ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

Written By:

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಮೂರು ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಓಲಾ ಮತ್ತು ಉಬರ್‌ ಕ್ಯಾಬ್‌ ಚಾಲಕರು ಮತ್ತು ಮಾಲೀಕರು, ಸಂಸ್ಥೆಗೆ ಸೆಡ್ಡು ಹೊಡೆಯಲು ಕ್ಯಾಬ್ ಸೇವೆಗೆ ಚಾಲಕರದ್ದೆ ಆದ ಒಂದು ಮೊಬೈಲ್ ಆಪ್ ತಯಾರಿಸಲು ನಿರ್ಧರಿಸಿದ್ದಾರೆ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಕ್ಯಾಬ್ ಮಾಲಿಕರು ಮತ್ತು ಚಾಲಕರು ತಮ್ಮ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಕಂಪನಿಗಳ ವಿರುದ್ಧ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಸರಕಾರವಾಗಲೀ ಆ್ಯಪ್ ಆಧಾರಿತ ಸೇವೆ ನೀಡುವ ಕಂಪನಿಗಳಾಗಿ ಸ್ಪಂದಿಸಿರಲಿಲ್ಲ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಇದರಿಂದ ಬೇಸತ್ತು, ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿರ್ಧಾರ ಕೈಗೊಂಡಿರುವ ಚಾಲಕರು ತಮ್ಮದೇ ಆದ ಮೊಬೈಲ್ ತಂತ್ರಾಂಶ ಸಿದ್ಧಪಡಿಸುವ ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಓಲಾ ಮತ್ತು ಉಬರ್ ಚಾಲಕರು ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಈ ವಿಚಾರವಾಗಿ ಸಾರಿಗೆ ಇಲಾಖೆ ಮಧ್ಯೆ ಪ್ರವೇಶಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರೂ ಸಹ ಈವರೆಗೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದೆ ಇರುವುದು ಈ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಎನ್ನಲಾಗಿದೆ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಓಲಾ, ಟಾಕ್ಸಿ ಫಾರ್ ಶೂರ್ ಮ್ತತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, " ಕೇವಲ 20 ರಿಂದ 30 ದಿನಗಳ ಒಳಗಾಗಿ ತಂತ್ರಾಂಶ ಸಿದ್ದವಾಗಲಿದ್ದು, ಇದರ ನಿರ್ವಹಣೆ ಬಗ್ಗೆ, ವೃದ್ಧಿಪಡಿಸುವ ಬಗ್ಗೆ ಮಾನ್ಯ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಜೊತೆ ಮಾತುಕತೆ ನೆಡೆಸಲಾಗಿದೆ" ಎಂದರು.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಸದ್ಯ ಇಲ್ಲಿವರೆಗೆ 8,000 ಚಾಲಕರು ಈ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ಕಚೇರಿ ಎಲ್ಲಿ? ಹೇಗೆ ರಚನೆ ಮಾಡಬೇಕು? ಗ್ರಾಹಕ ಸೇವಾ ಪ್ರತಿನಿಧಿಗಳ ನೇಮಕ ಮುಂತಾದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಪಾಷಾ ಹೇಳಿದ್ದಾರೆ.

ನಮ್ಮದೇ ಸ್ವಂತ ಆಪ್ ಬಿಡುಗಡೆ ಮಾಡ್ತೀವಿ !! ಓಲಾ, ಉಬರ್‌ಗೆ ಸೆಡ್ಡು ಹೊಡೆದ ಕಾರು ಚಾಲಕರು.

ಸದ್ಯ ಇಲ್ಲಿವರೆಗೆ 8,000 ಚಾಲಕರು ಈ ಯೋಜನೆಗೆ ಬೆಂಬಲ ಸೂಚಿಸಿದ್ದು, ಕಚೇರಿ ಬಗ್ಗೆ, ಮತ್ತು ತಂತ್ರಾಂಶ ರಚನೆ ಮಾಡವ ಬಗ್ಗೆ, ಗ್ರಾಹಕ ಸೇವಾ ಪ್ರತಿನಿಧಿಗಳ ನೇಮಕ ಮುಂತಾದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಪಾಷಾ ತಿಳಿಸಿದರು.

English summary
cab drivers and cab owners decided to start their own mobile app whith the help of former cheif minister H D kumaraswamy.
Story first published: Monday, March 6, 2017, 19:25 [IST]
Please Wait while comments are loading...

Latest Photos