ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಜುಲೈ 1 ರಿಂದ ಜಾರಿಯಾಗಿರುವ ಜಿಎಸ್‌ಟಿ ಹೊಸ ನೀತಿಯಿಂದಾಗಿ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಭರ್ಜರಿ ಆದಾಯ ಗಳಿಸುತ್ತಿವೆ.

By Praveen

ಜುಲೈ 1 ರಿಂದ ಜಾರಿಯಾಗಿರುವ ಜಿಎಸ್‌ಟಿ ಹೊಸ ನೀತಿಯಿಂದಾಗಿ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಭರ್ಜರಿ ಆದಾಯ ಗಳಿಸುತ್ತಿವೆ. ಇದಕ್ಕೆ ಕಾರಣ ಕಾರು ಉತ್ಪಾದನೆ ಮತ್ತು ಮಾರಾಟ ಮೇಲಿನ ಸೆಸ್ ಇಳಿಕೆಯಾಗಿದ್ದು, ಮಾರಾಟ ಪ್ರಕ್ರಿಯೆ ಮಾಹಿತಿ ಹೀಗಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ಐಎಲ್)

ಭಾರತೀಯ ಮಾರುಕಟ್ಟೆ ಸತತ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಶೇ.23.8 ರಷ್ಟು ಪ್ರಗತಿಯೊಂದಿಗೆ ಅಗಸ್ಟ್‌ನಲ್ಲಿ 1,63,701 ಕಾರುಗಳನ್ನು ಮಾರಾಟ ಮಾಡಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಮಾರುತಿ ಸುಜುಕಿ ಉತ್ಪನ್ನಗಳಾದ ಬಲೆನೊ ಮತ್ತು ಸ್ಪಿಫ್ಟ್ ಡಿಜೈರ್ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆಯಿದ್ದು, ಇದು ಮುಂಬರುವ ಉತ್ಸವ ದಿನಗಳಲ್ಲಿ ಇನ್ನು ಹೆಚ್ಚಾಗುವ ನೀರಿಕ್ಷೆಯಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಹ್ಯುಂಡೈ ಇಂಡಿಯಾ

ಭಾರತದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಕೂಡಾ ಕಾರು ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ದೇಶಿಯ ಕಾರು ಮಾರಾಟದಲ್ಲಿ ಶೇ.9 ಏರಿಕೆ ಕಂಡಿದೆ.ಈ ಮೂಲಕ 47,103 ಕಾರುಗಳನ್ನು ಮಾರಾಟ ಮಾಡಿದ್ದು, ನ್ಯೂ ಜನರೇಷನ್ ವೆರ್ನಾ ಮೇಲೆ ಹೆಚ್ಚು ನೀರಿಕ್ಷೆಯಿದೆ.

Recommended Video

Maruti Prices Post GST In Kannada - DriveSpark ಕನ್ನಡ
ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್

ಜಿಎಸ್‌ಟಿ ಜಾರಿಯಾದ ನಂತರ ಹೋಂಡಾ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಶೇ.25ರಷ್ಟು ಪ್ರಗತಿಯೊಂದಿದೆ 17,365 ಕಾರುಗಳನ್ನು ಮಾರಾಟ ಮಾಡಿದೆ. ಇದಲ್ಲದೇ ಹೋಂಡಾ ಸಿಟಿ, ಡಬ್ಲ್ಯುಆರ್-ವಿ ಕಾರುಗಳಿಗೆ ವಿಶೇಷ ಬೇಡಿಕೆ ಬಂದಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಟಾಟಾ ಮೋಟಾರ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಶೇ.14ರಷ್ಟು ಪ್ರಗತಿ ಸಾಧಿಸಿದ್ದು, ಅಗಸ್ಟ್ ಅವಧಿಯಲ್ಲಿ 48, 988 ಕಾರುಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಮಹೀಂದ್ರಾ ಆ್ಯಂಡ್ ಮಹೀಂದ್ರಾ

ವಿಶೇಷ ಉತ್ಪನ್ನಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸುತ್ತಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಶೇ. 6 ಬೆಳವಣಿಗೆಯೊಂದಿಗೆ 19,325 ಕಾರು ಮಾದರಿಗಳನ್ನು ಮಾರಾಟ ಮಾಡಿದೆ. ಆದ್ರೆ ರಫ್ತು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಸ್ಕಾರ್ಪಿಯೋ , ಎಕ್ಸ್‌ಯುವಿ 500 ಮಾದರಿಗಳ ಉತ್ಪಾದನೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಟೊಯೊಟಾ ಕಿಲೋಸ್ಕರ್

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳ ಮಾರಾಟ ಪ್ರಮಾಣ ತಗ್ಗಿದ್ದು, ಅಗಸ್ಟ್ ಅವಧಿಯಲ್ಲಿ ಶೇ.6.86 ರಷ್ಟು ಇಳಿಕೆಯೊಂದಿಗೆ 13,081 ಕಾರುಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಫೋರ್ಡ್ ಇಂಡಿಯಾ

ಅಮೆರಿಕ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಫೋರ್ಡ್ ಇಂಡಿಯಾ ಕೂಡಾ ಕಾರು ಮಾರಾಟದಲ್ಲಿ ಮುಗ್ಗರಿಸಿದ್ದು, ಅಗಸ್ಟ್ ಅವಧಿಯಲ್ಲಿ ಶೇ.40 ಇಳಿಕೆಯೊಂದಿಗೆ ಕೇವಲ 15,740 ಕಾರುಗಳನ್ನು ಮಾರಾಟ ಮಾಡಲು ಮಾತ್ರ ಶಕ್ತವಾಗಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಫೋಕ್ಸ್‌ವ್ಯಾಗನ್ ಇಂಡಿಯಾ

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸಮತೋಲನ ಕಾಯ್ದುಕೊಂಡಿರುವ ಫೋಕ್ಸ್‌ವ್ಯಾಗನ್, ಶೇ.6ರಷ್ಟು ಇಳಿಕೆಯೊಂದಿಗೆ ಅಗಸ್ಟ್ ಅವಧಿಯಲ್ಲಿ 4,159 ಕಾರುಗಳನ್ನು ಮಾರಾಟ ಮಾಡಿದೆ.

ಜಿಎಸ್‌ಟಿ ನಂತರ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜುಲೈ 1ರಿಂದ ಜಾರಿಗೊಂಡ ಜಿಎಸ್‌ಟಿಯು ಕಾರು ಮಾರಾಟ ಮತ್ತು ಉತ್ಪಾದನೆ ಮೇಲೆ ಭಾರೀ ಪರಿಣಾಮ ಉಂಟು ಮಾಡಿದ್ದು, ಕೆಲವು ಕಾರು ಉತ್ಪಾದಕರಿಗೆ ಇದು ಪೂರಕವಾದರೆ ಇನ್ನು ಕೆಲವು ಸಂಸ್ಥೆಗಳಿಗೆ ಹೊಡೆತ ಕೊಟ್ಟಿದೆ.

Article Published On: Saturday, September 2, 2017, 17:32 [IST]
English summary
Read in Kannada about 2017 August Car Sales: Maruti Sales Up, Toyota Witnesses Decline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+