ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಐಷಾರಾಮಿ ವಿಭಾಗದಲ್ಲಿ ತನ್ನದೇ ರೀತಿಯ ವೈಶಿಷ್ಟ್ಯತೆ ಕಾಪಾಡಿಕೊಂಡಿರುವ ಆಡಿ ತನ್ನ ಕ್ಯೂ7 40 ಟಿಎಫ್‌ಎಸ್‌ಐ ಕಾರನ್ನು ಮುಂದಿನ ತಿಂಗಳು ಸೆಪ್ಟೆಂಬರ್ 1 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ.

By Girish

ಜರ್ಮನ್ ಕಾರು ತಯಾರಕ ಕಂಪನಿಯಾದ ಆಡಿ ಸಂಸ್ಥೆ ಇದೇ ಮೊದಲ ಬಾರಿಗೆ ಭಾರತದಲ್ಲಿ ತನ್ನ ಕ್ಯೂ7 ಶ್ರೇಣಿಯ ಪೆಟ್ರೋಲ್ ಎಂಜಿನ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಆಡಿ ಕ್ಯೂ7 40 ಟಿಎಫ್‌ಎಸ್‌ಐ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಎರಡೂ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರು, 2.0 ಲೀಟರ್ ನಾಲ್ಕು ಸಿಲಿಂಡರ್ ಇಂಜಿನ್ ಮೂಲಕ ಚಲನೆಯಾಗಲಿದ್ದು, ಈ ಎಂಜಿನ್ 370 ಎನ್ಎಂ ತಿರುಗುಬಲದಲ್ಲಿ 250 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಇನ್ನು, ಈ ಕಾರು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯೊಂದಿಗೆ ಅನಾವರಣಗೊಳ್ಳಲಿದ್ದು, ಈ ಗೇರ್‌ಬಾಕ್ಸ್ ಎಲ್ಲಾ ನಾಲ್ಕು-ಚಕ್ರಗಳಿಗೆ ಸಮಾನ ರೀತಿಯಲ್ಲಿ ಶಕ್ತಿ ಕಳುಹಿಸುವ ಕೆಲಸ ಮಾಡುತ್ತದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಡೀಸೆಲ್ ಎಂಜಿನ್ ಆಡಿ ಕ್ಯೂ7 45 ಟಿಡಿಐ ಮಾದರಿಯಂತೆ, ಪೆಟ್ರೋಲ್ ಕಾರು ಸಹ 7.1 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವಷ್ಟು ಶಕ್ತಿ ಪಡೆದುಕೊಂಡಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರು, 360-ಡಿಗ್ರಿ ಸುತ್ತುವರೆದ ಕ್ಯಾಮೆರಾ ಒಳಗೊಂಡ 'ಪಾರ್ಕಿಂಗ್ ಸಿಸ್ಟಮ್ ಪ್ಲಸ್' ವಿಶೇಷತೆ, ಹಾಗು ಕಾರಿನ ವೇಗ 110 ಕಿ.ಮೀ ವೇಗ ಧಾಟಿದ ನಂತರ ಹೆಡ್‌ಲ್ಯಾಂಪ್ ತೀವ್ರತೆಯನ್ನು ಹೆಚ್ಚಿಸಿ ಹೆಚ್ಚು ಪ್ರಕಾಶಮಾನತೆ ತಂದು ಕೊಡುವ ತಂತ್ರಜ್ಞಾನ ನೋಡಬಹುದಾಗಿದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಅಲ್ಲದೆ, ಪೆಟ್ರೋಲ್ ಆಡಿ ಕ್ಯೂ7 ಕಾರು ಎಲೆಕ್ಟ್ರಾನಿಕ್ ಸಹಾಯದಿಂದ ನಿಯಂತ್ರಿಸಬಹುದಾದ ಏರ್ ಸಸ್ಪೆನ್‌ಷನ್ ಅಮಾನತು ಹೊಂದಿದ್ದು, ವೇರಿಯೇಬಲ್ ಡ್ಯಾಂಪಿಂಗ್, ಆಡಿ ವರ್ಚುವಲ್ ಕಾಕ್ಪಿಟ್, 12.3 ಇಂಚಿನ ಟಚ್‌ಸ್ಕ್ರೀನ್ ಪರದೆ ಮತ್ತು ವಿಹಂಗಮ ಸನ್ರೂಫ್ ಸೌಲಭ್ಯ ಕಾಣಬಹುದಾಗಿದೆ.

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರಿನ ಬಿಡುಗಡೆ ದಿನಾಂಕ ನಿಗದಿ

ಆಡಿ ಕ್ಯೂ7 40 ಟಿಎಫ್‌ಎಸ್‌ಐ ಕಾರು, ರೂ. 75 ಲಕ್ಷದಿಂದ ರೂ. 80 ಲಕ್ಷ ಎಕ್ಸ್ ಶೋ ರೂಂ ಬೆಲೆ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. 7-ಆಸನಗಳ ಈ ಎಸ್‌ಯುವಿ ಕಾರು, ಜೀಪ್ ಗ್ರ್ಯಾಂಡ್ ಚೆರೋಕಿ ಪೆಟ್ರೋಲ್, ಮರ್ಸಿಡಿಸ್-ಬೆಂಜ್ ಜಿಎಲ್ಎಸ್ 400, ಬಿಎಂಡಬ್ಲ್ಯೂ ಎಕ್ಸ್ 5 35ಐ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ 3.0 ಎಲ್ ಪೆಟ್ರೋಲ್ ಕಾರುಗಳೊಂದಿಗೆ ಪ್ರತಿಸ್ಪರ್ಧೆ ನೆಡೆಸಲಿದೆ.

Article Published On: Friday, August 25, 2017, 15:05 [IST]
English summary
Audi Q7 40 TFSI will be launched in India on September 1, 2017. With this, the German carmaker will add a petrol engine to the Q7 lineup in India.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+