ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಲಗ್ಷುರಿ ಸೆಡಾನ್ ಕಾರು ಬಿಡುಗಡೆ
ಸ್ವೀಡನ್ ಮೂಲದ ಐಷಾರಾಮಿ ಕಾರು ತಯಾರಿಕ ಸಂಸ್ಥೆ ವೋಲ್ವೋ ಅತಿ ನೂತನ ಎಸ್60 ಕ್ರಾಸ್ ಕಂಟ್ರಿ ಲಗ್ಷುರಿ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 38.9 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಒರಟು ರಸ್ತೆಗಳಲ್ಲೂ ಸಂಚರಿಸುವ ಸಾಮರ್ಥ್ಯವುಳ್ಳ ವೋಲ್ವೋ ಎಸ್60 ಕ್ರಾಸ್ ಕಂಟ್ರಿ 201 ಎಂಎಂ ಗ್ರೌಂಡ್ ಕ್ಲಿಯರನ್ಸ್ ಜೊತೆ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿರುವುದು ಗಮನಾರ್ಹವೆನಿಸಿದೆ.

ಈ ಮೊದಲು 2015 ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ (2015 ಡೆಟ್ರಾಯ್ಟ್ ಆಟೋ ಶೋ) ಪಾದಾರ್ಪಣೆಗೈದಿರುವ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಕಾರಿನಲ್ಲಿರುವ 2.4 ಲೀಟರ್ ಡೀಸೆಲ್ ಎಂಜಿನ್ 420 ಎನ್ ಎಂ ತಿರುಗುಬಲದಲ್ಲಿ 190 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವೂ ಇರುತ್ತದೆ.

ಇದರಲ್ಲಿ ಜೋಡಣೆ ಮಾಡಲಾಗಿರುವ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯು ಡೈನಾಮಿಕ್ ಸ್ಟೆಬಿಲಿಟಿ ಮತ್ತು ಟ್ರಾಕ್ಷನ್ ಕಂಟ್ರೋಲ್ ಮತ್ತು ಮುಂದುವರಿದ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಲೇಸರ್ ಅಸಿಸ್ಟಡ್ ಆಟೋಮ್ಯಾಟಿಕ್ ಬ್ರೇಕಿಂಗ್, ಇಬಿಡಿ, ಇಬಿಎ, ಹಿಲ್ ಡಿಸೆಂಟ್ ಕಂಟ್ರೋಲ್, ಡೀಸೆಲ್ ಪರ್ಟಿಕ್ಯೂಲೇಟ್ ಫಿಲ್ಟರ್ ಮುಂತಾದ ವೈಶಿಷ್ಟ್ಯಗಳನ್ನು ಇದು ಪಡೆದಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇಂಟಿರಿಯರ್ ಮೂವ್ ಮೆಂಟ್ ಸೆನ್ಸಾರ್, ಪರ್ಸನಲ್ ಕಾರ್ ಕಮ್ಯೂನಿಕೇಟರ್ ಜೊತೆ ಕೀಲೆಸ್ ಡ್ರೈವ್, ಹೋಮ್ ಸೇಫ್ ಲೈಟಿಂಗ್ ಮತ್ತು ವಾಟರ್ ರಿಪೆಲೆಂಟ್ ಫ್ರಂಟ್ ಸೈಡ್ ವಿಂಡೋಗಳನ್ನು ಗಿಟ್ಟಿಸಿಕೊಳ್ಳಲಿದೆ.

ಅಂತೆಯೇ ಎರಡು ವಿಧಗಳ ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕ), ಎಸ್‌ಪಿಎಸ್ ಏರ್ ಬ್ಯಾಗ್, ಕರ್ಟೈನ್, ಮುಂಭಾಗದಲ್ಲಿ ರಕ್ಷಣೆ ಹಾಗೂ ಅದ್ಭುತ ದೇಹ ರಚನೆಯು ರಕ್ಷಣೆ ಒದಗಿಸಲಿದೆ.

ಇನ್ನುಳಿದಂತೆ ಕ್ರೂಸ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್, ರೈನ್ ಸೆನ್ಸಿಂಗ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಮತ್ತು ನೇವಿಗೇಷನ್ ಸೇವೆಗಳಿರಲಿದೆ.

ಐದು ಆಕರ್ಷಕ ಬಣ್ಣಗಳು
ರಿಚ್ ಜಾವಾ, ಓಸ್ಮಿಯಂ ಗ್ರೇ, ಕ್ರೈಸ್ಟಲ್ ವೈಟ್, ಬ್ರೈಟ್ ಸಿಲ್ವರ್ ಮತ್ತು ಒನಿಕ್ಸ್ ಬ್ಲ್ಯಾಕ್.

ಆಯಾಮ (ಎಂಎಂ)
ಉದ್ದ: 4638
ಅಗಲ: 2097
ಎತ್ತರ: 1539
ಚಕ್ರಾಂತರ: 2774
ಗ್ರೌಂಡ್ ಕ್ಲಿಯರನ್ಸ್: 201

ವೇಗವರ್ಧನೆ
8.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ,
ಗರಿಷ್ಠ ವೇಗ ಗಂಟೆಗೆ 210 ಕೀ.ಮೀ.

ಮೈಲೇಜ್, ಪ್ರತಿಸ್ಪರ್ಧಿಗಳು
ಮೈಲೇಜ್: 13.7
ಪ್ರತಿಸ್ಪರ್ಧಿಗಳು
ಬಿಎಂಡಬ್ಲ್ಯು 3 ಸಿರೀಸ್,
ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್,
ಆಡಿ ಎ4


Click it and Unblock the Notifications