ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

Written By:

ಮೋಟಾರ್ ಸೈಕಲ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ನಿಟ್ಟಿನಲ್ಲಿ ಪ್ರತಿಷ್ಠಿತ ಜಿಪಿ ಪೆಟ್ರೋಲಿಯಂ ಸಂಸ್ಥೆಯು ರೆಪ್ಸಾಲ್ ಸಿಂಥಟಿಕ್ ಎಂಜಿನ್ ಆಯಿಲ್ ಬಿಡುಗಡೆ ಮಾಡಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ಖರೀದಿಗೆ ಲಭ್ಯವಾಗಿದೆ.

To Follow DriveSpark On Facebook, Click The Like Button
ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಯುಎಇ ಮೂಲದ ಜಿಪಿ ಪೆಟ್ರೋಲಿಯಂ ಸಂಸ್ಥೆಯು ಕಳೆದ ಒಂದು ದಶಕದಿಂದ ಮೋಟಾರ್ ಸೈಕಲ್ ಎಂಜಿನ್ ಆಯಿಲ್ ಉತ್ಪಾದನೆಗಳಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದು, ಇದೀಗ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ರೆಪ್ಸಾನ್ ಸಿಂಥಟಿಕ್ ತೈಲ ಉತ್ಪನ್ನವನ್ನು ಪರಿಚಯಿಸಿದೆ.

ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಜಿಪಿ ಪೆಟ್ರೋಲಿಯಂ ಬಿಡುಗಡೆ ಮಾಡಿರುವ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್ ಉತ್ಪನ್ನವು ವಿಶ್ವದರ್ಜೆ ಮಾನ್ಯತೆಯನ್ನು ಪಡೆದಿದ್ದು, ಸದ್ಯ ಮೋಟೋ 4 ಟಿ ಸಿಂಟೆಟಿಕ್ 10ಡಬ್ಲ್ಯು-50 ಹಾಗೂ ಬ್ಲೆಂಡ್ ಎಂಜಿನ್ ತೈಲ ' ಮೋಟೋ 4 ಟಿ ಸ್ಪೋರ್ಟ್ ಎಕ್ಸ್ಟಿಐ 15 ಡಬ್ಲ್ಯು -50' ಖರೀದಿಗೆ ಲಭ್ಯವಿದೆ.

ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಜಿಪಿ ಪೆಟ್ರೋಲಿಯಂ ಸಂಸ್ಥೆಯಿಂದ ಕೇವಲ ಮೋಟಾರ್ ಆಯಿಲ್ ಉತ್ಪನ್ನಗಳಷ್ಟೇ ಅಲ್ಲದೇ ಪ್ರಯಾಣಿಕರ ಕಾರುಗಳ ತೈಲ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲೈಟ್ ಫಾರ್ಮುಲಾ ಸೂಪರ್ 15 ಡಬ್ಲ್ಯು 40 ಮತ್ತು ಡೀಸೆಲ್ ಎಂಜಿನ್‌ಗಳಿಗಾಗಿ ಸೂಪರ್ ಟರ್ಬೋ 15 ಡಬ್ಲ್ಯೂ 4 ಸಿಎಚ್ 4 ಬಿಡುಗಡೆಗೊಳಿಸಲಾಗಿದೆ.

ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಇನ್ನೊಂದು ವಿಶೇಷ ಅಂದ್ರೆ ರೆಪ್ಸಾಲ್ ಸಂಶ್ಲೇಷಿತ ತೈಲಗಳನ್ನು ಹೆಚ್ಚಿನ ಸಾಮರ್ಥ್ಯದ ನಾಲ್ಕು-ಸ್ಟ್ರೋಕ್ ಎಂಜಿನ್ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮೋಟಾರ್ ಸೈಕಲ್‌ಗಳ ಕ್ಲಚ್ ಮತ್ತು ಗೇರ್‌ಬಾಕ್ಸ್‌ಗಳಲ್ಲಿನ ನಿರ್ದಿಷ್ಟ ಗಮನವನ್ನು ಹೊಂದಿರುವ ಎಲ್ಲಾ ಎಂಜಿನ್ ಘಟಕಗಳಿಗೆ ಗರಿಷ್ಟ ರಕ್ಷಣೆ ನೀಡುತ್ತದೆ.

ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಈ ಬಗ್ಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಪಿ ಪೆಟ್ರೋಲಿಯಮ್ಸ್ ಸಿಇಒ ಹರಿಪ್ರಕಾಶ್, "ಸಿಂಥೆಟಿಕ್ ಆಯಿಲ್ ಉತ್ಪನ್ನ ಮಾರುಕಟ್ಟೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಂದು ಉತ್ಪನ್ನವಾಗಿದ್ದು, ಈ ನಿಟ್ಟಿನಲ್ಲಿ ರೆಪ್ಸಾಲ್ ಉತ್ಪನ್ನವು 150 ಸಿಸಿ ಕ್ಕಿಂತ ಹೆಚ್ಚಿನ ಬೈಕುಗಳನ್ನು ಗುರಿಹೊಂದಿದೆ" ಎಂದಿದ್ದಾರೆ.

ಸುಖಕರ ಪ್ರಯಾಣಕ್ಕೆ ಬಂದಿದೆ ರೆಪ್ಸಾಲ್ ಸಿಂಥಟಿಕ್ ಮೋಟಾರ್ ಸೈಕಲ್ ಆಯಿಲ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಫುಡ್ ಗ್ರೇಡ್ ಲ್ಯುಬ್ರಿಕೆಂಟ್ಸ್ ಉತ್ಪನ್ನಗಳಲ್ಲಿ ರೆಪ್ಸಾಲ್ ಕೂಡಾ ಮುಂಚೂಣಿಯಲ್ಲಿದ್ದು, ಸದ್ಯ ಭಾರತೀಯ ಗ್ರಾಹಕರು ಖರೀದಿಸಬಹುದಾಗಿದೆ. ಜೊತೆಗೆ ಇದು ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

English summary
Read in Kannada about GP Petroleums Launches Repsol Motorcycle Synthetic Engine Oil In India.
Story first published: Monday, September 18, 2017, 12:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark