ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

By Nagaraja

ಆಸ್ಟ್ರೇಲಿಯಾ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ಎಎನ್ ಸಿಎಪಿ) ನಡೆಸಿರುವ ವಾಹನ ಢಿಕ್ಕಿ ಪರೀಕ್ಷೆಯಲ್ಲಿ ಫೈವ್ ಸ್ಟಾರ್ ರೇಟಿಂಗ್ ಗೆಲ್ಲುವಲ್ಲಿ ಫೋಕ್ಸ್ ವ್ಯಾಗನ್ ಟೈಗ್ವಾನ್, ಬಿಎಂಡಬ್ಲ್ಯು ಎಕ್ಸ್1 ಮತ್ತು ಜೀಪ್ ರೆನೆಗೇಡ್ ಯಶಸ್ವಿಯಾಗಿದೆ. ಈ ಮೂರು ವಾಹನಗಳು ನಿಕಟ ಭವಿಷ್ಯದಲ್ಲೇ ಭಾರತವನ್ನು ಪ್ರವೇಶಿಸುತ್ತಿರುವುದು ಗಮನಾರ್ಹವೆನಿಸುತ್ತದೆ.

ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

ಬಿಎಂಡಬ್ಲ್ಯು ಎಕ್ಸ್1 ವಯಸ್ಕ ಪ್ರಯಾಣಿಕರ ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಯಲ್ಲಿ ಅನುಕ್ರಮವಾಗಿ ಶೇಕಡಾ 90 ಹಾಗೂ 87ರಷ್ಟು ರೇಟಿಂಗ್ ಕಾಪಾಡಿಕೊಂಡಿದೆ. ಅಂತೆಯೇ ಪಾದಚಾರಿ ಸುರಕ್ಷತೆಯಲ್ಲಿ ಶೇಕಡಾ 74ರಷ್ಟನ್ನು ಕಾಪಾಡಿಕೊಂಡಿದೆ.

ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

ಫ್ರಂಟ್ ಮತ್ತು ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಗಳನ್ನು ಹೊಂದಿರುವ ಆಡಿ ಎಕ್ಸ್1, ಮುಂಭಾಗ, ಬದಿಯ ಮತ್ತು ಬದಿಯ ಕರ್ಟೈನ್ ಏರ್ ಬ್ಯಾಗ್ ಗಳನ್ನು ಪಡೆದಿದೆ. ಇನ್ನು ಢಿಕ್ಕಿ ಪೂರ್ವ ಆಟೋನೋಮಸ್ ಎಮರ್ಜನ್ಸಿ ಬ್ರೇಕಿಂಗ್ ವ್ಯವಸ್ಥೆಯು ಇದರಲ್ಲಿದೆ.

ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

ಅತ್ತ ಜೀಪ್ ನ ಮಿನಿ ಎಸ್ ಯುವಿ ಆಗಿರುವ ರೆನೆಗೇಡ್ ಒಟ್ಟಾರೆ 37ರಲ್ಲಿ 36.41 ರೇಟಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತನ್ಮೂಲಕ ಸುರಕ್ಷಿತ ಕಾರುಗಳಲ್ಲೇ ಸೇರಿಕೊಂಡಿದೆ.

ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಫೋಕ್ಸ್ ವ್ಯಾಗನ್ ಟೈಗ್ವಾನ್, ವಯಸ್ಕ ಮತ್ತು ಮಕ್ಕಳ ಪ್ರಯಾಣಿಕ ರಕ್ಷಣೆಯಲ್ಲಿ ಅನುಕ್ರಮವಾಗಿ ಶೇಕಡಾ 96 ಹಾಗೂ 84ರಷ್ಟು ರೇಟಿಂಗ್ ಗಿಟ್ಟಿಸಿಕೊಂಡಿದೆ.

ಟೈಗ್ವಾನ್, ಬಿಎಂಡಬ್ಲ್ಯು, ಜೀಪ್ ರೆನೆಗೇಡ್‌ಗೆ ಫೈವ್ ಸ್ಟಾರ್

ಪ್ರಸ್ತುತ ಮೂರು ಕಾರುಗಳು ಆಸ್ಟ್ರೇಲಿಯಾ ಮಾರುಕಟ್ಟೆಗೆ ಪ್ರವೇಶದ ಮುಂಚಿತವಾಗಿ ಢಿಕ್ಕಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಡಿಯೋ ವೀಕ್ಷಿಸಿ

ವಿಡಿಯೋ ವೀಕ್ಷಿಸಿ

ವಿಡಿಯೋ ವೀಕ್ಷಿಸಿ

More from DriveSpark

Article Published On: Tuesday, October 11, 2016, 18:51 [IST]
English summary
VW Tiguan, BMW X1 And Jeep Renegade Receive ANCAP Ratings For Safety
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+