ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್ ಆವೃತ್ತಿ ಬಿಡುಗಡೆ
ಜರ್ಮನಿಯ ಮೂಲದ ಪ್ರತಿಷ್ಠಿತ ಸಂಸ್ಥೆಯಾಗಿರುವ ಫೋಕ್ಸ್ ವ್ಯಾಗನ್, ತನ್ನ ಜನಪ್ರಿಯ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರಿನ ಡೀಸೆಲ್ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು ಸ್ವಲ್ಪ ಸಮಯದ ಹಿಂದೆಯ ಭಾರತಕ್ಕಾಗಿ ಭಾರತದಲ್ಲೇ ನಿರ್ಮಿತ ಎಮಿಯೊ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು.
ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.33 ಲಕ್ಷ ರು.ಗಳಿಂದ ಟಾಪ್ ಎಂಡ್ ಮಾದರಿಯು 9.32 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಫೋಕ್ಸ್ ವ್ಯಾಗನ್ ಎಮಿಯೊ ಡೀಸೆಲ್ ಆವೃತ್ತಿಯು ಮೂರು ವೆರಿಯಂಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಅವುಗಳೆಂದರೆ,
ಟ್ರೆಂಡ್ ಲೈನ್,
ಕಂಫರ್ಟ್ ಲೈನ್,
ಹೈಲೈನ್

ಎಂಜಿನ್ ತಾಂತ್ರಿಕತೆ
ಹೊಸ ಎಮಿಯೊದಲ್ಲಿ 1.5 ಲೀಟರ್ ಟಿಡಿಐ, 4 ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಿಗದೆ. ಇದು 250 ಎನ್ ಎಂ ತಿರುಗುಬಲದಲ್ಲಿ 108 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಗೇರ್ ಬಾಕ್ಸ್
ಪೆಟ್ರೋಲ್ ಆವೃತ್ತಿಯು ಮ್ಯಾನುವಲ್ ಗೇರ್ ಬಾಕ್ಸ್ ಮಾತ್ರ ಪಡೆದುಕೊಂಡರೆ ನೂತನ ಎಮಿಯೊ ಡೀಸೆಲ್ ವೆರಿಯಂಟ್ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಏಳು ಸ್ಪೀಡ್ ಡಿಎಸ್ ಜಿ ಟ್ರಾನ್ಸ್ ಮಿಷನ್ ಗಳನ್ನು ಗಿಟ್ಟಿಸಿಕೊಂಡಿದೆ.

ವೈಶಿಷ್ಟ್ಯಗಳು
ಇನ್ನು ವೈಶಿಷ್ಟ್ಯಗಳ ವಿಚಾರಕ್ಕೆ ಬಂದಾಗ ಪೆಟ್ರೋಲ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ವಿಶಿಷ್ಟತೆಗಳನ್ನು ಪಡೆಯಲಿದೆ. ಇದು ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಪವರ್ ವಿಂಡೋ, ಕೂಲ್ಡ್ ಗ್ಲೋವ್ ಬಾಕ್ಸ್ ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಮ್ಯೂಸಿಕ್ ಸಿಸ್ಟಂ ಜೊತೆ ಮಿರರ್ ಲಿಂಕ್, ಐ-ಪೊಡ್ ಕನೆಕ್ಟಿವಿಟಿ, ಫೋನ್ ಬುಕ್/ಎಸ್ ಎಂಎಂ ವೀಕ್ಷಣೆ, ಇಎಸ್ ಪಿ ಹಾಗೂ ಹಿಲ್ ಹೋಲ್ಡ್ ಕಂಟ್ರೋಲ್, ಕ್ಲೈಮಟ್ರಾನಿಕ್ ಆಟೋಮ್ಯಾಟಿಕ್ ಎಸಿ, ಡಸ್ಟ್ ಫಿಲ್ಟರ್ ಹಾಗೂ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಸಿಗಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಸ್ಟ್ಟಾಂಡರ್ಡ್ ಎಬಿಎಸ್, ಚಾಲಕ ಹಾಗೂ ಪ್ರಯಾಣಿಕ ಬದಿಯ ಏರ್ ಬ್ಯಾಗ್ ಸೌಲಭ್ಯಗಳು ಲಭ್ಯವಾಗಲಿದ್ದು, ಸುರಕ್ಷಿತ ಕಾರೆನಿಸಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಟಿಎಲ್ (ಮ್ಯಾನುವಲ್): 6.26 ಲಕ್ಷ ರು.
ಸಿಎಲ್ (ಮ್ಯಾನುವಲ್): 7.27 ಲಕ್ಷ ರು.
ಸಿಎಲ್ (ಡಿಎಸ್ ಜಿ): 8.40 ಲಕ್ಷ ರು.
ಎಚ್ ಎಲ್ (ಮ್ಯಾನುವಲ್): 8.8 ಲಕ್ಷ ರು.
ಎಚ್ ಎಲ್ (ಡಿಎಸ್ ಜಿ): 9.21 ಲಕ್ಷ ರು.


Click it and Unblock the Notifications








