ಅಗ್ಗದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

Written By:

ಪ್ರಸ್ತುತ ಮಾರುಕಟ್ಟೆಯಸಲ್ಲಿ ಲಭ್ಯವಿರುವ ಆಧುನಿಕ ಕಾರುಗಳು ಡೀಸೆಲ್ ಕಾರುಗಳಿಗೆ ಪೈಪೋಟಿ ನೀಡುವಷ್ಟು ಇಂಧನ ಕ್ಷಮತೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಕಡಿಮೆ ಬೆಲೆಯಲ್ಲೇ ಪೆಟ್ರೋಲ್ ಕಾರುಗಳ ಖರೀದಿ ಹೆಚ್ಚು ಜನಪ್ರಿಯತೆಗೊಳ್ಳುತ್ತಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಟಾಟಾ ಟಿಯಾಗೊ

ದೇಶದ ಪ್ರಮುಖ ಪೆಟ್ರೋಲ್ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಟಾಟಾ ಟಿಯಾಗೊ ಕಾರು ಮಾದರಿಯೂ, ಅತ್ಯುತ್ತಮ ಮೈಲೇಜ್ ಹಿನ್ನೆಲೆ ಭಾರತೀಯ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಟಾಟಾ ಟಿಯಾಗೊ - ಮೈಲೇಜ್ 23.84 ಕೀ.ಮೀ.

1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟಾಟಾ ಟಿಯಾಗೊ ಕಾರು ಪ್ರತಿ ಲೀಟರ್ ಗೆ 23.84 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಟಾಪ್ ಎಕ್ಸ್ ಝಡ್ ಮಾದರಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ರೂ. 3.20 ಹಾಗೂ ರೂ. 4.81 ಲಕ್ಷ ರು.ಗಳಗೆ ಲಭ್ಯವಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಮಾರುತಿ ಸುಜುಕಿ ಆಲ್ಟೊ ಕೆ10

ಆಲ್ಟೊದ ಶಕ್ತಿಶಾಲಿ ಆವೃತ್ತಿಯಾಗಿರುವ ಕೆ10 ಫ್ರಂಟ್ ಫಾಗ್ ಲ್ಯಾಂಪ್, ಟ್ಯಾಕೋಮೀಟರ್, ದೊಡ್ಡದಾದ ಚಕ್ರಗಳು, ಕಳ್ಳತನ ವಿರೋಧಿ ಅಲಾರಾಂ ಹಾಗೂ ಸೀಟು ಬೆಲ್ಟ್ ವಾರ್ನಿಂಗ್ ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಆಲ್ಟೊ ಕೆ10 - ಮೈಲೇಜ್ 24.07 ಕೀ.ಮೀ.

1- ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಆಲ್ಟೊ ಕೆ10, ಪ್ರತಿ ಲೀಟರ್ ಗೆ 24.07 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಆಲ್ಟೊ ಕೆ10 ಬೇಸ್ ಎಲ್ ಎಕ್ಸ್ ಹಾಗೂ ಟಾಪ್ ಎಂಡ್ ವಿಎಕ್ಸ್ ಐ ಮಾದರಿಗಳು ಅನುಕ್ರಮವಾಗಿ ರೂ. 3.25 ಹಾಗೂ ರೂ. 3.82 ಲಕ್ಷ ರು.ಗಳಿಗೆ ಲಭ್ಯವಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಮಾರುತಿ ಆಲ್ಟೊ 800

ಆಲ್ಟೊ ಕೆ10 ಗಿಂತಲೂ ಕಡಿಮೆ ಶಕ್ತಿಶಾಲಿ ಎನಿಸಿಕೊಂಡಿರುವ ಆಲ್ಟೊ 800 ಮೈಲೇಜ್ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ದೇಶದ್ಯಾಂತ ಹರಡಿರುವ ಸರ್ವೀಸ್ ಜಾಲವು ಈ ಚೊಕ್ಕದಾದ ಕಾರಿಗೆ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಮಾರುತಿ ಆಲ್ಟೊ 800 - ಮೈಲೇಜ್ 24.7 ಕೀ.ಮೀ.

796 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಲ್ಟೊ 800, ಪ್ರತಿ ಲೀಟರ್ ಗೆ 24.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆಲ್ಟೊ 800 ಬೇಸ್ ಹಾಗೂ ಟಾಪ್ ಎಂಡ್ ವೆರಿಯಂಟ್ ಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ ರೂ. 2.45 ಹಾಗೂ ರೂ. 3.30 ಲಕ್ಷಗಳಿಗೆ ಲಭ್ಯವಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ದಟ್ಸನ್ ರೆಡಿ ಗೊ

ಅರ್ಬನ್ ಕ್ರಾಸೋವರ್ ಶೈಲಿಯ ದಟ್ಸನ್ ರೆಡಿ ಗೊ, ಜನಪ್ರಿಯ ರೆನೊ ಕ್ವಿಡ್ ತಳಹದಿಯನ್ನು ಹಂಚಿಕೊಂಡಿದೆ. ಇದೇ ಕಾರಣಕ್ಕಾಗಿ ಮಾರಾಟದಲ್ಲೂ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿರುವ ರೆಡಿ ಗೊ ತನ್ನದೇ ಆದ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ದಟ್ಸನ್ ರೆಡಿ ಗೊ - ಮೈಲೇಜ್ 25.17 ಕೀ.ಮೀ.

ದಟ್ಸನ್ ರೆಡಿ ಗೊದಲ್ಲಿ 799 ಸಿಸಿ ಎಂಜಿನ್ 72 ಎನ್ ಎಂ ತಿರುಗಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ. ಅಂತೆಯೇ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ರೂ. 3.34 ಲಕ್ಷಕ್ಕೆ ಲಭ್ಯವಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ರೆನೊ ಕ್ವಿಡ್

ದೇಶದ ವಾಹನ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ರೆನೊ ಕ್ವಿಡ್ ಶ್ರೇಷ್ಠ ಮೈಲೇಜ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಭಾಗದಲ್ಲಿ ಮೀಡಿಯಾ ನೇವ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರುವ ರೆನೊ ಕ್ವಿಡ್ ಮಾರುತಿ ಆಲ್ಟೊಗೆ ಪ್ರಬಲ ಪೈಪೋಟಿ ಎನಿಸಿಕೊಂಡಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ರೆನೊ ಕ್ವಿಡ್ - ಮೈಲೇಜ್ 25.17 ಕೀ.ಮೀ.

ರೆನೊ ಕ್ವಿಡ್ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಟಾಪ್ ಎಂಡ್ ಕಾರುಗಳು ರೂ.3.64 ಲಕ್ಷ ರು.ಗಳಿಗೆ ಲಭ್ಯವಿರಲಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಸ್ವಿಫ್ಟ್ ಡಿಜೈರ್ ಟೂರ್

ಮಾರುತಿ ಸುಜುಕಿ ಬಹುನಿರೀಕ್ಷಿತ ವಿನೂತನ ಸ್ವಿಫ್ಟ್ ಡಿಜೈರ್ ಟೂರ್ ಕಾರು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸಲು ಸಜ್ಜುಗೊಂಡಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಸ್ವಿಫ್ಟ್ ಡಿಜೈರ್ ಟೂರ್ ಬೆಲೆ

1.2-ಲೀಟರ್ ಸಾಮರ್ಥ್ಯ ಹೊಂದಿದ್ದು,ಹೊಸ ಆವೃತ್ತಿಗಳ ಪ್ರಾರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.24 ಲಕ್ಷಕ್ಕೆ ಲಭ್ಯವಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹ್ಯುಂಡೈ ಎಕ್ಸೆಂಟ್

ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಕಾರು ಎಕ್ಸೆಂಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹ್ಯುಂಡೈ ಎಕ್ಸೆಂಟ್- ಮೈಲೇಜ್ 20.14 ಕೀ.ಮೀ

ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಸಿದ್ಧಗೊಂಡಿರುವ ಹ್ಯುಂಡೈ ಎಕ್ಸೆಂಟ್ ಪೆಟ್ರೋಲ್ ಕಾರು, ಪ್ರತಿ ಲೀಟರ್‌ಗೆ 20.14 ಮೈಲೇಜ್ ಸಾಮರ್ಥ್ಯ ಹೊಂದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.38 ಲಕ್ಷಕ್ಕೆ ಲಭ್ಯವಿರಲಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಫೋರ್ಡ್ ಫಿಗೊ

ಮೊನ್ನೆಯಷ್ಟೇ ಕ್ರಿಡಾ ಆವೃತ್ತಿಯ ಫೋರ್ಡ್ ಫಿಗೊ ಕ್ರೀಡಾ ಆವೃತ್ತಿಯ ಪೆಟ್ರೋಲ್ ಕಾರು ಬಿಡುಗಡೆಯಾಗಿದ್ದು, 1.2-ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿವೆ. ಜೊತೆಗೆ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಫೋರ್ಡ್ ಫಿಗೊ ಬೆಲೆ

ಕ್ರೀಡಾ ಆವೃತ್ತಿಯ ಪೆಟ್ರೋಲ್ ಕಾರಿನ ಬೆಲೆಗಳು ತುಸು ದುಬಾರಿಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 6.31 ಲಕ್ಷಕ್ಕೆ ಬೆಲೆ ನಿಗದಿಪಡಿಸಲಾಗಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹ್ಯುಂಡೈ ಇಯಾನ್

0.8-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹ್ಯುಂಡೈ ಇಯಾನ್ ಸ್ಪೋಟ್ಸ್ ಆವೃತ್ತಿಯು, 55ಬಿಎಚ್‌ಪಿ ಮತ್ತು 75ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹ್ಯುಂಡೈ ಇಯಾನ್ ಬೆಲೆ

ಉತ್ತರ ಕೋರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ತನ್ನ ವಿನೂತನ ಇಯಾನ್ ಸ್ಪೋಟ್ಸ್ ಆವೃತ್ತಿಯ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ 3.88 ಲಕ್ಷಕ್ಕೆ ಲಭ್ಯವಿರಲಿದೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹೋಂಡಾ ಸಿಟಿ 'ಫೇಸ್ ಲಿಫ್ಟ್'

2014ರ ನಂತರ ಮೊಟ್ಟ ಮೊದಲ ಬಾರಿಗೆ ಆಧುನಿಕಗೊಳಿಸಿರುವ ಹೋಂಡಾ ಸಿಟಿಯ ಆವೃತಿಯು ಭಾರತೀಯ ಮಾರುಕಟ್ಟೆ ಬಿಡುಗಡೆಯಾಗಿದ್ದು, ಪೆಟ್ರೋಲ್ ಆವೃತ್ತಿಯಲ್ಲಿವೇ ಒಟ್ಟು ಏಳು ವಿವಿಧ ನಮೂನೆಗಳಲ್ಲಿ ಲಭ್ಯವಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಹೋಂಡಾ ಸಿಟಿ- ಮೈಲೇಜ್ 17.4 ಕೀ.ಮಿ

ಎಸ್, ಎಸ್‌ವಿ, ವಿ, ವಿ(ಸಿವಿಟಿ), ವಿಎಕ್ಸ್ (ಎಂಟಿ), ವಿಎಕ್ಸ್ (ಸಿವಿಟಿ), ಝಡ್‌ಎಕ್ಸ್ (ಸಿವಿಟಿ) ಮಾದರಿಗಳಲ್ಲಿ ಲಭ್ಯವಿರುವ ಹೋಂಡಾ ಸಿಟಿ ಫೇಸ್ ಲಿಫ್ಟ್ ಕಾರು ಆರಂಭಿಕ ಬೆಲೆ ರೂ. 8.5 ಲಕ್ಷದಿಂದ ಲಭ್ಯವಿದ್ದು, ಪ್ರತಿ ಲೀಟರ್ಗೆ 17.4 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿವೆ.

ಅಗ್ರದ ಬೆಲೆಗೆ ಖರೀದಿ ಮಾಡಬಹುದಾದ ಉತ್ತಮ ಪೆಟ್ರೋಲ್ ಎಂಜಿನ್ ಕಾರುಗಳು

ಪ್ರಸ್ತುತ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರಿನ ಬಗ್ಗೆ ಅನುಭವಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

English summary
Read in Kannada about Best mileage petrol cars in Indian Market.
Please Wait while comments are loading...

Latest Photos