ಆಡಿ ಕ್ಯೂ3 1.4 ಪೆಟ್ರೋಲ್ ಕಾರು ಭಾರತದಲ್ಲಿ ಬಿಡುಗಡೆ: ವಿವರ ಇಲ್ಲಿದೆ
ಜರ್ಮನ್ ಆಟೋ ದೈತ್ಯ ಆಡಿ ತನ್ನ ಕ್ಯೂ3 ಮಾದರಿಯ ಕಾರನ್ನು ಉನ್ನತೀಕರಿಸಿ ಬಿಡುಗಡೆಗೊಳಿಸಿದೆ.
ಐಷಾರಾಮಿ ಕಾರು ತಯಾರಕ ಸಂಸ್ಥೆ ಆಡಿ ಇಂಡಿಯಾ ತನ್ನ ಪೆಟ್ರೋಲ್ ಮಾದರಿಯ ಕ್ಯೂ3 1.4 ಟಿಎಫ್ಎಸ್ಐ ವಾಹನವನ್ನು ಅನಾವರಣಗೊಳಿಸಿದ್ದು, ಈ ಕಾರು ಫ್ರಂಟ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ನಿಮ್ಮ ಮುಂದೆ ಬಂದಿದೆ.

ಪ್ರಪಂಚದಲ್ಲಿಯೇ ಐಷಾರಾಮಿ ಕಾರುಗಳ ತಯಾರಕೆಯಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ, ತನ್ನ ಯಶಸ್ವಿ ಕ್ಯೂ3 1.4 ಟಿಎಫ್ಎಸ್ಐ ಕಾರನ್ನು ಯಾಂತ್ರಿಕವಾಗಿ ಮತ್ತಷ್ಟು ಮೆಚ್ಚುವಂತಹ ಆಧುನಿಕ ಅಂಶಗಳನ್ನು ಸೇರಿಸಿ ಬಿಡುಗಡೆಗೊಳಿಸಿದೆ.

ಆಡಿ ಬಿಡುಗಡೆಗೊಳಿಸಿರುವ ಈ 1.4 ಟಿಎಫ್ಎಸ್ಐ ಕ್ರೀಡಾ ಬಳಕೆಯ ಕಾರಿನ ಬೆಲೆ ರೂ. 32.20 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿರುವ ಆಡಿ ಇಂಡಿಯಾ ಸಂಸ್ಥೆಯ ಈ ಕಾರು ಕೇವಲ ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಂಡಿದೆ.

ಬಿಡುಗಡೆಗೊಂಡಿರುವ ಈ ಕ್ಯೂ3 ಕ್ರೀಡಾ ಬಳಕೆಯ ಐಷಾರಾಮಿ ವಾಹನ 1.4-ಲೀಟರ್ ಪೆಟ್ರೋಲ್ ಟರ್ಬೊಚಾರ್ಜ್ ಎಂಜಿನ್ ಹೊಂದಿದ್ದು, 150 ಅಶ್ವಶಕ್ತಿ ಉತ್ಪಾದಿಸುವಷ್ಟು ಬಲಿಷ್ಠವಾಗಿದೆ.

ಈ ಕಾರು 6 ಸ್ಪೀಡ್ ಇರುವಂತಹ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದ್ದು, ಈ ಕಾರು ಒಂದು ಲೀಟರ್ ಪೆಟ್ರೋಲ್ ಇಂಧನಕ್ಕೆ 16.9 ಕಿ.ಮೀ ಮೈಲೇಜ್ ನೀಡಲಿದೆ.

ಪೆಟ್ರೋಲ್ ಮಾದರಿಯ ಈ ಕ್ಯೂ೩ 1.4 ಟಿಎಫ್ಎಸ್ಐ ಕಾರಿನ ಬಿಡುಗಡೆಯಿಂದಾಗಿ ಆಡಿಯ ಕ್ರೀಡಾಬಳಕೆಯ ವಾಹನಗಳ ವಿಭಾಗಕ್ಕೆ ಹೆಚ್ಚಿನ ಬಲ ಬಂದಿರುವುದಂತೂ ಸತ್ಯ.

ಬಿಡುಗಡೆಯಾಗುವ ಎಲ್ಲಾ ಶಕ್ತಿ ಮುಂದಿನ ಚಕ್ರಗಳು ಪಡೆದುಕೊಳ್ಳುವುದರಿಂದ, ಸಾಮಾನ್ಯವಾಗಿ ಕಾರುಗಳಿಗೆ ಇರುವಂತಹ ಆಲ್ ವೀಲ್ ಡ್ರೈವ್ ಸಿಸ್ಟಮ್ ಈ ಕಾರಿನ ನೀಡುತ್ತಿಲ್ಲ ಎಂದು ಕಂಪನಿ ತಿಳಿಸಿದೆ.

ಎಂದಿನಂತೆ 'ಮುಂಭಾಗದ ಚಕ್ರ ಚಲನೆ' ಆಯ್ಕೆಯೊಂದಿಗೆ ನಿಮ್ಮ ಮುಂದೆ ಬಂದಿರುವ ಈ ಕಾರು ಈ ಹಿಂದಿನ ಆವೃತಿಯಾದ ಕ್ಯೂ3 ಡೀಸೆಲ್ ಮಾದರಿಯಂತೆ ಇದೆ ಎಂದು ಕಂಪನಿ ತಿಳಿಸಿದೆ.

ಈ ಕಾರು ಇಂಧನ ಮತ್ತು ಕ್ಯಾಬಿನ್‌ನಲ್ಲಿ ಕಂದು ಬಣ್ಣದ ಕೆತ್ತನೆಗಳನ್ನು ಪಡೆದುಕೊಂಡಿದ್ದು, ಇವುಗಳನ್ನು ಹೊರತುಪಡಿಸಿ ಎಲ್ಲವೂ ಡೀಸೆಲ್ ಮಾದರಿಯಂತೆ ಇದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹೊಸ ಆಡಿ ಕ್ಯೂ3 ಪೆಟ್ರೋಲ್ ಮಾದರಿ ಎಂದಿನಂತೆ ಎಲ್ಇಡಿ ಹೆಡ್ ಲ್ಯಾಂಪ್, 17-ಇಂಚಿನ ಅಲಾಯ್ ಚಕ್ರಗಳು, ಕ್ರುಸಿ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು ತನ್ನದೇ ಆದ ಡಿಲಕ್ಸ್ ಡುಯಲ್ ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.


Click it and Unblock the Notifications