ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

Written By:

ಫೋರ್ಡ್ ಇಂಡಿಯಾ ಸಂಸ್ಥೆಯು ತನ್ನ ಹ್ಯಾಚ್‌ಬ್ಯಾಕ್ ಫಿಗೊ ಮತ್ತು ಫಿಗೊ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಸದ್ಯ ಫಿಗೊ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

ಈಗಾಗಲೇ ವಿಶಿಷ್ಟ ರೀತಿಯ ಕಾರುಗಳ ಮೂಲಕ ಭಾರತದಲ್ಲಿ ತನ್ನದೇ ರೀತಿಯ ಅಭಿಮಾನಿ ಬಳಗ ಪಡೆದುಕೊಂಡಿರುವ ಫೋರ್ಡ್ ಸಂಸ್ಥೆಯು ತನ್ನ ನವೀನ ಮಾದರಿಯ ವಾಹನಗಳಿಂದ ಮತ್ತಷ್ಟು ಜನಕ್ಕೆ ತಲುಪುವ ಯೋಜನೆ ಹೊಂದಿದ್ದು, ಮುಂದಿನ ಮಾದರಿಯ ಫಿಗೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

ಭಾರತೀಯ ರಸ್ತೆಗಳ ಮೇಲೆ ಕಾಣಿಸಿಕೊಂಡಿರುವ ಫಿಗೊ ಕಾರು ಕಪ್ಪು ಬಣ್ಣದ ಕ್ಲಾಡ್ಡಿಂಗ್ ವಿನ್ಯಾಸವನ್ನು ಪಡೆದುಕೊಂಡಿದೆ ಹಾಗು ಹಿಂದಿನ ಮಾದರಿಯ ಫೋರ್ಡ್ ಕಾರಿನ ಫೇಸ್‌ಲಿಫ್ಟ್ ಕ್ರೇಸ್‌ಓವರ್ ಆಧಾರಿತವಾಗಿದೆ.

ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

ಫಿಗೊ ಕ್ರಾಸ್ ಓವರ್ ಕಾರಿನಲ್ಲಿ ಕಪ್ಪು ಬಣ್ಣ ಪಡೆದ ಮಿಶ್ರಲೋಹದ ಚಕ್ರಗಳನ್ನು ಅಳವಡಿಕೆಯಾಗಿದೆ. ಆದರೆ, ಈ ಕಾರಿನಲ್ಲಿರುವ ಸಣ್ಣ ಗಾತ್ರದ ಚಕ್ರಗಳು ಕೊಂಚ ಮಟ್ಟಿಗೆ ಬೇಸರ ತರಿಸಬಹುದು.

ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

ಈ ಕ್ರಾಸ್ಒವರ್ ಕಾರು ರೂಫ್ ರೈಲ್ ಪಡೆಯುತ್ತದೆ. ಈ ಕಾರು ಹೆಚ್ಚು ಮರೆಮಾಚಲಾಗಿರುವ ಕಾರಣ ಕಾರಿನ ವಿನ್ಯಾಸದ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ ಎನ್ನವುದು ನಿಮ್ಮ ಗಮನಕ್ಕೆ ಬರಬಹುದು.

ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್

ದಕ್ಷಿಣ ಅಮೆರಿಕಾದಲ್ಲಿ ಫೋರ್ಡ್ ಸಂಸ್ಥೆಯು ಈಗಾಗಲೇ ಫೋರ್ಡ್ ಕಾ(ಫಿಗೊ) ಹ್ಯಾಚ್‌ಬ್ಯಾಕ್ ಕ್ರಾಸ್ಒವರ್ ಕಾರನ್ನು ಆಧರಿಸಿ ಅಭಿವೃದ್ಧಿಪಡಿಸಲಾದ ಕಾ ಟ್ರಯಲ್ ಕಾರನ್ನು ಬಿಡುಗಡೆಗೊಳಿಸಿದ್ದು, ಅಮೆರಿಕನ್ ತಯಾರಕ ಸಂಸ್ಥೆಯು ಈ ಫಿಗೊ ಕಾರಿನ ಅಪ್ಡೇಟ್ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ ಎನ್ನಲಾಗಿದೆ.

Read more on ಫೋರ್ಡ್ ford
English summary
Ford India is already working on the mid-cycle update for the Figo hatchback and Figo Aspire compact sedan. Now, popolar website has spotted a new variant of the Figo in the country.
Story first published: Wednesday, August 16, 2017, 14:01 [IST]
Please Wait while comments are loading...

Latest Photos