ಢಿಕ್ಕಿ ಪರೀಕ್ಷೆ; ಮಾರುತಿ ಬಲೆನೊ ಖರೀದಿಗೆ ಎಷ್ಟು ಸುರಕ್ಷಿತ ?

By Nagaraja

ಯುರೋಪ್ ನಲ್ಲಿ ಕಾರು ಢಿಕ್ಕಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಂತಹ ಬೆಳೆದು ಬರುತ್ತಿರುವ ದೇಶಗಳು ಇನ್ನಷ್ಟೇ ಕ್ರಾಶ್ ಟೆಸ್ಟ್ ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಹಾಗಿರುವಾಗ ಭಾರತದಲ್ಲಿ ಉತ್ಪಾದಿಸಿ ತವರೂರಾದ ಜಪಾನ್ ತಲುಪುತ್ತಿರುವ ಬಲೆನೊ ಕಾರನ್ನು ಅಪಘಾತ ಪರೀಕ್ಷೆಗೊಳಪಡಿಸಲಾಗಿದೆ.

ಯುರೋ ಎನ್‌ಸಿಎಪಿ ನಡೆಸಿರುವ ಕ್ರಾಶ್ ಟೆಸ್ಟ್ ನಲ್ಲಿ ಗರಿಷ್ಠ ಐದರಲ್ಲಿ ಬಲೆನೊ ಸ್ಟ್ಯಾಂಡರ್ಡ್ ವೆರಿಯಂಟ್ ಮೂರು ಹಾಗೂ ಸೇಫ್ಟಿ ಪ್ಯಾಕೇಜ್ ಹೊಂದಿರುವ ಟಾಪ್ ಎಂಡ್ ವೆರಿಯಂಟ್ ನಾಲ್ಕು ಸ್ಟಾರ್ ರೇಟಿಂಗ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಕಾರಿನ ಭದ್ರತಾ ಮಟ್ಟವನ್ನು ಗ್ರಾಹಕರಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಕ್ಕಾಗಿ ಗರಿಷ್ಠ ಫೈವ್ ಸ್ಟಾರ್ ರೇಟಿಂಗ್ ಗಳನ್ನು ನೀಡಲಾಗುತ್ತದೆ. ಅಂದರೆ ಮೂರು ಸ್ಟಾರ್ ರೇಟಿಂಗ್ ಪಡೆದ್ದಲ್ಲಿ ಸರಾಸರಿ ಅತ್ಯುತ್ತಮ ಪ್ರಯಾಣಿಕ ರಕ್ಷಣೆಯನ್ನು ಪಡೆದಿದೆ ಎಂಬುದನ್ನು ಖಾತ್ರಿಪಡಿಸಬಹುದಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಯುರೋ ಎನ್ ಸಿಎಪಿ ನಡೆಸಿರುವ ಮುಂಭಾಗದ ಢಿಕ್ಕಿ ಪರೀಕ್ಷೆಯಲ್ಲಿ ಬಲೆನೊ ಸ್ಥಿರವಾಗಿ ನಿಂತಿದೆ. ಈ ಮೂಲಕ ಚಾಲಕ ಮತ್ತು ಪ್ರಯಾಣಿಕರಿಬ್ಬರ ಮೊಣಕಾಲು ಮತ್ತು ಮಂಡಿಗೆ ಅತ್ಯುತ್ತಮ ರಕ್ಷಣೆಯನ್ನು ಒದಗಿಸಿರುವುದು ಮಾನವ ಪ್ರತಿರೂಪದ ಢಿಕ್ಕಿ ಪರೀಕ್ಷೆಯಲ್ಲಿ ಕಂಡುಬಂದಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಪೂರ್ಣ ಅಗಲವಾದ ಕಠಿಣವಾದ ಢಿಕ್ಕಿ ಪರೀಕ್ಷೆಯಲ್ಲೂ ಎದೆಯ ಭಾಗ ಹೊರತಾಗಿ ಬೇಕಾದಷ್ಟು ರಕ್ಷಣೆಯನ್ನು ಒದಗಿಸುವಲ್ಲಿ ಬಲೆನೊ ಯಶಸ್ವಿಯಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಬದಿ ಭಾಗದ ಢಿಕ್ಕಿ ಪರೀಕ್ಷೆಯಲ್ಲೂ ಅತ್ಯುತ್ತಮ ಸುರಕ್ಷತೆಯನ್ನು ಒದಗಿಸಿತ್ತಾದರೂ ಬದಿಯಲ್ಲಿರುವ ಕರ್ಟೈನ್ ಏರ್ ಬ್ಯಾಗ್ ಗಳು ಸರಿಯಾಗಿ ತೆರೆದುಕೊಳ್ಳದೇ ಇರುವುದರಿಂದ ತಲೆಗೆ ಪೆಟ್ಟಾಗಿರುವ ಘಟನೆ ಸಂಭವಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಹಿಂಭಾಗದ ಢಿಕ್ಕಿ ಪರೀಕ್ಷೆಯಲ್ಲೂ ಫ್ರಂಟ್ ಸೀಟು ಮತ್ತು ತಲೆ ಪ್ರತಿಬಂಧದಲ್ಲಿ ಅತ್ಯುತ್ತಮ ರಕ್ಷಣೆಯನ್ನು ಒದಗಿಸಿದೆ. ಹಿಂಭಾಗದ ಸೀಟುಗಳಲ್ಲೂ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಅದೇ ಹೊತ್ತಿಗೆ ರಾಡಾರ್ ಬ್ರೇಕ್ ಸರ್ಪೋಟ್ ಪಡೆದ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ನಾಲ್ಕು ಸೇಫ್ಟಿ ರಾಂಕಿಂಗ್ ಗಳನ್ನು ಪಡೆದಿದೆ. ಈ ಮೂಲಕ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಸುಜುಕಿ ಬಲೆನೊಗೆ ತ್ರಿ ಸ್ಟಾರ್ ರೇಟಿಂಗ್

ಇದೇ ಮೊದಲ ಬಾರಿಗೆ ಸುಜುಕಿ ಸಂಸ್ಥೆಯು ಭಾರತದಲ್ಲಿ ಉತ್ಪಾದಿಸಿದ ಕಾರನ್ನು ತವರೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇವೆಲ್ಲದರ ಶ್ರೇಯಸ್ಸು ಬಲೆನೊಗೆ ಸಲ್ಲುತ್ತದೆ. ಕಳೆದ ವರ್ಷ ಭಾರತಕ್ಕೆ ಪ್ರವೇಶಿಸಿರುವ ಬಲೆನೊ ಸಂಸ್ಥೆಯ ಮಾನೇಸರ್ ಘಟಕದಲ್ಲಿ ನಿರ್ಮಾಣವಾಗುತ್ತಿದೆ.

Most Read Articles

Kannada
English summary
Maruti Suzuki Baleno Crash Test Results – Is Your New Baleno Safe Enough?
Story first published: Thursday, April 21, 2016, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X