ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಸದ್ಯ ಸೂಪರ್ ಕಾರುಗಳ ವಿಭಾಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ಫೆರಾರಿಯು, ಮುಂದಿನ 3 ವರ್ಷಗಳಲ್ಲಿ ತನ್ನ ಸೀಮಿತ ಆವೃತ್ತಿಗಳನ್ನು ಬದಲಾವಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

By Praveen

ಇಟಾಲಿಯನ್ ಮೂಲದ ಪ್ರತಿಷ್ಠಿತ ಸ್ಪೋರ್ಟ್ಸ್ ಕಾರು ಉತ್ಪಾದನಾ ಸಂಸ್ಥೆ ಫೆರಾರಿಯು ತನ್ನ ಬಹುನೀರಿಕ್ಷಿತ ಹೈಪರ್ ಕಾರು ಪರಿಚಯಿಸಲು ಸಜ್ಜುಗೊಂಡಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಈ ಹಿಂದಿನ F1 ಎಂಜಿನ್ ಸೌಲಭ್ಯ ಹೊಂದಿದ್ದ ಸೀಮಿತ ಆವೃತ್ತಿಯ ಕಾರು ಮಾದರಿಯನ್ನು ಬದಲಾವಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವ ಫೆರಾರಿ, ಇದಕ್ಕಾಗಿ ಮೂರು ವರ್ಷದ ಬೃಹತ್ ಯೋಜನೆ ರೂಪಿಸಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಹೊಸ ಆವಿಷ್ಕಾರಗಳೊಂದಿಗೆ ಸಿದ್ಧಗೊಂಡಿರುವ ಫೆರಾರಿ ಹೈಪರ್ ಕಾರುಗಳು ಮುಂಬರುವ ಮೂರು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆ ಲಗ್ಗೆಯಿಡಲಿದ್ದು, ಹೊಸ ಪೀಳಿಗೆಯ ಬೇಡಿಕೆಗೆ ತಕ್ಕಂತೆ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಹೊಸ ಆವೃತ್ತಿ ಪರಿಚಯಸುವ ಕುರಿತಂತೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಫೆರಾರಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಮಿಚೇಲ್ ಲೀಟೆರ್ಸ್, ಹೈಪರ್ ಕಾರು ಮಾದರಿಯೂ ಭಾರತೀಯ ಮಾರುಕಟ್ಟೆಯಲ್ಲೂ ಹೊಸ ನೀರಿಕ್ಷೆ ಹುಟ್ಟುಹಾಕುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಕೆಲವು ವರದಿಗಳ ಪ್ರಕಾರ ವಿನೂತನ ವಿನ್ಯಾಸ ಹೊಂದಿರುವ ಫೆರಾರಿ ಹೈಪರ್ ಕಾರು, ಫಾರ್ಮುಲಾ 1 ಎಂಜಿನ್ ಹಾಗೂ ಎಎಮ್‌ಜಿ ಮಾದರಿಗಿಂತಲೂ ವಿನೂತನ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿವೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಈ ಹಿಂದೆ ವಿಶ್ವಾದ್ಯಂತ ಹೊಸ ದಾಖಲೆ ಸೃಷ್ಠಿಸಿದ್ದ ಲಾ ಫೆರಾರಿ ಕಾರಿನ ಮುಂದಿನ ಆವೃತ್ತಿಯೇ ಹೈಪರ್ ಆವೃತ್ತಿ ಆಗಿದ್ದು, F50 ಆವೃತ್ತಿಗಿಂತಲೂ ವಿಭಿನ್ನ ಮಾದರಿಯನ್ನು ಹೊಂದಲಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಸೂಪರ್ ಕಾರುಗಳಿಂತಲೂ ಭಿನ್ನವಾಗಿರುವ ಹೈಪರ್ ಕಾರುಗಳು, ಸಾಮಾನ್ಯವಾಗಿ ಪೆಟ್ರೋಲ್ ಎಂಜಿನ್ ಹಾಗೂ ಹೈಬ್ರಿಡ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರುತ್ತವೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಇದೇ ಕಾರಣಕ್ಕಾಗಿ ವೇಗ ಮತ್ತು ಅತಿ ಹೆಚ್ಚು ಶಕ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 25000 ಆಪಿಎಂ ನಿಂದ 30000 ಆಪಿಎಂ ಉತ್ಪಾದನಾ ಶಕ್ತಿಯ ಗುರಿ ಹೊಂದಲಾಗಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಫೆರಾರಿಯ ಮತ್ತೊಂದು ಸೀಮಿತ ಆವೃತ್ತಿ F50 ಆವೃತ್ತಿಯ ಕೆಲವು ಹೋಲಿಕೆಗಳನ್ನು ಹೈಪರ್ ಆವೃತ್ತಿಯಲ್ಲಿ ಎರವಲು ಪಡೆಯಲಾಗಿದ್ದು, F1 ಎಂಜಿನ್ ಹೊರತಾಗಿ ವಿನೂತನ ಎಂಜಿನ್ ಉತ್ಪಾದಿಸುವ ಬೃಹತ್ ಯೋಜನೆ ಹೊಂದಲಾಗಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ವಿಶ್ವಾದ್ಯಂತ ಪ್ರತಿಷ್ಠಿತ 5 ಕಾರು ಉತ್ಪಾದಕರಿಂದ ಮಾತ್ರ ಹೈಪರ್ ಕಾರುಗಳು ಉತ್ಪಾದನೆಯಾಗುತ್ತಿದ್ದು, ಸದ್ಯ ಫೆರಾರಿ ಕೂಡಾ ಪ್ರತಿಷ್ಠಿತ ಕಾರು ಉತ್ಪಾದಕರ ಸಾಲಿನಲ್ಲಿ ನಿಲ್ಲಲಿದೆ. ಇದಕ್ಕಾಗಿ ಹೈಪರ್ ಕಾರು ಅಭಿವೃದ್ಧಿ ಬಗ್ಗೆ ಹತ್ತಾರು ಸಂಶೋಧನೆ ಕೂಡಾ ನಡೆಸಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಬರಲಿರುವ ಫೆರಾರಿ ಹೈಪರ್ ಕಾರು ಮಾದರಿಯೂ ಪೋರ್ಸೆ ಮತ್ತು ಮೆಕ್ಲಾರನ್ ಕಾರು ಆವೃತ್ತಿಗಳಿಗೆ ತೀವ್ರ ಸ್ವರ್ಧೆ ಒಡ್ಡುವ ತವಕದಲ್ಲಿದ್ದು, ಯುವ ಪೀಳಿಗೆಯ ಬೇಡಿಕೆಗಳನ್ನು ಪೂರೈಸುವ ನೀರಿಕ್ಷೆಯಲ್ಲಿದೆ.

ಮುಂದಿನ 3 ವರ್ಷಗಳ ನಂತರ ಫೆರಾರಿ ಹೈಪರ್ ಕಾರಿನದ್ದೇ ಹವಾ..!!

ಇನ್ನು ಹೈಪರ್ ಕಾರು ಮಾದರಿಗಳನ್ನು ಹಿಂದಿಕ್ಕಲು ಹವಣಿಸುತ್ತಿರುವ ಮರ್ಸಿಡಿಸ್ ಎಎಂಜಿ ಮತ್ತು ಆಸ್ಟನ್ ಮಾರ್ಟಿನ್ ಮಾದರಿಗಳಿಗೂ ನಡಕು ಹುಟ್ಟಿಸಿರುವ ಫೆರಾರಿ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಹೊಸ ದಾಖಲೆ ಹುಟ್ಟುಹಾಕುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
The LaFerrari's limited-edition replacement is set to be revealed in 3 to 5 years, and it won't have an F1 engine; however, it will boast of fresh innovations.
Story first published: Wednesday, May 10, 2017, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X