ಹೊಸ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ ದಿನಾಂಕ ನಿಗದಿ
ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಸಂಸ್ಥೆಯು ತನ್ನ ಯಶಸ್ವಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಆವೃತಿಯನ್ನು 2017ರ ನವೆಂಬರ್ 9ರಂದು ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಹೊರ ಬಂದಿದೆ.
ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಸಂಸ್ಥೆಯು ತನ್ನ ಯಶಸ್ವಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಆವೃತಿಯನ್ನು 2017ರ ನವೆಂಬರ್ 9ರಂದು ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಹೊರ ಬಂದಿದೆ.

ಈ ಮಾಹಿತಿಯನ್ನು ಆಟೋಕಾರ್ ಇಂಡಿಯಾ ವರದಿ ಮಾಡಿದ್ದು, ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ನವೀಕರಿಸಿದ ಆವೃತ್ತಿಯಾಗಿದೆ. ಈ ಕಾರು ಹೊಸ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳ ಜೊತೆಗೆ ಮರುವಿನ್ಯಾಸಗೊಳಿಸಲ್ಪಟ್ಟ ಹೊರಭಾಗ ಮತ್ತು ಒಳಭಾಗದೊಂದಿಗೆ ಸುಸಜ್ಜಿತಗೊಂಡಿದೆ.

ಈ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರು ಮುಂಭಾಗದಲ್ಲಿ ಹೆಚ್ಚು ಪ್ರಮುಖ ಬದಲಾವಣೆಯ ವಿನ್ಯಾಸವನ್ನು ಪಡೆದುಕೊಂಡಿದ್ದು, ವಿಶಾಲವಾದ ಹೆಡ್ ಲ್ಯಾಂಪ್ ಯೂನಿಟ್ ಜೊತೆ ಕ್ರೋಮ್ ಲೇನ್ಡ್ ಸಿಂಗಲ್ ಪೀಸ್ ಗ್ರಿಲ್ ಪಡೆದುಕೊಂಡಿದೆ.

ಕಾರಿನ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ SYNC 3 ಬೆಂಬಲದೊಂದಿಗೆ ಟಚ್ ಸ್ಕ್ರೀನ್ ಪಡೆದುಕೊಂಡಿದೆ ಹಾಗು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಸೌಕರ್ಯವನ್ನು ಪಡೆಯುತ್ತದೆ. ಈ ಕಾರಿನ ಸಲಕರಣೆಯ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್ ಹೊಸದಾಗಿವೆ. ಆದರೆ, ಆಂತರಿಕ ಸ್ಥಳವು ಪ್ರಸ್ತುತ ಮಾದರಿಯಂತೆಯೇ ಇರುತ್ತದೆ.

ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರು, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ 1.5 ಎಲ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 150 ಎನ್ಎಂ ತಿರುಗುಬಲದಲ್ಲಿ 123 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಮೂಲಕ ಮುಂಭಾಗದ ಚಕ್ರಕ್ಕೆ ಶಕ್ತಿ ಕಳುಹಿಸಲಾಗುತ್ತದೆ.

ಪ್ರೊಜೆಕ್ಟರ್ ಹೆಡ್ ಲೈಟ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳನ್ನು ಉನ್ನತ ಮಟ್ಟದ ಟ್ರಿಮ್‌ನಲ್ಲಿ ಮಾತ್ರ ನೀಡಲಾಗುತ್ತದೆ ಎನ್ನಲಾಗಿದೆ. ಬಾಹ್ಯ ಬದಲಾವಣೆಗಳೆಂದರೆ, ಹೊಸ ಮಿಶ್ರಲೋಹದ ಚಕ್ರಗಳು ಕೂಡಾ ಒಳಗೊಂಡಿರುತ್ತವೆ.

ಡ್ಯುಯಲ್ ಟೋನ್ ಪೇಂಟ್ ಸ್ಕೀಮ್‌ಗಳು, ಕಪ್ಪು ಹೆಡ್‌ಲ್ಯಾಂಪ್ ಹಾಗು 17-ಇಂಚಿನ ಮಿಶ್ರಲೋಹದ ಚಕ್ರಗಳು ಹೊಸ ಟೈಟಾನಿಯಂ ಎಸ್ ಟ್ರಿಮ್ ಪ್ಯಾಕೇಜ್‌ನ ಭಾಗವಾಗಿರುತ್ತವೆ.


Click it and Unblock the Notifications