಳಿ ಪಿಕ್ಸಿಸ್ ಜಾಯ್ ಪ್ರಯಾಣಿಕ ಸಣ್ಣ ಕಾರನ್ನು ಬಿಡುಗಡೆಗೊಳಿಸಿದೆ. ಇದು ಜಪಾನ್ ನ್ಲಲಿ ಸ್ಥಿತಗೊಂಡಿರುವ ಟೊಯೊಟಾ ಡೀಲರ್ ಶಿಪ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
ಪಿಕ್ಸಿಸ್ ಮಾದರಿಗಳು
- ಪಿಕ್ಸಿಸ್ ಜಾಯ್ ಸಿ (ಕ್ರಾಸೋವರ್)
- ಪಿಕ್ಸಿಸ್ ಜಾಯ್ ಎಫ್ (ಫ್ಯಾಶನ್)
- ಪಿಕ್ಸಿಸ್ ಜಾಯ್ ಎಸ್ (ಸ್ಪೋರ್ಟ್)

ಜಪಾನ್ ನಿಯಮಗಳ ಪ್ರಕಾರ ಸಣ್ಣ ಕಾರುಗಳು 3.4 ಮೀಟರ್ ಉದ್ದ ಹಾಗೂ 1.5 ಮೀಟರ್ ಅಗಲದ ಪರಿಮಿತಿಯೊಳಗೆ ಇರಬೇಕಾಗುತ್ತದೆ. ಇನ್ನು ಗರಿಷ್ಠ 660 ಸಿಸಿ ಎಂಜಿನ್ ಹಾಗೂ 63 ಅಶ್ವಶಕ್ತಿಯನ್ನು ದಾಟಬಾರದು.
ಟೊಯೊಟಾ ಬಿಡುಗಡೆಗೊಳಿಸಿರುವ ತ್ರಿವಳಿ ಪಿಕ್ಸಿಸ್ ಸಣ್ಣ ಕಾರುಗಳು ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲಿದ್ದು, ಗರಿಷ್ಠ ಮಾರಾಟವನ್ನು ಗುರಿ ಮಾಡುತ್ತಿದೆ. ಅಂತೆಯೇ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇಕೊ ಕಾರುಗಳಿಗಾಗಿ ಜಪಾನ್ ಸರಕಾರದಿಂದ ಸಬ್ಸಿಡಿ ಹಾಗೂ ತೆರಿಗೆ ವಿನಾಯಿತಿ ಪಡೆದುಕೊಂಡಿರುವ ಈ ಎಲ್ಲ ಕಾರಗಳು ವಿವಿಧ ವರ್ಣಗಳ ಆಯ್ಕೆಗಳಲ್ಲಿ ಎಂಟ್ರಿ ಕೊಟ್ಟಿದೆ.
ಪಿಕ್ಸಿಸ್ ಜಾಯ್ ಕಾರುಗಳು ಸ್ಮಾರ್ಟ್ ಅಸಿಸ್ಟ್ II ಢಿಕ್ಕಿ ತಪ್ಪಿಸುವ ಸಹಾಯ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ. ತನ್ಮೂಲಕ ಗರಿಷ್ಠ ಸುರಕ್ಷತೆಯನ್ನು ಕಾಪಾಡಿಕೊಳ್ಳಲಿದೆ.

15 ಇಂಚುಗಳ ಚಕ್ರಗಳು, ಕ್ರಾಸೋವರ್ ಶೈಲಿಯ ನೋಟ, ಏರೋಡೈನಾಮಿಕ್ ವಿನ್ಯಾಸ, ಸ್ಪೋರ್ಟಿ ಸಸ್ಪೆನ್ಷನ್, ಪ್ಯಾಡಲ್ ಶಿಫ್ಟಿಂಗ್, ಏಳು ಸ್ಪೀಡ್ ಗೇರ್ ಬಾಕ್ಸ್ ಇತ್ಯಾದಿ ಸೌಲಭ್ಯಗಳು ಇರಲಿದೆ.
ಪಿಕ್ಸಿಸ್ ರುಪಾಯಿಗಳು ಭಾರತೀಯ ರುಪಾಯಿ ಪ್ರಕಾರ ಏಳರಿಂದ 10 ಲಕ್ಷ ರುಪಾಯಿಗಳ ವರೆಗೆ ದುಬಾರಿಯೆನಿಸುತ್ತದೆ. ಇದು ಸಂಸ್ಥೆಯ ದೈಹಟ್ಸು ಮೋಟಾರು ಕ್ಯುಶೂ ಕೊ ಘಟಕದಲ್ಲಿ ನಿರ್ಮಾಣವಾಗಲಿದೆ.
ಹಾಗೊಂದು ವೇಳೆ ಪಿಕ್ಸಿಸ್ ಸಣ್ಣ ಕಾರುಗಳು ಭಾರತಕ್ಕೂ ಎಂಟ್ರಿ ಕೊಟ್ಟಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದೆ. ಆದರೆ ಈ ಸಂಬಂಧ ಟೊಯೊಟಾ ಯಾವುದೇ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿಲ್ಲ.


Click it and Unblock the Notifications

























































