ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ

Written By:

ಅಮೆರಿಕಾದ ವಾಹನ ತಯಾರಕ ಜೀಪ್ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ಕಾಂಪಸ್ ಕಾರನ್ನು ಭಾರತದಲ್ಲಿ ಪ್ರಾರಂಭಿಸಲಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಇತ್ತೀಚಿಗೆ ಭಾರತದಲ್ಲಿ ಜೀಪ್ ವಾಹನ ತಯಾರಿಕಾ ಕಂಪನಿಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸತತ ಪ್ರಯತ್ನ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಕಾರನ್ನು ಭಾರತದಲ್ಲಿ ಪರಿಚಯ ಮಾಡಲು ಸಿದ್ಧವಾಗಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಬಿಡುಗಡೆಗೂ ಮೊದಲು ಜೀಪ್ ಸಂಸ್ಥೆ ತನ್ನ ನೆಚ್ಚಿನ ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಭಾರತದಲ್ಲಿ ಪ್ರದರ್ಶನ ಮಾಡಿದ್ದು ಈ ಬಗ್ಗೆ ಹೆಚ್ಚಿನ ವಿವರ ಈ ಲೇಖನದಲ್ಲಿ ತಿಳಿಸಲಾಗಿದ್ದು, ಕಾರಿನ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳಿ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಕಾಂಪಸ್ ಕಾರಿನ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಜೀಪ್ ಸಂಸ್ಥೆ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಐದು ರೂಪಾಂತರಗಳಲ್ಲಿ ಬಿಡುಗಡೆಗೊಳ್ಳಲಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಸ್ಪೋರ್ಟ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್(O), ಲಿಮಿಟೆಡ್ ಮತ್ತು ಲಿಮಿಟೆಡ್(O) ಎಂಬ ನಾಲ್ಕು ವಿಧದಲ್ಲಿ ನಿಮ್ಮ ಮುಂದೆ ಬರಲಿದೆ. ಟರ್ಬೊ ಚಾರ್ಜ್ಡ್ 2-ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಈ ಕಾಂಪಸ್ ಕಾರು ಲಭ್ಯವಿರುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಟರ್ಬೊ ಚಾರ್ಜ್ಡ್ 2-ಲೀಟರ್ ಡೀಸೆಲ್ ಕಾರು 350ಏನ್‌ಎಂ ತಿರುಗುಬಲದಲ್ಲಿ 170ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಟರ್ಬೊ ಚಾರ್ಜ್ಡ್ 1.4-ಲೀಟರ್ ಪೆಟ್ರೋಲ್ ಕಾರು 250ಏನ್‌ಎಂ ತಿರುಗುಬಲದಲ್ಲಿ 160ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಕಾಂಪಸ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಹೊಂದಿರುವ ಬೇಸ್ ಸ್ಪೋರ್ಟ್ಸ್ ಆವೃತಿಯು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಸ್ಪೋರ್ಟ್ ಮಾದರಿಯಲ್ಲಿ 5-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 16-ಇಂಚಿನ ಮಿಶ್ರಲೋಹದ ಚಕ್ರಗಳು, ಎಲೆಕ್ಟ್ರಿಕ್ ಓಆರ್‌ಎಂವಿಗಳು ಮತ್ತು ವಿದ್ಯುತ್ ಪಾರ್ಕಿಂಗ್ ಬ್ರೇಕ್‌ಗಳನ್ನು ಹೊಂದಿದೆ.

ಬಿಡುಗಡೆಗೊಳ್ಳಲಿರುವ ಜೀಪ್ ಕಾಂಪಸ್ ಕಾರಿನ ವಿಶೇಷತೆ ಇಲ್ಲಿದೆ ಜಿಪ್

ಸುರಕ್ಷತೆ ಮುಂಭಾಗದಲ್ಲಿ, ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಡಿ ಮತ್ತು ಟಿಸಿಎಸ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸ್ಪೋರ್ಟ್ ರೂಪಾಂತರ ಬಿಡುಗಡೆಗೊಳ್ಳಲಿದೆ.

Read more on jeep ಜೀಪ್
English summary
Read in Kannada about American automaker Jeep is all set to launch its compact SUV, the Compass in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark