ಬೆಂಗಳೂರು ಪ್ರವೇಶಿಸಿದ ಟೊಯೊಟಾ ಪ್ಲಾಟಿನಂ ಎಟಿಯೋಸ್, ಲಿವಾ!
ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಇಂಡಿಯಾ ಸಂಸ್ಥೆಯು ನಮ್ಮ ಬೆಂಗಳೂರಿನಲ್ಲಿ ಅತಿ ನೂತನ ಪ್ಲಾಟಿನಂ ಎಟಿಯೋಸ್ ಸೆಡಾನ್ ಮತ್ತು ಎಟಿಯೋಸ್ ಲಿವಾ ಹ್ಯಾಚ್ ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿದೆ.
ನೂತನ ಟೊಯೊಟಾ ಎಟಿಯೋಸ್ ಪ್ಲಾಟಿನಂ ಸೆಡಾನ್ ಮತ್ತು ಎಟಿಯೋಸ್ ಲಿವಾ ಹ್ಯಾಚ್ ಬ್ಯಾಕ್ ಕಾರುಗಳ ಬೆಂಗಳೂರು ಎಕ್ಸ್ ಶೋರೂಂ ಪ್ರಾರಂಭಿಕ ಬೆಲೆಯು ಅನುಕ್ರಮವಾಗಿ 6.98 ಹಾಗೂ 5.72 ಲಕ್ಷ ರುಪಾಯಿಗಳಷ್ಟು ನಿಗದಿಯಾಗಿದೆ.

ಟೊಯೊಟಾ ಎಟಿಯೋಸ್ ಪ್ಲಾಟಿನಂ ಬೆಲೆ ಮಾಹಿತಿ (ಬೆಂಗಳೂರು ಎಕ್ಸ್ ಶೋರೂಂ)
ಪ್ಲಾಟಿನಂ ಎಟಿಯೋಸ್ ಜಿಎಕ್ಸ್ (ಪೆಟ್ರೋಲ್): 6,98,450
ಪ್ಲಾಟಿನಂ ಎಟಿಯೋಸ್ ಜಿಎಕ್ಸ್ (ಡೀಸೆಲ್): 8,11,490
ಪ್ಲಾಟಿನಂ ಎಟಿಯೋಸ್ ವಿ (ಪೆಟ್ರೋಲ್): 7,32,545
ಪ್ಲಾಟಿನಂ ಎಟಿಯೋಸ್ ವಿ (ಡೀಸೆಲ್): 8,45,585
ಪ್ಲಾಟಿನಂ ಎಟಿಯೋಸ್ ವಿಎಕ್ಸ್ (ಪೆಟ್ರೋಲ್): 7,89,277
ಪ್ಲಾಟಿನಂ ಎಟಿಯೋಸ್ ವಿಎಕ್ಸ್ (ಡೀಸೆಲ್): 9,02,317

ಟೊಯೊಟಾ ಎಟಿಯೋಸ್ ಲಿವಾ ಬೆಲೆ ಮಾಹಿತಿ (ಬೆಂಗಳೂರು ಎಕ್ಸ್ ಶೋರೂಂ)
ಪ್ಲಾಟಿನಂ ಎಟಿಯೋಸ್ ಜಿಎಕ್ಸ್ (ಪೆಟ್ರೋಲ್): 5,72,319
ಪ್ಲಾಟಿನಂ ಎಟಿಯೋಸ್ ಜಿಎಕ್ಸ್ (ಡೀಸೆಲ್): 7,08,645
ಪ್ಲಾಟಿನಂ ಎಟಿಯೋಸ್ ವಿ (ಪೆಟ್ರೋಲ್): 5,86,826
ಪ್ಲಾಟಿನಂ ಎಟಿಯೋಸ್ ವಿ (ಡೀಸೆಲ್): 7,16,652
ಪ್ಲಾಟಿನಂ ಎಟಿಯೋಸ್ ವಿಎಕ್ಸ್ (ಪೆಟ್ರೋಲ್): 6,41,041
ಪ್ಲಾಟಿನಂ ಎಟಿಯೋಸ್ ವಿಎಕ್ಸ್ (ಡೀಸೆಲ್): 7,58,695

ಎಂಜಿನ್ ತಾಂತ್ರಿಕತೆ - ಪ್ಲಾಟಿನಾಂ ಎಟಿಯೋಸ್
1.5 ಲೀಟರ್ ಪೆಟ್ರೋಲ್: 89 ಅಶ್ವಶಕ್ತಿ, 132 ಎನ್ ಎಂ ತಿರುಗುಬಲ
1.4 ಲೀಟರ್ ಡೀಸೆಲ್: 67 ಅಶ್ವಶಕ್ತಿ, 170 ಎನ್ ಎಂ ತಿರುಗುಬಲ
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್.

ಎಂಜಿನ್ ತಾಂತ್ರಿಕತೆ - ಎಟಿಯೋಸ್ ಲಿವಾ
1.5 ಲೀಟರ್ ಪೆಟ್ರೋಲ್: 79 ಅಶ್ವಶಕ್ತಿ, 104 ಎನ್ ಎಂ ತಿರುಗುಬಲ
1.4 ಲೀಟರ್ ಡೀಸೆಲ್: 67 ಅಶ್ವಶಕ್ತಿ, 170 ಎನ್ ಎಂ ತಿರುಗುಬಲ
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್.

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಎರಡು ಕಾರುಗಳು ಪರಿಷ್ಕತ ಫ್ರಂಟ್ ಬಂಪರ್ ಹಾಗೂ ಟೈಲ್ ಲೈಟ್ ಗಳನ್ನು ಪಡೆದಿದೆ. ಇದಕ್ಕೆ ಹೊಸ ಅಲಾಯ್ ವೀಲ್ ಗಳು ಸಾಥ್ ನೀಡಲಿದೆ.

ಟೊಯೊಟಾ ಪ್ಲಾಟಿನಂ ಎಟಿಯೋಸ್ ಕಾರಿನೊಳಗೆ ಡ್ಯುಯಲ್ ಟೋನ್ ಕಪ್ಪು ಮತ್ತು ಐವರಿ ಥೀಮ್ ಹಾಗೂ ಪರಿಷ್ಕೃತ ಸೀಟುಗಳನ್ನು ಪಡೆದಿದೆ. ಇನ್ನು ಮಡಚಬಹುದಾದ ಆರ್ಮ್ ರೆಸ್ಟ್ ಸೌಲಭ್ಯವೂ ಇರುತ್ತದೆ.

ಅತ್ತ ಎಟಿಯೋಸ್ ಲಿವಾ ಸಹ ಪರಿಷ್ಕೃತ ಸೀಟು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸಾಲ್, ಡ್ಯುಯಲ್ ಟೋನ್ ನೋಟ ಹಾಗೂ ಹೆಚ್ಚುವರಿ ಸ್ಟೋರೆಜ್ ಜಾಗಗಳನ್ನು ಪಡೆದಿದೆ.

ಸುರಕ್ಷತೆಯತ್ತ ದೃಷ್ಟಿ ಹಾಯಿಸಿದಾಗ ಎಲ್ಲ ಪ್ಲಾಟಿನಂ ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಮಾದರಿಯಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯು ಸ್ಟಾಂಡರ್ಡ್ ಆಗಿ ದೊರಕಲಿದೆ. ಇದರ ಜೊತೆಗೆ ಎಲ್ಲ ಐದು ಸೀಟುಗಳು ತ್ರಿ ಪಾಯಿಂಗ್ ಎಮರ್ಜನ್ಸಿ ಲಾಕಿಂಗ್ ರಿಟ್ರಾಕ್ಟರ್ (ಇಎಲ್ ಆರ್) ಮತ್ತು ಮುಂಭಾಗದ ಸೀಟಿನಲ್ಲಿ ಪ್ರಿ ಟೆನ್ಷನರ್ ಫೋರ್ಸ್ ಲಿಮಿಟರ್ (ಪಿಟಿಎಫ್ ಎಲ್) ವ್ಯವಸ್ಥೆಯನ್ನು ಪಡೆದಿದೆ.

ಪ್ರತಿಸ್ಪರ್ಧಿಗಳು
ಪ್ಲಾಟಿನಂ ಎಟಿಯೋಸ್: ಫೋರ್ಡ್ ಫಿಗೊ ಆಸ್ಪೈರ್, ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮತ್ತು ಮಹೀಂದ್ರ ವೆರಿಟೊ.
ಎಟಿಯೋಸ್ ಲಿವಾ: ಫೋರ್ಡ್ ಫಿಗೊ, ಟಾಟಾ ಟಿಯಾಗೊ ಮತ್ತು ಹ್ಯುಂಡೈ ಐ10


Click it and Unblock the Notifications








