2018ರ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್‌ನ ಹೊಸ ಟೀಸರ್ ಬಿಡುಗಡೆ
ಬಿಡುಗಡೆಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ವೈಶಿಷ್ಟ್ಯತೆಗಳ ಕುರಿತಾದ ಹೊಸ ಟೀಸರ್ ಪರಿಚಯಿಸಲಾಗಿದ್ದು, ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಬಗ್ಗೆ ಸುಳಿವು ನೀಡಿದೆ.
ಬಿಡುಗಡೆಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ವೈಶಿಷ್ಟ್ಯತೆಗಳ ಕುರಿತಾದ ಹೊಸ ಟೀಸರ್ ಪರಿಚಯಿಸಲಾಗಿದ್ದು, ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಬಗ್ಗೆ ಸುಳಿವು ನೀಡಿದೆ.

ಜರ್ಮನ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಬಹುನೀರಿಕ್ಷಿತ ಐ8 ರೋಡ್‌ಸ್ಟರ್ ಬಿಡುಗಡೆಗಾಗಿ ಸಿದ್ಧಗೊಳ್ಳುತ್ತಿದ್ದು, ಅಧಿಕೃತವಾಗಿ ಮತ್ತೊಂದು ಹೊಸ ಟೀಸರ್‌ನ್ನು ಇಂದು ಬಿಡುಗಡೆಗೊಳಿಸಲಾಗಿದೆ.

ಬಿಎಂಡಬ್ಲ್ಯು ಕಾರು ಮಾದರಿಗಳಲ್ಲೇ ಅತ್ಯಂತ ದುಬಾರಿ ಆವೃತ್ತಿಯಾಗಿರುವ ಐ8 ರೋಡ್‌ಸ್ಟರ್, 1.5-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆ ಟ್ವಿನ್ ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಲಿದೆ.

ಹೀಗಾಗಿ 375 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದ್ದು, ಪೆಟ್ರೋಲ್ ಎಂಜಿನ್ ಜೊತೆ ಮೊದಲ 50ಕಿಮಿ ದೂರವನ್ನು ಎಲೆಕ್ಟ್ರಿಕ್ ಎಂಜಿನ್ ಸಾಮರ್ಥ್ಯದೊಂದಿಗೆ ಮುನ್ನಡೆಯಲಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ಐ8 ರೋಡ್‌ಸ್ಟರ್ ಬೆಲೆ ರೂ. 2.40 ಕೋಟಿಯಿಂದ ರೂ. 2.80 ಕೋಟಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಟೀಸರ್‌ನಲ್ಲಿ ಹೊರ ಮೈ ವಿನ್ಯಾಸಗಳನ್ನು ಬಿಎಂಡಬ್ಲ್ಯು ಬಿಟ್ಟುಕೊಟ್ಟಿಲ್ಲ.

ಆದ್ರೆ ಮುಂದಿನ ತಿಂಗಳು ಸೆಪ್ಟೆಂಬರ್‌ನಿಂದ ಆರಂಭಗೊಳ್ಳಲಿರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಐ8 ರೋಡ್‌ಸ್ಟರ್ ಭಾಗಿಯಾಗಲಿದ್ದು, ಪವರ್ ಟ್ರೈನ್ ಎಂಜಿನ್‌ನೊಂದಿಗೆ ಕೂಪೆ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡುವ ತವಕದಲ್ಲಿದೆ.
ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿ ನಂತರ 2018ರ ಮೊದಲ ತ್ರೈಮಾಸಿಕ ಅವಧಿಗೆ ಐ8 ರೋಡ್‌ಸ್ಟರ್ ಬಿಡುಗಡೆಯಾಗಿದ್ದು, ಬಿಎಂಡಬ್ಲ್ಯು ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ ವೀಕ್ಷಿಸಿ.


Click it and Unblock the Notifications