ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

Written By:

ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳು ಹತ್ತು ಹಲವು ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದು, ಈ ನಡುವೆ ಪ್ರತಿಷ್ಠಿತ ಫೋರ್ಡ್ ಸಂಸ್ಥೆಯು 1.5-ಲೀಟರ್ ಸಾಮರ್ಥ್ಯ ಹೊಸ ಎಂಜಿನ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಫೋರ್ಡ್ ನಿರ್ಮಾಣ ಮಾಡಿರುವ ಹೊಸ ಎಂಜಿನ್ ಅನ್ನು ಇದೀಗ ಪ್ರದರ್ಶನ ಕೂಡಾ ಮಾಡಲಾಗಿದ್ದು, 1.5-ಲೀಟರ್ ಟಿಐ-ವಿಟಿಸಿ ಎಂಜಿನ್ ಉತ್ಪಾದನೆಯು ಮುಂಬರುವ ಹೊಸ ಕಾರುಗಳ ಕಾರ್ಯಕ್ಷಮತೆಯನ್ನು ಅತ್ಯುತ್ತಮಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿದೆ.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಈ ಸಂಬಂಧ ತನ್ನ ಭವಿಷ್ಯ ಯೋಜನೆಗಳನ್ನು ಬಗೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮುಕ್ತ ಸಂವಾದ ನಡೆಸಿದ ಫೋರ್ಡ್ ಇಂಡಿಯಾ ಅಧಿಕಾರಿಗಳು, ಆಟೋ ಉದ್ಯಮದಲ್ಲೇ ಮೊದಲ ಬಾರಿಗೆ ಸುಧಾರಿತ ಮಾದರಿಯ ಎಂಜಿನ್ ಒಂದನ್ನು ಪರಿಚಯಿಸುತ್ತಿರುವ ಕುರಿತು ಮಾಹಿತಿ ನೀಡಿದೆ.

Recommended Video - Watch Now!
Datsun rediGO Gold 1.0-Litre Launched In India - DriveSpark
ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಇನ್ನು ಫೋರ್ಡ್ ನಿರ್ಮಾಣ ಮಾಡಿರುವ 1.5-ಲೀಟರ್ ಟಿಐ-ವಿಟಿಸಿ ಎಂಜಿನ್ ತ್ರಿ ಸಿಲಿಂಡರ್ ಮಾದರಿಯಾಗಿದ್ದು, 121.3-ಬಿಎಚ್‌ಪಿ ಮತ್ತು 150-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರುವುದು ಉತ್ತಮ ಕಾರ್ಯಕ್ಷಮತೆಯ ಗುಣ ಎನ್ನಬಹುದು.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಹೀಗಾಗಿ ಕಾರುಗಳು ಇಂಧನ ಕಾರ್ಯಕ್ಷಮತೆ ಕೂಡಾ ಹೆಚ್ಚಳವಾಗಲಿದ್ದು, ಈ ಹಿಂದಿನ ಮಾದರಿಗಳಿಂತ ಶೇ. 7 ರಷ್ಟು ಹೆಚ್ಚುವರಿ ಮೈಲೇಜ್ ನೀಡುವ ಬಗೆಗೆ ಫೋರ್ಡ್ ಇಂಡಿಯಾ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಇದರಿಂದಾಗಿ ಮುಂಬರುವ ಫೋರ್ಡ್ ನಿರ್ಮಾಣದ ಎಲ್ಲ ಪ್ರಿಮಿಯಂ ಕಾರು ಆವೃತ್ತಿಗಳಲ್ಲಿ ಹೊಸ ಎಂಜಿನ್ ಪರಿಚಯಿಸಲಾಗುತ್ತಿದ್ದು, 1.0-ಲೀಟರ್ ಇಕೋ ಬೂಸ್ಟ್ ನಿಂದ 5.0-ಲೀಟರ್ ವಿ8ಎಸ್ ಎಂಜಿನ್ ನಿರ್ಮಾಣದ ಗುರಿ ಕೂಡಾ ಹೊಂದಲಾಗಿದೆ.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಈ ನಿಟ್ಟಿನಲ್ಲಿ ಗುಜರಾತ್ ಸನಂದಾ ಫೋರ್ಡ್ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಎಂಜಿನ್ ತಯಾರಿಕೆ ಜೋರಾಗಿದ್ದು, ಪ್ರತಿ ವರ್ಷ 2.70 ಲಕ್ಷ ಎಂಜಿನ್ ನಿರ್ಮಾಣದ ಗುರಿ ಹೊಂದಲಾಗಿದೆ. ಇದು ಫೋರ್ಡ್ ನಿರ್ಮಾಣದ ಕಾರುಗಳು ಅಷ್ಟೇ ಅಲ್ಲದೇ ಇತರೆ ಸಂಸ್ಥೆಗಳ ಕಾರುಗಳಲ್ಲೂ ಪರಿಚಯಿಸುವ ಬಗ್ಗೆ ಸುಳಿವು ನೀಡಲಾಗಿದೆ.

ಮುಂಬರುವ ಕಾರುಗಳಲ್ಲಿ ಸುಧಾರಿತ ಎಂಜಿನ್‌ಗಳನ್ನು ಪರಿಚಯಿಸಲಿದೆ ಫೋರ್ಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಸಂಸ್ಧೆಯು ಸದ್ಯ 1.0-ಲೀಟರ್ ಎಂಜಿನ್‌ಗಳ ಕಾರು ಆವೃತ್ತಿಗಳಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದು, ಇನ್ನು 1.5-ಲೀಟರ್ ಸುಧಾರಿತ ಟಿಐ-ವಿಟಿಸಿ ಎಂಜಿನ್ ಪರಿಚಯಿಸಿದ್ದಲ್ಲಿ ಇದು ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Read more on ಫೋರ್ಡ್ ford
English summary
Read in Kannada about New 1.5-Litre Petrol Engine Revealed By Ford To Debut In Upcoming Ford Ecosport.
Story first published: Thursday, October 5, 2017, 19:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark