ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

Written By:

ಫೋರ್ಡ್ ನಿರ್ಮಾಣದ ಕೆಲವು ಕಾರು ಮಾದರಿಗಳಲ್ಲಿ ಮಾಲಿನ್ಯ ನಿಯಂತ್ರಣ ಸಾಧನಗಳ ಅಳವಡಿಕೆಯಲ್ಲಿ ಲೋಪ ಕಂಡುಬಂದಿದ್ದು, ಈ ಹಿನ್ನೆಲೆ ಜರ್ಮನ್ ಸಾರಿಗೆ ಇಲಾಖೆ ಉತ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

To Follow DriveSpark On Facebook, Click The Like Button
 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಜರ್ಮನ್ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಫೋರ್ಡ್ ನಿರ್ಮಾಣದ ಮ್ಯಾಂಡಿಯೋ ಸೆಡಾನ್ ಆವೃತ್ತಿಯಲ್ಲಿ ಕೆಲವು ದೋಷಗಳು ಕಂಡುಬಂದಿರುವ ಹಲವು ಅನುಮಾನಗಳಿಗೆ ಎಡೆಮಾಡಿದೆ.

 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಮಾಲಿನ್ಯ ಹೋರಸೂಸುವಿಕೆ ಸಂಬಂಧಿಸಿದ ಮಾಹಿತಿ ನೀಡಬಲ್ಲ ಸಾಧನಗಳ ಅಳವಡಿಕೆಯಲ್ಲಿ ಕೆಲವು ದೋಷಗಳು ಕಂಡುಬಂದಿದ್ದು, ಮ್ಯಾಂಡಿಯೋ ಸೆಡಾನ್ ಆವೃತ್ತಿಯಲ್ಲೇ ಹೆಚ್ಚಿನ ದೋಷಗಳು ಕಂಡಬಂದಿರುವ ವರದಿಯಾಗಿದೆ.

 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಇತ್ತೀಚೆಗಷ್ಟೇ ಮ್ಯಾಂಡಿಯೋ ಸೆಡಾನ್ ಆವೃತ್ತಿಯನ್ನು ಯುರೋಪ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಿದ್ದ ಫೋರ್ಡ್, ಸುರಕ್ಷಾ ಸಂಬಂಧಿತ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಮಾದರಿ ಎಂದು ಪರಿಗಣಿಸಲಾಗಿತ್ತು.

 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಆದ್ರೆ ಗ್ರಾಹಕರ ದೂರಿನ್ವಯ ತನಿಖೆ ಕೈಗೊಂಡಿದ್ದ ಸಾರಿಗೆ ಸಚಿವಾಲಯವು ಪ್ರಾಥಮಿಕ ವರದಿಯಲ್ಲಿ ದೋಷಗಳಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಉನ್ನತ ತನಿಖೆ ಕೈಗೊಳ್ಳಲಾಗಿದೆ.

 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಒಂದು ವೇಳೆ ತಪ್ಪು ಸಾಬೀತಾದಲ್ಲಿ ಫೋರ್ಡ್ ಉತ್ಪನ್ನಗಳಿಗೆ ಮತ್ತೊಂದು ಸಂಕಷ್ಟ ಎದುರಾಗಲಿದ್ದು, ಮಾಲಿನ್ಯ ತಡೆ ನಿಟ್ಟಿನಲ್ಲಿ ಮತ್ತಷ್ಟು ಹೊಸ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದಲ್ಲದೇ ಹೊಸ ಸಾಧನಗಳ ಅಳವಡಿಕೆಗಾಗಿ ನೂರಾರು ಕೋಟಿ ಖರ್ಚು ಮಾಡಬೇಕಾದ ಪರಿಸ್ಥಿತಿ ಕೂಡಾ ಬರಬಹದು.

 ಮಾಲಿನ್ಯ ತಡೆಯುವಲ್ಲಿ ವಿಫಲ- ಫೋರ್ಡ್ ವಿರುದ್ಧ ತನಿಖೆ ಶುರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಮಾಲಿನ್ಯ ತಡೆ ಸಾಧನಗಳ ಅಳವಡಿಕೆಯಲ್ಲಿ ಮಹಾವಂಚನೆ ಮಾಡಿದ್ದ ಫೋಕ್ಸ್‌ವ್ಯಾಗನ್ ನೂರಾರು ಕೋಟಿ ದಂಡ ತೆತ್ತ ಬೆನ್ನಲ್ಲೇ ಇದೀಗ ಫೋರ್ಡ್ ಉತ್ಪನ್ನಗಳಲ್ಲೂ ಇಂತದ್ದೇ ಸಮಸ್ಯೆ ಕಂಡುಬಂದಿದ್ದು, ಪೂರ್ಣ ತನಿಖೆ ನಂತರವಷ್ಟೇ ನಿಜಾಂಶ ಬಯಲಾಗಬೇಕಿದೆ.

Read more on ಫೋರ್ಡ್ ford
English summary
Read in Kannada about Ford Mondeo Under The Scanner In Germany Over Emission Testing.
Story first published: Friday, August 11, 2017, 15:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark