ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

Written By:

ದೇಶದ ಪ್ರತಿಷ್ಠಿತ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ವಾರ್ಷಿಕ ಸಂಬಳ ಕುರಿತಾದ ಮಾಹಿತಿಯನ್ನು ಬಹಿರಂಗಗೊಳಿಸಿದ್ದು, ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

ಆಟೋ ಮೊಬೈಲ್, ಹಣಕಾಸು, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಕೊಡುಗೆ ನೀಡುತ್ತಿರುವ ಮಹೀಂದ್ರಾ ಸಂಸ್ಥೆಯು ದೇಶಿಯವಾಗಿ ಮತ್ತು ವಿಶ್ವಮಟ್ಟದಲ್ಲೂ ಮಿಂಚಿತ್ತಿರುವ ಪ್ರತಿಷ್ಠಿತ ಸಂಸ್ಥೆ ಎಂದರೇ ತಪ್ಪಾಗಲಾರದು. ಆದ್ರೆ ಇದೆಲ್ಲವನ್ನು ಮುನ್ನಡೆಸುತ್ತಿರುವ ಆನಂದ್ ಮಹೀಂದ್ರಾ ಅವರ ಸಂಬಳ ಕುರಿತಾದ ಮಾಹಿತಿ ತಿಳಿದುಕೊಳ್ಳಲೇಬೇಕು.

ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ದೇಶದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರಾ ಸಂಸ್ಥೆಯು ಅಧ್ಯಕ್ಷ ಆನಂದ್ ಮಹೀಂದ್ರಾ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಆನಂದ್ ಮಹೀಂದ್ರಾ ಅವರು ವಾರ್ಷಿಕವಾಗಿ 7.67 ಕೋಟಿ ಸಂಬಳ ಪಡೆಯುತ್ತಾರೆ ಎಂದರೇ ನಂಬಲೇಬೇಕು.

ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

2016-17ರ ಹಣಕಾಸು ವರ್ಷದ ಅವಧಿಯಲ್ಲಿ ಆನಂದ್ ಮಹೀಂದ್ರಾ ಅವರು 7.67 ಕೋಟಿ ಸಂಬಳ ಪಡೆಯುತ್ತಿದ್ದು, ಕಳೆದ ವರ್ಷಕ್ಕಿಂತ ಶೇ.16.38 ರಷ್ಟು ಹೆಚ್ಚಳವಾಗಿದೆ.

ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

ಮಹೀಂದ್ರಾ ಗ್ರೂಪ್‌ನ ಹಿರಿಯ ಅಧಿಕಾರಿಗಳಿಗೆ ಹೊಲೀಕೆ ಮಾಡಿದಲ್ಲಿ ಆನಂದ್ ಮಹೀಂದ್ರಾ ಸಂಬಳ ಪ್ರಮಾಣವು ಶೇ.109ಕ್ಕಿಂತ ಹೆಚ್ಚಿದ್ದು, ಉದ್ಯೋಗಿಗಳ ಪರ ನಿರ್ಣಯಗಳನ್ನು ಕೈಗೊಳ್ಳವಲ್ಲಿ ಮಹೀಂದ್ರಾ ಸಂಸ್ಥೆಯೇ ಮುಂಚೂಣಿಯಲ್ಲಿದೆ.

ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

ಇನ್ನು ಆನಂದ್ ಮಹೀಂದ್ರಾ ನಂತರ ಅತಿಹೆಚ್ಚು ಸಂಬಂಳ ಪಡೆಯುವರ ಪಟ್ಟಿಯಲ್ಲಿ ಪವನ್ ಗೋಯಾಂಕ್ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕವಾಗಿ 7.39 ಕೋಟಿ ಸಂಬಳ ಪಡೆಯುತ್ತಾರೆ. ಇವರು ಮಹೀಂದ್ರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಇಡೀ ಮಹೀಂದ್ರಾ ಸಮೂಹಗಳ ಆತಂರಿಕವಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಆನಂದ್ ಮಹೀಂದ್ರಾ ವಾರ್ಷಿಕ ಸಂಬಳ ಎಷ್ಟು ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸಕ್ತ ವರ್ಷದ ಹಣಕಾಸು ವ್ಯವಹಾರಗಳಲ್ಲೂ ಲಾಭಾಂಶದಲ್ಲಿರುವ ಮಹೀಂದ್ರಾ ಗ್ರೂಪ್, ಉದ್ಯೋಗಿ ಪರ ನಿರ್ಣಯಗಳನ್ನು ಕೈಗೊಳ್ಳವ ಮೂಲಕ ಇತರೆ ಸಂಸ್ಥೆಗಳಿಂತ ಭಿನ್ನವಾಗಿದೆ ಎಂದರೇ ತಪ್ಪಾಗಲಾರದು.

English summary
Read in Kannada about Anand Mahindras Salary Up by 16.38 In FY17.
Story first published: Tuesday, August 8, 2017, 17:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark