ಫೋಕ್ಸ್‌ವ್ಯಾಗನ್ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರು ಭಾರತಕ್ಕೆ
ಜರ್ಮನಿಯ ಮೂಲದ ಪ್ರಖ್ಯಾತ ಕಾರು ಸಂಸ್ಥೆ ಫೋಕ್ಸ್‌ವ್ಯಾಗನ್ ಬಹುಬೇಗನೇ ಭಾರತದಲ್ಲಿ ಕಾಂಪಾಕ್ಟ್ ಸೆಡಾನ್ ಕಾರೊಂದನ್ನು ಬಿಡುಗಡೆ ಮಾಡಲಿದೆ.
ಇದಕ್ಕೆ ಸಂಬಂಧಪಟ್ಟಂತೆ ಫೋಕ್ಸ್ ವ್ಯಾಗನ್ ಪ್ರಯತ್ನವನ್ನು ಆರಂಭಿಸಿದ್ದು, ಟೆಸ್ಟಿಂಗ್ ನಡೆಸುತ್ತಿರುವ ವೇಳೆಗೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಬಲ್ಲ ಮೂಲಗಳ ಪ್ರಕಾರ ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ನೂತನ ಫೋಕ್ಸ್ ವ್ಯಾಗನ್ ಕಾರು 'ಎಮಿಯೊ' ಎಂಬ ಹೆಸರಿನಿಂದ ಗುರುತಿಸಲ್ಪಡಲಿದೆ.
ಚಿತ್ರ ಕೃಪೆ
ಇದು ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಜೊತೆಗೂ ಕೆಲವೊಂದು ಸಾಮತ್ಯೆಗಳನ್ನು ಪಡೆದುಕೊಂಡಿದೆ.
ಚಿತ್ರ ಕೃಪೆ
ಮುಂದುಗಡೆ ಹೆಡ್ ಲ್ಯಾಂಪ್ ಹಾಗೂ ಹಿಂದುಗಡೆ ಟೈಲ್ ಲ್ಯಾಂಪ್ ಫೋಕ್ಸ್ ವ್ಯಾಗನ್ ಪೊಲೊ ಹಾಗೂ ವೆಂಟೊ ಕಾರುಗಳಿಗೆ ಸಮಾನವಾಗಿದೆ.
ಚಿತ್ರ ಕೃಪೆ
ಇನ್ನು ಎಂಜಿನ್ ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಫೋಕ್ಸ್ ವ್ಯಾಗನ್ ಎಮಿಯೊ 1.2 ಲೀಟರ್ ತ್ರಿ ಸಿಲಿಂಡರ್ ಎಂಪಿಐ (MPi) ಪೆಟ್ರೋಲ್ ಹಾಗೂ 1.5 ಲೀಟರ್ ಫೋರ್ ಸಿಲಿಂಡರ್ ಟಿಡಿಐ (TDI) ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.
ಚಿತ್ರ ಕೃಪೆ
ಇದಲ್ಲದೆ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಅಲ್ಲದೆ ಆಟೋಮ್ಯಾಟಿಕ್ ಡಿಎಸ್‌ಜಿ (DSG) ಗೇರ್ ಬಾಕ್ಸ್ ಕಂಡುಬರುವ ಸಾಧ್ಯತೆಯಿದೆ.
ಚಿತ್ರ ಕೃಪೆ
ಅಂದ ಹಾಗೆ 2016 ಆಟೋ ಎಕ್ಸ್ ಪೋದಲ್ಲಿ ನೂತನ ಫೋಕ್ಸ್ ವ್ಯಾಗನ್ ಎಮಿಯೊ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.
ಚಿತ್ರ ಕೃಪೆ

Click it and Unblock the Notifications








