ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

Written By:

ಟಾಟಾ ಮೋಟಾರ್ಸ್ ಕಂಪನಿಯ ಬಾಂಗ್ಲಾದೇಶದ ಅತಿದೊಡ್ಡ ವಿತರಕರಾದ ನಿಟೋಲ್-ನಿಲೋಯ್ ಗ್ರೂಪ್ ಸಂಸ್ಥೆಯು ಭಾರತದ ಹೊರಗೆ ನ್ಯಾನೊ ಕಾರಿನ ಜೋಡಣೆ ಮಾಡಲು ಆಸಕ್ತಿ ತೋರಿಸಿದೆ.

To Follow DriveSpark On Facebook, Click The Like Button
ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

ನಿಟೋಲ್-ನಿಲೋಯ್ ಗ್ರೂಪ್ ಶೀಘ್ರದಲ್ಲಿಯೇ ದೇಶದಲ್ಲಿ ನ್ಯಾನೊ ಕಾರನ್ನು ಜೋಡಿಸುವ ಘಟಕ ಸ್ಥಾಪಿಸಲು ಮುಂದಾಗಿದೆ. ನಿಟೋಲ್-ನಿಲೋಯ್ ಗ್ರೂಪ್‌ನ ಚೇರ್ಮನ್ ಆಗಿರುವ ಮಾತಲುಬ್ ಅಹಮದ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

ಬಾಂಗ್ಲಾದೇಶ ಮೂಲದ ಟಾಟಾ ಮೋಟರ್ಸ್ ಉತ್ಪನ್ನಗಳ ವಿತರಕ ಕಂಪೆನಿಯಾದ ನಿಟೋಲ್-ನಿಲೋಯ್ ಗ್ರೂಪ್ ಕಂಪನಿ ನ್ಯಾನೋವನ್ನು ಬಾಂಗ್ಲಾದೇಶ ಜೋಡಿಸುವ ಬಗ್ಗೆ ಟಾಟಾ ಮೋಟಾರ್ಸ್ ಸಂಸ್ಥೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿದೆ ತಿಳಿಸಿದೆ.

ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

ದೇಶದಲ್ಲಿ ನ್ಯಾನೊ ಕಾರಿಗೆ ಇರುವತಹ ಉತ್ತಮ ಮಾರುಕಟ್ಟೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈ ರೀತಿಯ ನಿರ್ಧಾರವನ್ನು ಕೈಗೊಂಡಿರುವುದಾಗಿ ನಿಟೋಲ್-ನಿಲೋಯ್ ಗ್ರೂಪ್ ಕಂಪನಿ ಹೇಳಿಕೊಂಡಿದೆ.

ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

'ವಿಶ್ವದ ಅಗ್ಗದ ಕಾರು ಕಾರು' ಎಂಬ ಭಾವನಾತ್ಮಕ ಮೌಲ್ಯವನ್ನು ಪಡೆದಿರುವ ನ್ಯಾನೊ ಕಾರನ್ನು ಯಾವುದೇ ಕಾರಣಕ್ಕೂ ಉತ್ಪಾದನೆಯನ್ನು ನಿಲ್ಲಿಸುವುದಿಲ್ಲ ಎಂದು ಈ ಹಿಂದೆ ಟಾಟಾ ಮೋಟಾರ್ಸ್ ಸಂಸ್ಥೆಯು ಹೇಳಿಕೊಂಡಿತ್ತು.

ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

"ನಾವು ಪ್ರತಿವರ್ಷ 200-300 ನ್ಯಾನೊ ಕಾರುಗಳನ್ನು ಬಾಂಗ್ಲಾದೇಶದಲ್ಲಿ ಮಾರಾಟ ಮಾಡುತ್ತಿದ್ದೇವೆ. ನ್ಯಾನೊ ಹಾಗು ಟಾಟಾ ಮೋಟಾರ್ಸ್ ಸಂಸ್ಥೆಯ ಇತರ ಮಾದರಿಗಳನ್ನು ನಮ್ಮ ದೇಶದಲ್ಲಿ ಜೋಡಣೆ ಮಾಡಲು ಶುರು ಮಾಡಿದ್ದಲ್ಲಿ, ಬಾಂಗ್ಲಾದೇಶದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ನಮ್ಮ ಪಾಲನ್ನು ಹೆಚ್ಚಿಸಿಕೊಳ್ಳಬಹುದು" ಎಂದು ಮಾತಲುಬ್ ಅಹಮದ್ ತಿಳಿಸಿದ್ದಾರೆ.

ಭಾರತದ ಹೊರಗೆ ಟಾಟಾ ನ್ಯಾನೊ ಕಾರಿನ ಜೋಡಣಾ ಘಟಕ ನಿರ್ಮಾಣಕ್ಕೆ ಮುಂದಾದ ಟಾಟಾ ಮೋಟಾರ್ಸ್

ಟಾಟಾ ನ್ಯಾನೊ ಕಾರು ದೇಶದಲ್ಲಿ ಮೊದಲ ಬಾರಿಗೆ ಪ್ರಾರಂಭವಾದಾಗ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಆದರೆ ನಿಧಾನವಾಗಿ ತನ್ನ ಜನಪ್ರಿಯತೆ ಕಳೆದುಕೊಂಡಿದ್ದನ್ನು ನಾವು ಸ್ಮರಿಸಬಹುದಾಗಿದೆ.

English summary
Read in Kannada about The Nitol-Niloy Group, Bangladesh's largest distributor of Tata Motors, has shown interest in assembling the Nano overseas.
Story first published: Tuesday, August 29, 2017, 12:16 [IST]
Please Wait while comments are loading...

Latest Photos