ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯು ಎಂ5..!

Written By:

ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿರುವ ಬಿಎಂಡಬ್ಲ್ಯು ಸಂಸ್ಥೆಯು ಮುಂಬರುವ ದಿನಗಳಲ್ಲಿ ಎಂ5 ಸರಣಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಮಾಹಿತಿ ಇಲ್ಲಿವೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಕೈಗೆಟುವ ದರಗಳಲ್ಲಿ ಅತ್ಯುತ್ತಮ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿರುವ ಬಿಎಂಡಬ್ಲ್ಯು, 592 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಎಂಜಿನ್ ಪರಿಚಯಿಸಲು ಮುಂದಾಗಿರುವ ಆಟೋ ಉದ್ಯಮದಲ್ಲೇ ಹೊಸ ಚರ್ಚೆಗೆ ಕಾರಣವಾಗಿದೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯು, ಮುಂದಿನ ತಿಂಗಳಿಂದ ಆರಂಭವಾಗಲಿರುವ ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗುವ ಸುಳಿವು ನೀಡಿದೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಹೀಗಾಗಿ ಬಿಎಂಡಬ್ಲ್ಯು ಬಿಡುಗಡೆಗೊಳಿಸುತ್ತಿರುವ ಎಂ5 ಸರಣಿ ಮೇಲೆ ಅತಿಹೆಚ್ಚು ನೀರಿಕ್ಷೆಯಿದ್ದು, ಸುಧಾರಿತ ತಂತ್ರಜ್ಞಾನಗಳ ಜೊತೆ ಆಲ್ ವೀಲ್ಹ್ ಡ್ರೈವ್ ವ್ಯವಸ್ಥೆಯೊಂದಿಗೆ ಆಪ್ ರೋಡಿಂಗ್‌ನಲ್ಲೂ ಮಿಂಚಲು ಸಜ್ಜುಗೊಂಡಿವೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿದಂತೆ ಎಂ5 ಸರಣಿ ಅತಿಹೆಚ್ಚು ಪವರ್ ಉತ್ಪಾದಿತ ಎಂಜಿನ್ ಹೊಂದಿದ್ದು, 4.4-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ. ಹೀಗಾಗಿ 592-ಬಿಎಚ್‌ಪಿ ಮತ್ತು 750-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಇನ್ನು ವಿವಿಧ ಮೂಡ್‌ಗಳಲ್ಲಿ ಚಾಲನಾ ಕೌಶಲ್ಯ ಪ್ರದರ್ಶನಕ್ಕೆ ಅನುಕೂಲಕರವಾಗುವಂತೆ ಎಂ5 ಅಭಿವೃದ್ಧಿ ಮಾಡಲಾಗಿದ್ದು, 4ಡಬ್ಲ್ಯುಡಿ, 4ಡಬ್ಲ್ಯುಡಿ ಸ್ಪೋರ್ಟ್, 2ಡಬ್ಲ್ಯುಡಿ ಎಂಬ ಚಾಲನಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಇದರ ಜೊತೆಗೆ ಲಾಂಗ್ ವೀಲ್ಹ್ ಬೇಸ್ ಆಧಾರ ಮೇಲೆ ಎಂ5 ಸರಣಿಗಳನ್ನು ವಿನ್ಯಾಸಗೊಳಿಸಲಾಗಿದ್ದು, ಕೇವಲ 3.5 ಸೇಕೆಂಡುಗಳಲ್ಲಿ 100 ಕಿಮಿ ವೇಗ ಸಾಧಸಿಬಲ್ಲವು. ಹಾಗಿಯೇ ಗರಿಷ್ಠ ಮಟ್ಟದಲ್ಲಿ 306 ಕಿಮಿ ದೂರ ಕ್ರಮಿಸುವ ಶಕ್ತಿ ಹೊಂದಿವೆ.

ಸೆಡಾನ್ ವಿಭಾಗದ ಸೂಪರ್ ಕಿಂಗ್ ಆಗಲಿದೆ ಬಿಎಂಡಬ್ಲ್ಯು ಎಂ5?

ಇದಲ್ಲದೇ 20 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಎಂ5 ಕಾರುಗಳು ಹೊಸ ತಂತ್ರಜ್ಞಾನ ಬಳಕೆ ಹಿನ್ನೆಲೆ ಈ ಹಿಂದಿನ ಸೆಡಾನ್ ಸರಣಿಗಿಂತಲೂ 100 ಕೆಜಿ ತೂಕವನ್ನು ಹಗುರಗೊಳಿಸಲಾಗಿದ್ದು, ರೂ.85 ಲಕ್ಷಕ್ಕೆ ಲಭ್ಯವಿರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Ballistic BMW M5 Revealed.
Story first published: Wednesday, August 23, 2017, 9:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark