ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿವೆ ಫೋರ್ಡ್ ಕಾರುಗಳು

Written By:

ಕಾರುಗಳ ಮೈಲೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಮುಂದಾಗಿರುವ ಫೋರ್ಡ್ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಆವೃತ್ತಿಗಳನ್ನು ಡ್ರ್ಯಾಗನ್ ಫ್ಯಾಮಿಲಿ ಎಂಬ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿಲಿದೆ.

ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ಆಟೋ ಮೊಬೈಲ್ ಉದ್ಯಮದಲ್ಲಿ ಕಾರುಗಳ ಮೈಲೇಜ್ ಹೆಚ್ಚಳ ಕುರಿತು ದಿನಕ್ಕೊಂದು ಸಂಶೋಧನೆ ನಡೆಯುತ್ತಿದ್ದು, ಸದ್ಯ ಫೋರ್ಡ್ ಸಂಸ್ಥೆಯು ಕೂಡಾ ಒಂದು ಹೆಜ್ಜೆ ಮುಂದು ಹೋಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ.

ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ಈ ಬಗ್ಗೆ ಅಧಿಕೃತ ಮಾಹಿತಿ ಕೂಡಾ ಹೊರಬಿದ್ದಿದ್ದು, ಮುಂಬರುವ ದಿನಗಳಲ್ಲಿ ಫೋರ್ಡ್ ನಿರ್ಮಾಣದ ಎಲ್ಲಾ ಪೆಟ್ರೋಲ್ ಕಾರು ಮಾದರಿಗಳಲ್ಲೂ ಡ್ರ್ಯಾಗನ್ ಫ್ಯಾಮಿಲಿ ಎಂಬ ಎಂಜಿನ್ ಅಳವಡಿಕೆಯಾಗಲಿವೆ.

ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ಡ್ರ್ಯಾಗನ್ ಫ್ಯಾಮಿಲಿ ಎಂಬ ಎಂಜಿನ್ ಅಳವಡಿಕೆಯಿಂದ ಕಾರುಗಳ ಮೈಲೇಜ್ ಗಣನೀಯವಾಗಿ ಹೆಚ್ಚಳವಾಗಲಿದ್ದು, ಕಾರುಗಳ ನಿರ್ವಹಣಾ ವೆಚ್ಚವು ಕೂಡಾ ತಗ್ಗಲಿದೆ.

ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ಇನ್ನು ಸೆಪ್ಟೆಂಬರ್ 15ರಂದು ಬಿಡುಗಡೆ ಕಾಯ್ದಿರುವ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಪೆಟ್ರೋಲ್ ಆವೃತ್ತಿ ಕೂಡಾ ಡ್ರ್ಯಾಗನ್ ಫ್ಯಾಮಿಲಿ ಎಂಜಿನ್‌ನೊಂದಿಗೆ ಬರಲಿದ್ದು, ಪ್ರಸ್ತುತ ಮಾದರಿಗಳಿಗಿಂತ ಅಧಿಕ ಮೈಲೇಜ್ ನೀಡಲಿವೆ.

Recommended Video - Watch Now!
Jeep Compass Launched In India | In Hindi - DriveSpark हिंदी
ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ನೆಕ್ಟ್ಸ್ ಜನರೇಷನ್ ಫೋರ್ಡ್ ಫಿಗೋ, ಆಸ್ಪೈರ್ ಪೆಟ್ರೋಲ್ ಕಾರುಗಳ ಕೂಡಾ ಸುಧಾರಿತ ಡ್ರ್ಯಾಗನ್ ಫ್ಯಾಮಿಲಿ ಎಂಜಿನ್ ಪಡೆದುಕೊಳ್ಳಲಿದ್ದು, 1.5-ಲೀಟರ್, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ತ್ರಿ ಸಿಲಿಂಡರ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿವೆ.

ಡ್ರ್ಯಾಗನ್ ಫ್ಯಾಮಿಲಿ ಪೆಟ್ರೋಲ್ ಎಂಜಿನ್‌ ಪಡೆದುಕೊಳ್ಳಲಿವೆ ಫೋರ್ಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರುಗಳ ಮೈಲೇಜ್ ಹೆಚ್ಚಳಕ್ಕೆ ಹೊಸ ಯೋಜನೆ ಕೈಗೊಂಡಿರುವ ಫೋರ್ಡ್ ಕ್ರಮ ಉತ್ತಮವಾಗಿದ್ದು, ಎಲ್ಲಾ ಕಾರು ಉತ್ಪಾದಕರು ಕೂಡಾ ಇಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಅಗತ್ಯವಿದೆ.

Read more on ಫೋರ್ಡ್ ford
English summary
Read in Kannada about Ford To Debut New Dragon Family Petrol Engines In India.
Story first published: Friday, August 4, 2017, 14:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark