ಹೆದ್ದಾರಿಗಳಲ್ಲಿ ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

Written By:

ಇನ್ಮುಂದೆ ನೀವು ಹೆದ್ದಾರಿಗಳಲ್ಲಿ ಟೋಲ್‌ ಕಟ್ಟಲು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಿಲ್ಲ. ಯಾಕೇಂದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ 'ಫಾಸ್ಟ್ ಟ್ಯಾಗ್' ಎಂಬ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುತ್ತಿದೆ.

To Follow DriveSpark On Facebook, Click The Like Button
ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗುತ್ತಿದ್ದು, ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ನಿಯಮ ಜಾರಿ ಮಾಡಲಾಗುತ್ತಿದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಇದಕ್ಕಾಗಿಯೇ ಆನ್‌ಲೈನ್ ಮೂಲಕವೇ ಎಲೆಕ್ಟ್ರಾನಿಕ್ ಟ್ಯಾಗ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇವುಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡಬಹುದಾಗಿದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಹೊಸ ವ್ಯವಸ್ಥೆಯಿಂದ ನೀವು ಟೋಲ್‌ ಕೇಂದ್ರಗಳಲ್ಲಿ ಹಣ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಸೆಪ್ಟೆಂಬರ್‌ ಮೊದಲ ವಾರದಿಂದಲೇ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಗಳು ಕಾರ್ಯನಿರ್ವಹಣೆ ಶುರು ಮಾಡಲಿವೆ.

Recommended Video - Watch Now!
2018 Hyundai Verna Indian Model Unveiled | In Kannada - DriveSpark ಕನ್ನಡ
ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಇನ್ನೊಂದು ಮುಖ್ಯ ವಿಚಾರವೆಂದರೆ ಹೊಸ ನಿಯಮದ ಪ್ರಕಾರ ಸದ್ಯ ಚಾಲ್ತಿಯಲ್ಲಿರುವ ನಾಲ್ಕು ಚಕ್ರದ ವಾಹನಗಳು ಫಾಸ್ಟ್ ಟ್ಯಾಗ್‌ ಅನ್ನು ಆಯ್ಕೆ ಪದ್ಧತಿ ಮೇಲೆ ಅಳವಡಿಸಿಕೊಳ್ಳಬಹುದಾಗಿದ್ದು, ಇನ್ಮುಂದೆ ರಸ್ತೆಗಿಳಿಯಲಿರುವ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯವಾಗಿ ಹೊಂದಬೇಕಿದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಇದಕ್ಕಾಗಿ ಆ್ಯಪ್ ಸ್ಟೋರ್‌ನಿಂದ ಆಂಡ್ರಾಯಿಡ್ ಮತ್ತು ಐಎಸ್ಒ ಮಾದರಿಗಳಿಗೆ ಸರಿಹೊಂದುವ "ಮೈ ಫಾಸ್ಟ್ ಟ್ಯಾಗ್" ಆ್ಯಪ್ ಅನ್ನು ಡೌನ್‌ಲೋಡ್ ಮಾಡಬೇಕಿದ್ದು, ಈ ಮೂಲಕವೇ ನೀವು ಟೋಲ್ ಬಿಲ್‌ ಅನ್ನು ಪಾವತಿ ಮಾಡಬಹುದಾಗಿದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಆದ್ರೆ ಹೊಸ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಶೋರಂಗಳಲ್ಲೇ ಹೊಸ ವ್ಯವಸ್ಥೆಯನ್ನು ಸ್ವಯಂಪ್ರೇರಿತವಾಗಿ ಅಳವಡಿಕೆ ಮಾಡಿಕೊಡಬೇಕಿದ್ದು, ಟ್ಯಾಗ್‌ನಲ್ಲಿರುವ ಜಿಪಿಎಸ್ ಸೌಲಭ್ಯದೊಂದಿಗೆ ನಿಮ್ಮ ಹಣ ಪಾವತಿಯಾಗುತ್ತದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಇನ್ನು ಫಾಸ್ಟ್ ಟ್ಯಾಗ್ ವ್ಯವಸ್ಥೆಯು ಸೆಪ್ಟೆಂಬರ್ 1ರಿಂದಲೇ ಆರಂಭಗೊಳ್ಳಲಿದ್ದು, ಅಕ್ಟೋಬರ್ 1ರಿಂದ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯ ಫಾಸ್ಟ್ ಟ್ಯಾಗ್‌ಗಳನ್ನು ಜಾರಿ ಮಾಡಲಾಗುತ್ತಿದೆ.

ಇನ್ಮುಂದೆ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟೋಲ್ ಗೇಟ್‌ಗಳು ಇರುವ ಕಡೆ ಒಂದು ಲೈನ್ ಅನ್ನು ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಹೊಂದಿರುವ ವಾಹನ ಸವಾರರಿಗೆ ಮುಕ್ತವಾಗಿಡಲು ಉದ್ದೇಶಿಸಲಾಗಿದ್ದು, ಹೊಸ ವ್ಯವಸ್ಥೆಯಿಂದ ಹೆದ್ದಾರಿ ಟೋಲ್‌ಗಳಲ್ಲಿ ಅನಗತ್ಯವಾಗಿ ಕಾಯುವಿಕೆಯು ತಪ್ಪಲಿದೆ. ಜೊತೆಗೆ ದೂರದ ಪ್ರಯಾಣದ ಗ್ರಾಹಕರಿಗೆ ಆಗುವ ಕಿರಿಕಿರಿಯು ತಗ್ಗಲಿದೆ.

English summary
Read in Kannada about FASTag To Be Made Mandatory For New Four-Wheelers.
Story first published: Thursday, August 31, 2017, 20:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark