ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

Written By:

ಆಟೋ ಮೊಬೈಲ್ ಉದ್ಯಮದ ಪ್ರಸ್ತುತ ವಿದ್ಯಮಾನಗಳನ್ನು ಒಂದೇ ಸೂರಿನಡಿ ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ದೆಹಲಿ 2018ರ ಆಟೋ ಮೇಳವು ಮುಂಬರುವ ಫೆಬ್ರುವರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಆಟೋ ಮೇಳದ ಪ್ರಮುಖಾಂಶಗಳು ಇಲ್ಲಿವೆ.

ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಫೆಬ್ರುವರಿ 9ರಿಂದ 14ರ ತನಕ ದೆಹಲಿ ಆಟೋ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಈ ಬಾರಿ ದೆಹಲಿಯಲ್ಲಿ ಅಷ್ಟೇ ಅಲ್ಲದೇ ನೋಯ್ಡಾದಲ್ಲೂ ಆಟೋ ಪ್ರದರ್ಶನ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ.

ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಫೆ.9ರಿಂದ ದೆಹಲಿಯ ಪ್ರಗತಿ ಮೈದಾನದಲ್ಲಿ ಆಟೋ ಮೇಳಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಭವಿಷ್ಯದ ವಾಹನ ಮಾದರಿಗಳು, ಬಿಡಿಭಾಗಗಳು ಮತ್ತು ಫೇಸ್‌ಲಿಫ್ಟ್ ಆವೃತ್ತಿಗಳ ಪ್ರದರ್ಶನದಲ್ಲಿ ಭಾಗಿಯಾಗಲಿವೆ.

Recommended Video - Watch Now!
Tata Nexon Price And Features Variant-wise - DriveSpark
ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಇಂಡಿಯನ್ ಇಂಡ್‌ಸ್ಟ್ರಿಯಲ್ ಫೆಡರೆಷನ್ (ಸಿಸಿಐ) ಮತ್ತು ಆಟೋ ಮೊಬೈಲ್ ಅಸೋಷಿಯೆಶನ್ ಆಫ್ ಇಂಡಿಯಾ(ಎಸಿಎಂಎ) ನೇತೃತ್ವದಲ್ಲಿ ದೆಹಿಲಿ ಆಟೋ ಮೇಳವನ್ನು ಆಯೋಜಿಸಲಾಗಿದ್ದು, 1,85,000ಚದರ ಅಡಿಯಲ್ಲಿ ಆಟೋ ಪ್ರದರ್ಶನ ಸಿದ್ಧಗೊಳ್ಳುತ್ತಿದೆ.

ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಇನ್ನು ಈ ಬಾರಿ ನಡೆಯಲಿರುವ ಆಟೋ ಪ್ರದರ್ಶನಗಳಲ್ಲಿ ಹಲವು ಕಾರು ಮಾದರಿಗಳು ಪ್ರದರ್ಶನಗೊಳ್ಳಲಿದ್ದು, ಆಟೋ ಮೇಳದ ನಂತರವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ವಾಡಿಕೆಯಂತೆ ಖರೀದಿಗೆ ಲಭ್ಯವಾಗಲಿವೆ.

ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಇನ್ನೊಂದು ಪ್ರಮುಖ ವಿಚಾರ ಎನೆಂದರೆ ಈ ಬಾರಿ ಆಟೋ ಪ್ರದರ್ಶನದಲ್ಲಿ ಫೇಸ್‌ಲಿಫ್ಟ್ ಮಾದರಿಗಳು ಮತ್ತು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಹೊಸ ವಾಹನಗಳು ಪ್ರದರ್ಶನವಾಗಲಿದ್ದು, ಮಹೀಂದ್ರಾ ನಿರ್ಮಾಣದ ಎರಡು ಹೊಸ ಕಾರು ಮತ್ತು ಸುಜುಕಿ ಸ್ವಿಫ್ಟ್ ಸ್ಪೋಟ್ ಆವೃತ್ತಿಗಳು ಹೆಚ್ಚು ಗಮನಸೆಳೆಯುವ ವಿಶ್ವಾಸದಲ್ಲಿವೆ.

ಬಹುನೀರಿಕ್ಷಿತ 2018ರ ದೆಹಲಿ ಆಟೋ ಮೇಳಕ್ಕೆ ದಿನಾಂಕ ನಿಗದಿ

ಹೀಗಾಗಿ ಗ್ರಾಹಕರಿಗೆ ಭವಿಷ್ಯ ವಾಹನ ಬಗೆಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗುತ್ತಿದ್ದು, ಹೊಸ ವಾಹನ ವಿಭಾಗ, ಸಂಶೋಧನಾ ಆವೃತ್ತಿಗಳ ವಿಭಾಗ, ಸ್ಮಾರ್ಟ್ ಮೊಬಿಲಿಟಿ ವಿಭಾಗ, ಸ್ಪರ್ಧಾತ್ಮಕ ವಾಹನ ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಈ ಮೂಲಕ ಆಟೋ ಉದ್ಯಮ ಕುರಿತು ಪೂರ್ಣ ಪ್ರಮಾಣದ ಮಾಹಿತಿ ನೀಡುವ ಉದ್ದೇಶ ಹೊಂದಿದೆ.

English summary
Auto Expo The biggest auto show and much-anticipated event kick-starts in the second week of February 2018. Click for Details ...
Story first published: Tuesday, September 26, 2017, 20:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark