ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

By Nagaraja

ಗ್ಲೋಬಲ್ ಎನ್‌ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಭಾರತೀಯ ಜನಪ್ರಿಯ ಮಾದರಿಗಳು ಭಾರಿ ವೈಫಲ್ಯ ಅನುಭವಿಸಿದೆ. ಭಾರತದಲ್ಲಿ ಕಾರು ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಡುವೆಯೂ ಇಂತಹದೊಂದು ಫಲಿತಾಂಶ ಹೊರಬಂದಿರುವುದು ಖೇದಕರ ಸಂಗತಿ.

ಭಾರತದಲ್ಲಿ ಮಾರಾಟ ಮಾಡುತ್ತಿರುವ ಕಾರುಗಳ ಕನಿಷ್ಠ ಭದ್ರತೆಯನ್ನು ಪರಿಗಣಿಸಿದಾಗ ವಾಹನ ತಯಾರಿಕ ಸಂಸ್ಥೆಗಳು ಇನ್ನು ಬಹಳಷ್ಟು ಮುಂದುವರಿಯಬೇಕಾಗಿದೆ. ಈಗ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಹ್ಯುಂಡೈ ಇಯಾನ್, ಮಹೀಂದ್ರ ಸ್ಕಾರ್ಪಿಯೊ, ಮಾರುತಿ ಸುಜುಕಿ ಇಕೊ, ರೆನೊ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಮಾದರಿಗಳು ವೈಫಲ್ಯವನ್ನು ಅನುಭವಿಸಿದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ಭಾರತದಲ್ಲಿ 2014ರಲ್ಲಿ ಕ್ರಾಶ್ ಟೆಸ್ಟ್ ಮೊದಲ ಬಾರಿಗೆ ನಡೆಸಲಾಗಿತ್ತು. ಅಂದು ಗ್ಲೋಬಲ್ ಎನ್‌ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಭಾರತದ ಎಂಟು ಕಾರುಗಳಾಗಿರುವ ಫೋಕ್ಸ್ ವ್ಯಾಗನ್ ಪೊಲೊ, ಮಾರುತಿ ಆಲ್ಟೊ 800, ಮಾರುತಿ ಸ್ವಿಫ್ಟ್, ಟಾಟಾ ನ್ಯಾನೋ, ಹ್ಯುಂಡೈ ಐ10, ಫೋರ್ಡ್ ಫಿಗೊ, ಟೊಯೊಟಾ ಇಟಿಯೋಸ್ ಮತ್ತು ದಟ್ಸನ್ ಗೊ ಮಾದರಿಗಳು ವಿಫಲತೆಯನ್ನು ಅನುಭವಿಸಿದ್ದವು.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ಈಗ ಎರಡು ವರ್ಷಗಳ ಬಳಿಕವಾದರೂ ಕಾರಿನ ಭದ್ರತೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆಯೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಎಲ್ಲ ಐದು ಕಾರುಗಳು ಶೂನ್ಯ ರೇಟಿಂಗ್ ಸಂಪಾದಿಸುವ ಮೂಲಕ ಮುಖಭಂಗಕ್ಕೊಳಗಾಗಿದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ಏರ್ ಬ್ಯಾಗ್ ಸೇರಿದಂತೆ ಮೂರು ವೆರಿಯಂಟ್ ಗಳಲ್ಲಿ ರೆನೊ ಕ್ವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಎಲ್ಲ ವೆರಿಯಂಟ್ ಗಳು ವಯಸ್ಕರ ಸುರಕ್ಷತೆಯಲ್ಲಿ ವಿಫಲತೆಯನ್ನು ಅನುಭವಿಸಿದೆ. ಎಲ್ಲ ಕಾರುಗಳನ್ನು ಗಂಟೆಗೆ 64 ಕೀ.ಮೀ. ವೇಗದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ಕನಿಷ್ಠ ಪಕ್ಷ ಡ್ಯುಯಲ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ನೀಡಬೇಕಾಗಿರುವುದು ಅತ್ಯಗತ್ಯವಾಗಿದೆ. ಆದರೆ ಭಾರತೀಯ ಬಜೆಟ್ ಕಾರುಗಳಲ್ಲಿ ಇವೆಲ್ಲದರ ಕೊರತೆ ಕಾಡುತ್ತಿದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ವಿಶ್ವದ ಆರನೇ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತ 2020ರ ವೇಳೆಯಾಗುವಾಗ ದಕ್ಷಿಣ ಕೊರಿಯಾ ಮತ್ತು ಜರ್ಮನಿ ರಾಷ್ಟ್ರಗಳನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದೆ. ಈಗ ಭಾರತ್ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ 2017ರ ವೇಳೆಯಾಗುವಾಗ ಕಡ್ಡಾಯವಾಗಲಿದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ಅಮೆರಿಕ, ಯುರೋಪ್, ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯಾ, ಚೀನಾ ಮತ್ತು ಇತರೆ ದಕ್ಷಿಣ ಏಷ್ಯಾ ರಾಷ್ಟ್ರಗಳು ತನ್ನದೇ ಆದ ಢಿಕ್ಕಿ ಪರೀಕ್ಷೆ ಎನ್‌ಸಿಎಪಿಗಳನ್ನು ಹೊಂದಿದೆ. ಆದರೆ ಭಾರತ ಮಾತ್ರ ಇದರ ಕೊರತೆಯನ್ನು ಅನುಭವಿಸುತ್ತಿದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

'ಸೇಫರ್ ಕಾರ್ಸ್ ಫಾರ್ ಇಂಡಿಯಾ'ದಲ್ಲಿ ಕಾರೊಂದರ ಬಾಡಿ ಎಷ್ಟು ಗಟ್ಟಿಮುಟ್ಟಾಗಿರಬೇಕೆಂಬುದನ್ನು ಗಮನ ಹರಿಸಲಾಗಿದೆ. ವಿಶ್ವದ ಯಾವುದೇ ರಾಷ್ಟ್ರದಲ್ಲೂ ಇಷ್ಟು ಕಳಪೆ ಮಟ್ಟದಲ್ಲಿ ಕಾರು ನಿರ್ಮಾಣ ಮಾಡಲಾಗುತ್ತಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.

ಭಾರತೀಯ ಕಾರುಗಳಿಗೆ ಭಾರಿ ಮುಖಭಂಗ; ಢಿಕ್ಕಿ ಪರೀಕ್ಷೆಯಲ್ಲಿ ಬರಿ 'ಶೂನ್ಯ' ಸಾಧನೆ

ವಿಶ್ವಸಂಸ್ಥೆ ಪ್ರಸ್ತಾಪಿಸಿರುವ ಹಾಗೆಯೇ ಏರ್ ಬ್ಯಾಗ್ ಗಳಂತಹ ಕನಿಷ್ಠ ಸುರಕ್ಷತೆಯನ್ನು ಬಳಕೆ ಮಾಡುವತ್ತ ಕಾರು ತಯಾರಿಕ ಸಂಸ್ಥೆಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಭಾರತದಲ್ಲಿ ಢಿಕ್ಕಿ ಪರೀಕ್ಷೆ ಕಡ್ಡಾಯವಾಗಬೇಕಾಗಿರುವುದು ಅತಿ ಮುಖ್ಯವೆನಿಸುತ್ತದೆ.

Most Read Articles

Kannada
English summary
Zero Stars For All Indian Cars Crash Tested By Global NCAP; Videos
Story first published: Wednesday, May 18, 2016, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X