ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

Written By:

ಮೇ 16 ರಿಂದ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ ಕಾರ್ಯರೂಪಕ್ಕೆ ಬರುತ್ತಿದ್ದು, ಬಂಕ್ ಮಾಲೀಕರು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆ ಆಧರಿಸಿ ಇನ್ಮುಂದೆ ದಿನಂಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗಲಿದ್ದು, ಹೊಸ ಯೋಜನೆ ಮೇ 16ರಿಂದ ಅಧಿಕೃತವಾಗಿ ಕಾರ್ಯರೂಪ ಬರುತ್ತಿದೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಆದ್ರೆ ತೈಲ ಕಂಪನಿಗಳ ನಿರ್ಧಾರದಿಂದ ಬಂಕ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕಣೆ ಮಾಡುವ ಬಗ್ಗೆ ಗೊಂದಲದಲ್ಲಿದ್ದಾರೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಸದ್ಯ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಪ್ರತಿ 15 ದಿನಗಳಿಗೆ ಪರಿಷ್ಕಣೆಯಾಗುತ್ತಿದ್ದು, ಹೊಸ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ಯಾವ ರೀತಿ ಬೆಲೆ ನಿಗದಿ ಮಾಡಬೇಕೆಂಬ ಗೊಂದಲ ಸೃಷ್ಟಿಯಾಗಿದೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಇನ್ನು ಡೀಸೆಲ್ ಮತ್ತು ಪೆಟ್ರೋಲ್ ತುಂಬಿಸುವ ಮಷಿನ್‌ಗಳು ಇದುವರೆಗೆ ಯಾವುದೇ ರೀತಿಯ ನವೀಕರಣ ಕೂಡಾ ಆಗಿಲ್ಲ. ಈ ಹಿನ್ನೆಲೆ ಹೊಸ ಯೋಜನೆ ಕಾರ್ಯರೂಪಕ್ಕೆ ಬಂದರೇ ಅದರಿಂದ ನಷ್ಟವಾಗಲಿದೆ ಎಂಬುವುದು ಬಂಕ್ ಮಾಲೀಕರ ಅಳಲು.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಹೀಗಾಗಿ ಹೊಸ ಯೋಜನೆ ಕಾರ್ಯರೂಪಕ್ಕೆ ತರುವ ಮುನ್ನ ದಿನಂಪ್ರತಿ ಬದಲಾವಣೆಯಾಗುವ ಬೆಲೆ ವ್ಯತ್ಯಾಸಗಳನ್ನು ನಿಯಂತ್ರಣ ಮಾಡಬಲ್ಲ ಸ್ವಯಂಚಾಲಿತ ಮಷಿನ್ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಇಲ್ಲವಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡದೇ ಮುಷ್ಕರ ನಡೆಸುವಾಗಿ ಬೆದರಿಕೆ ಹಾಕಿರುವ ಬಂಕ್ ಮಾಲೀಕರು, ಈ ಸಂಬಂಧ ತೈಲ ಸಚಿವಾಲಯಕ್ಕೆ ಪತ್ರ ಕೂಡಾ ಬರೆದಿದ್ದಾರೆ.

ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕಣೆ- ಸಂಕಷ್ಟಕ್ಕೆ ಸಿಲುಕಿದ ಬಂಕ್ ಮಾಲೀಕರು

ಇನ್ನು ಮೊದಲ ಹಂತವಾಗಿ ಪುದುಚೇರಿ, ವೈಜಾಕ್, ಉದಯ್‌ಪುರ್, ಜಮಶೇಡ್‌ಪುರದಲ್ಲಿ ಮತ್ತು ಚಂಡಿಘರ್ ನಗರಗಳಲ್ಲಿ ಪ್ರತಿದಿನವೂ ತೈಲ ಪರಿಷ್ಕರಣೆ ಕಾರ್ಯರೂಪಕ್ಕೆ ಬರಲಿದ್ದು, ನಂತರ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ.

English summary
Read in Kannada about petrol station owners threaten strike for fuel prices to be revised daily.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark