ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

Written By:

ಅಮೆರಿಕ ದೇಶದ ವಾಹನ ತಯಾರಕ ಕಂಪನಿ ಫೋರ್ಡ್ ತನ್ನ ಹೊಸ ಫಿಗೊ ಹ್ಯಾಚ್ ಬ್ಯಾಕ್ ಮತ್ತು ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕ್ರೀಡಾ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಎರಡೂ ಕಾರುಗಳು ಮತ್ತಷ್ಟು ಕಾಸ್ಮೆಟಿಕ್ ಪರಿಷ್ಕರಣೆಯೊಂದಿಗೆ ಅನಾವರಣಗೊಂಡಿದ್ದು, ಸ್ಪೋರ್ಟ್ಸ್ ಎಂಬ ಆಡಿಷನ್ ಟ್ಯಾಗ್‌ನೊಂದಿಗೆ ಬಿಡುಗಡೆಗೊಂಡಿದೆ. ಮುಂಭಾಗದಲ್ಲಿ ಎರಡೂ ಕಾರುಗಳು ಒಂದೇ ರೀತಿಯ ಹೋಲಿಕೆ ಹೊಂದಿದ್ದು, ಕಪ್ಪು ಬಣ್ಣದ ಫಿಶ್ ನೆಟ್ ಗ್ರಿಲ್ ಮತ್ತು ಹಿಂಭಾಗದಲ್ಲಿ ಸ್ಮೋಕ್ ಸ್ವೀಪ್ಟ್ ಹೆಡ್ ಲ್ಯಾಂಪ್ ಹೊಂದಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಮುಂಭಾಗದ ಬಂಪರ್ ಹೊಚ್ಚ ಹೊಸ ವಿನ್ಯಾಸದ ಸ್ನಾಯುವಿನ ರೀತಿಯ ಕೆತ್ತನೆಯ ಸಾಲುಗಳನ್ನು ಹೊಂದಿದ್ದು, ಕಪ್ಪು ಬಣ್ಣದ ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಒಳಗೆ ಗುಂಡಾಗಿರುವ ಫಾಗ್ ದೀಪಗಳು ಇರಿಸಲಾಗಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಫೋರ್ಡ್ ಫಿಗೊ ಕ್ರೀಡೆ ಆವೃತ್ತಿಯ ಪೆಟ್ರೋಲ್ ಕಾರಿನ ಬೆಲೆ ರೂ. 6,31 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಡೀಸೆಲ್ ಮಾದರಿ ರೂ. 7,21 ಲಕ್ಷ ಇರಲಿದೆ (ಎಕ್ಸ್ ಷೋ ರೂಂ ದೆಹಲಿ).

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಫೋರ್ಡ್ ಆಸ್ಪೈರ್ ಸ್ಪೋರ್ಟ್ಸ್ ಆವೃತ್ತಿಯ ಪೆಟ್ರೋಲ್ ಕಾರಿನ ಬೆಲೆ ರೂ. 6,50 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಡೀಸೆಲ್ ಮಾದರಿ ರೂ. 7,60 ಲಕ್ಷ ಇರಲಿದೆ (ಎಕ್ಸ್ ಷೋ ರೂಂ ದೆಹಲಿ). ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿಯ ಎರಡೂ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಇರಿಸಲಾಗಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಬಿಡುಗಡೆಯಾಗಿರುವ ಫೋರ್ಡ್ ಫಿಗೊ ಮತ್ತು ಆಸ್ಪೈರ್ ಎರಡೂ ಕಾರುಗಳಲ್ಲಿ ಅಳವಡಿಸಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ 113 ಏನ್ಎಂ ತಿರುಗುಬಲದಲ್ಲಿ 87 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಇನ್ನು ಫೋರ್ಡ್ ಫಿಗೊ ಮತ್ತು ಆಸ್ಪೈರ್ ಕಾರುಗಳ ಡೀಸೆಲ್ ಎಂಜಿನ್ 215 ಏನ್ಎಂ ತಿರುಗುಬಲದಲ್ಲಿ 99 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ ಹಾಗು ಎರಡೂ ಮಾದರಿಯ ಕಾರುಗಳಲ್ಲಿ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಮತ್ತೊಂದು ವಿಚಾರವೆಂದರೆ, ಸಾಮಾನ್ಯ ಆವೃತಿಯಲ್ಲಿ ಮತ್ತೊಂದು ಭಿನ್ನ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊರತರಲಾಗಿದ್ದು, ಈ ಎಂಜಿನ್ ಆಟೋಮ್ಯಾಟಿಕ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್(ಗೇರ್ ಬಾಕ್ಸ್) ಹೊಂದಿದೆ.

ಫೋರ್ಡ್ ಕಂಪನಿಯ ಫಿಗೊ ಮತ್ತು ಆಸ್ಪೈರ್ ಕ್ರೀಡೆ ಆವೃತ್ತಿ ಭಾರತದಲ್ಲಿ ಬಿಡುಗಡೆ

ಈ ಎಂಜಿನ್ ಆಟೋಮ್ಯಾಟಿಕ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್(ಗೇರ್ ಬಾಕ್ಸ್) ಹೊಂದಿರುವ 1.5-ಲೀಟರ್ ಎಂಜಿನ್ 110 ಅಶ್ವಶಕ್ತಿ ಉತ್ಪಾದಿಸಲಿದ್ದು, ಉತ್ತಮ ಪ್ರಯಾಣಕ್ಕೆ ಗುಣಮಟ್ಟದ ಸೂಸ್ಪೆನ್‌ಷನ್ ಇರಿಸಲಾಗಿದೆ.

Read more on ಫೋರ್ಡ್ ford
English summary
Ford Figo Sports Edition Petrol priced at Rs 6.31 lakh & the diesel is priced at Rs 7.21 lakh. The Ford Aspire Sports Edition Petrol priced at Rs 6.50 lakh and the diesel model at Rs 7.60 lakh.
Story first published: Monday, April 17, 2017, 16:02 [IST]
Please Wait while comments are loading...

Latest Photos