ಜುಲೈ 31ರಂದು ಬಿಡುಗಡೆಯಾಗುತ್ತಿರುವ ಜೀಪ್ ಕಂಪಾಸ್ ವಿಶೇಷತೆ ಏನು?
ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಉತ್ಪಾದನೆಯಾಗಿರುವ 2017ರ ಜೀಪ್ ಕಂಪಾಸ್ ಇದೇ ತಿಂಗಳು 31ಕ್ಕೆ ಬಿಡುಗಡೆಯಾಗುತ್ತಿದ್ದು, ಹತ್ತು ವಿಶೇಷತೆಗಳಿಗೆ ಕಾರಣವಾಗಿರುವ ಜೀಪ್ ಕಂಪಾಸ್ ಮಾಹಿತಿ ಇಲ್ಲಿದೆ.
ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಉತ್ಪಾದನೆಯಾಗಿರುವ 2017ರ ಜೀಪ್ ಕಂಪಾಸ್ ಇದೇ ತಿಂಗಳು 31ಕ್ಕೆ ಬಿಡುಗಡೆಯಾಗುತ್ತಿದ್ದು, ಹತ್ತು ವಿಶೇಷತೆಗಳಿಗೆ ಕಾರಣವಾಗಿರುವ ಜೀಪ್ ಕಂಪಾಸ್ ಮಾಹಿತಿ ಇಲ್ಲಿದೆ.

ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ಧಿ ಮಾಡುತ್ತಿರುವ ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯೂ ಈಗಾಗಲೇ ಅತಿಹೆಚ್ಚು ಮುಂಗಡ ಪಡೆದುಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಐಷಾರಾಮಿ ಎಸ್‌ಯುವಿ ಮಾದರಿಗಳಲ್ಲೇ ಅಗ್ಗದ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಗಳು ಕೂಡಾ ಇವೆ.

ಎಸ್‌ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಬಲಾಡ್ಯತೆಯನ್ನು ಹೊಂದಿರುವ ಜೀಪ್ ಕಂಪಾಸ್, ವಿಶೇಷ ಹೊರ ವಿನ್ಯಾಸಗಳಿಂದಾಗಿ ಯಾರನ್ನೇ ಆಗಲಿ ಮೋಡಿ ಮಾಡದೆ ಇರಲಾರದು.

ಜೀಪ್ ಕಂಪಾಸ್‌ನ ಎಲ್‌ಇಡಿ ಹೆಡ್‌ಲ್ಯಾಂಪ್, ಅತ್ಯಾಕರ್ಷಕ ಬಂಪರ್ ವಿನ್ಯಾಸ ಮತ್ತು ಉತ್ತಮ ಮಾದರಿ ಗ್ರೀಲ್ ವಿನ್ಯಾಸಗಳು ಹೊಸ ಕಾರಿನ ಅಂದವನ್ನು ಹೆಚ್ಚಿಸಿದ್ದು, 16-ಇಂಚಿನ ಫೈರ್ ಸ್ಟೋನ್ ಟೈರ್ ವ್ಯವಸ್ಥೆ ಹೊಂದಿದೆ.

ಒಳ ಮತ್ತು ಹೊರ ವಿನ್ಯಾಸ
ಸ್ಕೈ ಗ್ರೇ ಲೆದರ್ ಸೀಟುಗಳೊಂದಿಗೆ ಐಷಾರಾಮಿ ಒಳವಿನ್ಯಾಸವನ್ನು ಹೊಂದಿರುವ ಜೀಪ್ ಕಂಪಾಸ್, ಸಾಕಷ್ಟು ಸ್ಥಳಾವಕಾಶ ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್ ಟೋನ್ಡ್ ಕಲರ್ ಥೀಮ್ ಲುಕ್ ನೀಡಲಾಗಿದೆ.

ಸ್ಪೋರ್ಟ್ ಲುಕ್ ಸಹ ಹೊಂದಿರುವ ಜೀಪ್ ಕಂಪಾಸ್, 3ಡಿ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಹಿಂಬದಿಯ ಸೀಟು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ.

ಸ್ಟೇರಿಂಗ್ ವಿಲ್ಹ್ ಕೂಡಾ ಲೆದರ್ ಕೊಟಿಂಗ್ ಪಡೆದುಕೊಳ್ಳುವ ಜೀಪ್ ಕಂಪಾಸ್ ಖದರ್ ಹೆಚ್ಚಿಸಿದ್ದು, ವಿವಿಧ ಮಾಹಿತಿ ಒಂದೇ ಸೂರಿನಡಿ ನೀಡ ಬಲ್ಲ ದೊಡ್ಡ ಸ್ಕ್ರೀನ್ ಇರಿಸಲಾಗಿದೆ.

ದರಗಳನ್ನು ಆಧರಿಸಿ ವಿವಿಧ ಆವೃತ್ತಿಗಳಲ್ಲಿ ಲಭ್ಯವಿರುವ ಜೀಪ್ ಕಂಪಾಸ್, ಉನ್ನತ ಮಟ್ಟದ ಕಾರು ಆವೃತ್ತಿ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೀಗಾಗಿ ಸ್ಪೋರ್ಟ್ ಆವೃತ್ತಿಯಲ್ಲಿ ಮಾತ್ರ ನೆವಿಗೆಷನ್ ಸೌಲಭ್ಯ ಒದಗಿಸಲಾಗಿದೆ.

ಇನ್ನು ಡ್ಯುಯಲ್ ಜೋನ್ ಏರ್ ಕಂಡೀಷನರ್ ಇದ್ದು, ಅಗತ್ಯ ಸಂದರ್ಭಗಳಲ್ಲಿ ಕಾರು ಚಾಲನೆಯ ಮೂಡ್ ಬದಲಾಯಿಸಿ ಆಪ್-ರೋಡ್ ಮೂಡ್‌ನಲ್ಲಿ ಚಾಲನೆ ಮಾಡಬಹುದಾಗಿದೆ.

ಸುರಕ್ಷಾ ವೈಶಿಷ್ಟ್ಯತೆಗಳು
ಜೀಪ್ ಕಂಪಾಸ್‌ನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್ ಹಾಗೂ ಎಬಿಎಸ್ ತಂತ್ರಜ್ಞಾನ ಸೌಲಭ್ಯ ಕಲ್ಪಿಸಲಾಗಿದೆ.

ಎಂಜಿನ್ ಸಾಮರ್ಥ್ಯ
2-ಲೀಟರ್ ಟರ್ಬೋ ಚಾಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಜೀಪ್ ಕಂಪಾಸ್, 171ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಅದೇ ರೀತಿಯಾಗಿ 1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿ ಕೂಡಾ ಆಯ್ಕೆ ಮಾಡಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 160ಬಿಎಚ್‌ಪಿ ಹಾಗೂ 250ಎನ್‌ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಜೀಪ್ ಕಂಪಾಸ್, ಹಿಂದಿನ ಮಾದರಿಗಳಿಂತಲೂ ಅಗಲವಾದ ಬೂಟ್ ಸ್ಪೇಸ್ ಹೊಂದಿದೆ.

ಹೀಗಾಗಿ ಆಪ್ ರೋಡಿಂಗ್ ಮತ್ತು ಸಾಮಾನ್ಯ ಚಾಲನೆಯಲ್ಲೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶನ ನೀಡ ಸಾಮರ್ಥ್ಯ ಹೊಂದಿರುವ ಜೀಪ್ ಕಂಪಾಸ್, ಆಕ್ಟಿವ್ ಡ್ರೈವ್ 4x4 ಸೌಲಭ್ಯ ಪಡೆದುಕೊಂಡಿದೆ.

ಬೆಲೆಗಳು
ಜೀಪ್ ಕಂಪಾಸ್ ದರಗಳ ಬಗೆಗೆ ಗಮಿಸುವುದಾರರೇ ಆರಂಭಿಕ ಕಾರು ಆವೃತ್ತಿಗಳನ್ನು ರೂ.15 ಲಕ್ಷದಿಂದ ರೂ.16ಲಕ್ಷಕ್ಕೆ ಬಿಡುಗಡೆ ಮಾಡಲಿರುವ ಜೀಪ್ ಸಂಸ್ಥೆಯು ಉನ್ನತ ಕಾರು ಆವೃತ್ತಿಗಳನ್ನು ರೂ.25 ಲಕ್ಷದಿಂದ ರೂ.26 ಲಕ್ಷಕ್ಕೆ ಪರಿಚಯಿಸುವ ಸಾಧ್ಯತೆಗಳಿವೆ.

ಮೇಡ್ ಇನ್ ಇಂಡಿಯಾ ಹೆಗ್ಗಳಿಕೆ
ಹೌದು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್, ಹಿಂದಿನ ಕಾರು ಆವೃತ್ತಿಗಳಿಂತಲೂ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹತ್ತು ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಜೀಪ್ ಕಂಪಾಸ್, ದೇಶಿಯವಾಗಿ ಅಭಿವೃದ್ದಿಗೊಳ್ಳುವ ಮೂಲಕ ಇತರೆ ಕಾರು ಮಾದರಿಗಳಿಂತ ಭಿನ್ನತೆ ಪಡೆದುಕೊಂಡಿದೆ. ಹೀಗಾಗಿ ಇದೊಂದು ಉತ್ತಮ ಎಸ್‌ಯುವಿ ಮಾದರಿಯಾವುದರಲ್ಲಿ ಯಾವುದೇ ಸಂದೇಹವಿಲ್ಲ.


Click it and Unblock the Notifications